ಒಂದು ದಿನ ಗೂಬೆ ಅರ್ಧ ಕಣ್ಣು ಮುಚ್ಚಿಕೊಂಡು ಏನೋ ಯೋಚನೆ ಮಾಡುತ್ತಿರುವಂತೆ ಕುಳಿತಿತ್ತು. ಆಗ ಪಕ್ಕದ ಕಾಡಿನಿಂದ ಬಂದ ಕೋಗಿಲೆಯೊಂದು ಅದೇ ಮರದ ಇನ್ನೊಂದು ಕೊಂಬೆಯಲ್ಲಿ ಕುಳಿತು ತನ್ನ ಇಂಪಾದ ಧ್ವನಿಯಲ್ಲಿ ಹಾಡಲಾರಂಭಿಸಿತು.
ಒಂದೂರಿನಲ್ಲಿ ಒಂದು ದೊಡ್ಡ ಗ್ರಂಥಾಲಯವಿತ್ತು. ಗೂಬೆಯೊಂದು ಅಲ್ಲಿಯೇ ವಾಸವಾಗಿತ್ತು. ಗೂಬೆ ದಿನವೂ ಪುಸ್ತಕ ಓದಿಕೊಂಡು ಮಹಾಜ್ಞಾನಿ ಎಂದು ಹೆಸರು ಮಾಡಿತ್ತು. ಊರಿನಲ್ಲಿ ಏನು ತೊಂದರೆ ಬಂದರೂ ಗೂಬೆ ಪರಿಹಾರ ಹೇಳುತ್ತಿತ್ತು. ಈ ಕಾರಣಕ್ಕೆ ಲೋಕಜ್ಞಾನದಲ್ಲಿ ನನ್ನನ್ನು ಮೀರಿಸುವವರಿಲ್ಲಾ ಎಂದು ಅದು ಬೀಗುತ್ತಿತ್ತು. ಕಾಡಿನಲ್ಲಿ ತನಗಿಂತ ಬುದ್ಧಿವಂತ ಜೀವಿಗಳಿಲ್ಲ ಎಂದು ಅದು ಭಾವಿಸಿತ್ತು.
ಯಾವಾಗಲೂ ಓದಿ ಓದಿ ಮರದ ಕೊಂಬೆಯ ಮೇಲೆ ಏನೋ ಆಳವಾದ ಯೋಚನೆಯಲ್ಲಿರುವಂತೆ ಕೂರುತಿತ್ತು. ಬೇರೆ ಪ್ರಾಣಿ ಪಕ್ಷಿಗಳು ಮಾತನಾಡಿಸಿದರೂ ಪ್ರತಿಕ್ರಿಯಿಸುತ್ತಿರಲಿಲ್ಲ. ತಾನು ಅವರೊಂದಿಗೆ ಮಾತನಾಡಿದರೆ ತನ್ನ ಬೆಲೆ ಕಡಿಮೆಯಾಗುವುದೆಂದು ಮುಖ ತಿರುಗಿಸುತ್ತಿತ್ತು. ಒಂದು ದಿನ ಗೂಬೆ ಅರ್ಧ ಕಣ್ಣು ಮುಚ್ಚಿಕೊಂಡು ಏನೋ ಯೋಚನೆ ಮಾಡುತ್ತಿರುವಂತೆ ಕುಳಿತಿತ್ತು. ಆಗ ಪಕ್ಕದ ಕಾಡಿನಿಂದ ಬಂದ ಕೋಗಿಲೆಯೊಂದು ಅದೇ ಮರದ ಇನ್ನೊಂದು ಕೊಂಬೆಯಲ್ಲಿ ಕುಳಿತು ತನ್ನ ಇಂಪಾದ ಧ್ವನಿಯಲ್ಲಿ ಹಾಡಲಾರಂಭಿಸಿತು. ಅರ್ಧ ಕಣ್ಣು ತೆರೆದ ಗೂಬೆ ಕೋಗಿಲೆಯನ್ನು ಕುರಿತು, “ಓ ಕೋಗಿಲೆಯೆ, ನಿನ್ನ ಕರ್ಕಶ ಹಾಡನ್ನು ಸ್ವಲ್ಪ ನಿಲ್ಲಿಸುತ್ತೀಯಾ? ನಾನು ಏನೋ ಗಹನವಾದ ವಿಚಾರದ ಬಗ್ಗೆ ಯೋಚಿಸುತ್ತಿರುವೆ. ನಿನ್ನ ಈ ಹಾಡಿನಿಂದ ನನ್ನ ಯೋಚನಾ ಲಹರಿಗೆ ತೊಂದರೆಯಾಗುತ್ತಿದೆ’ ಎಂದಿತು.
ಇದರಿಂದ ಕೋಪಗೊಂಡ ಕೋಗಿಲೆ, “ನನ್ನ ಹಾಡು ನಿನಗೆ ಕರ್ಕಶವಾಗಿ ಕೇಳಿಸುತ್ತಿದೆಯೆ? ನಿನಗೆ ಪ್ರಪಂಚ ಜ್ಞಾನವಿಲ್ಲವೆನ್ನಿಸುತ್ತಿದೆ. ಮೂರ್ಖ ಗೂಬೆಯೇ, ಬರೀ ಪುಸ್ತಕಗಳನ್ನು ಓದಿದರೆ ಸಾಲದು. ಬರೀ ಪುಸ್ತಕಗಳನ್ನು ಓದಿ ಕಣ್ಣುಮುಚ್ಚಿ ಕುಳಿತರೆ ಏನೂ ಆಗುವುದಿಲ್ಲ. ಹೊರಗಿನ ಪ್ರಪಂಚ ಜ್ಞಾನವೂ ಇರಬೇಕು. ನೀನು ಪುಸ್ತಕದಲ್ಲಿ ಕಲಿತದ್ದೆಲ್ಲಾ ಸಹಾಯಕ್ಕೆ ಬರೋದು ಹೊರ ಪ್ರಪಂಚದಲ್ಲಿ ಆ ವಿಚಾರಗಳನ್ನು ಅಳವಡಿಸಿದಾಗ ಮಾತ್ರ.’ ಎಂದಿತು. ಗೂಬೆಗೆ ಏನು ಹೇಳಬೇಕೆಂದು ತೋಚಲೇ ಇಲ್ಲ. ಪಂಡಿತನೆಂದು ಬೀಗುತ್ತಿದ್ದ ಗೂಬೆಯ ಬಾಯಿ ಮುಚ್ಚಿಸಿದ ಕೋಗಿಲೆಯತ್ತ ಎಲ್ಲರೂ ಆಶ್ಚರ್ಯದ ನೋಟ ಬೀರಿದವು. ಕೋಗಿಲೆ ಮಾತನ್ನು ಮುಂದುವರಿಸಿತು “ನನ್ನ ಗಾನಕ್ಕೆ ಮರುಳಾಗದವರಿÇÉ. ವಸಂತ ಮಾಸದಲ್ಲಿ ನನ್ನ ಧ್ವನಿಯನ್ನು ಕೇಳಲು ಜನ ಕಾತರರಾಗಿ ಕಾಯುತ್ತಿರುತ್ತಾರೆ. ಅನೇಕ ಕವಿಗಳು, ಪಂಡಿತರು ನನ್ನ ಕುರಿತೇ ಕವನಗಳನ್ನು ರಚಿಸಿ¨ªಾರೆ. ನನ್ನ ಮಧುರವಾದ ಧ್ವನಿಯನ್ನು ನಿಜವಾಗಲೂ ಹೊಗಳಲು ಬಹಳ ಮಂದಿ ಇದ್ದಾರೆ.’ ಎನ್ನುತ್ತಾ ಹಾರಿಹೋಯಿತು. ಗೂಬೆ ಪೆಚ್ಚಾಗಿ ಕೂತಿತು. ಆವತ್ತಿನಿಂದ ಜನರೊಂದಿಗೆ ಬೆರೆಯಲು ಪ್ರಾರಂಭಿಸಿತು. ಕಾಡಿನ ಪ್ರಾಣಿಗಳು ಗೂಬೆಯ ಮನ ಪರಿವರ್ತನೆ ಮಾಡಿದ ಆ ಕೋಗಿಲೆಗೆ ಅಭಿನಂದನೆ ಸಲ್ಲಿಸಿದವು.
ಪ್ರಕಾಶ್ ಕೆ.ನಾಡಿಗ್