Advertisement

ಆಧ್ಯಾತ್ಮಿಕ ಚಿಂತನೆಗೆ ಜಿನ ಭಜನ ಸ್ಪರ್ಧೆ ಸಹಕಾರಿ

11:06 AM Nov 13, 2017 | |

ಮಹಾನಗರ: ಜೈನ ಭಜನ ಸಾಹಿತ್ಯವು ಧಾರ್ಮಿಕ ಹಾಗೂ ಆಧ್ಯಾತ್ಮಿಕ ದತ್ತ ಶ್ರಾವಕರನ್ನು ಸೆಳೆಯುತ್ತದೆ ಎಂದು ಭಾರತೀಯ ಜೈನ್‌ ಮಿಲನ್‌ನ ಮಂಗಳೂರು ವಿಭಾಗದ ಹಿರಿಯ ಉಪಾಧ್ಯಕ್ಷ, ಎಸ್‌.ಡಿ.ಎಂ . ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಯಶೋವರ್ಮ ಹೇಳಿದರು.

Advertisement

ಭಾರತೀಯ ಜೈನ್‌ ಮಿಲನ್‌ ಮಂಗಳೂರು ವಿಭಾಗ ಮಟ್ಟದ ಜಿನಭಜನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನಹಾಗೂ ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಜಿನ ಭಜನ ಸ್ಪರ್ಧೆಯು ಜೈನ್‌ ಮಿಲನ್‌ ಸಂಘಟನೆಯನ್ನು ಜೈನ ಸಮಾಜದ ಸರ್ವರೊಂದಿಗೆ ಬೆಸೆಯುವಲ್ಲಿ ಸಹಕಾರಿಯಾಗಿದ್ದು, ಇಂತಹ ಕಾರ್ಯಕ್ರಮಗಳು ಮುಂದೆಯೂ ನಡೆಯಬೇಕು ಎಂದು ಹೇಳಿದರು.

ನ್ಯಾಯವಾದಿಗಳಾದ ರವಿವರ್ಮ, ಸುದೇಶ್‌ ಕುಮಾರ್‌ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ತೀರ್ಪುಗಾರರ ಪರವಾಗಿ ವಿದುಷಿ ಉಷಾ ಪ್ರವೀಣ್‌ ಅವರು ಮುಂದಿನ ಹಂತದ ಸ್ಪರ್ಧೆಯ ತಯಾರಿ ಬಗ್ಗೆ ಮಾಹಿತಿ ನೀಡಿದರು. ಎಂ.ರಾಜೇಶ್‌ ಜೈನ್‌, ಮಿಲನ್‌ ಉಪಾಧ್ಯಕ್ಷರಾದ ಪ್ರಮೋದ್‌ ಕುಮಾರ್‌, ಸುಮನಾ ಪೂವಣಿ, ಮಾಜಿ ಕಾರ್ಯದರ್ಶಿ ಬಿ.ಸಿದ್ಧಾರ್ಥ ಅಜ್ರಿ, ಯುವ ಮಿಲನ್‌ ಅಧ್ಯಕ್ಷ ಪ್ರಶಾಂತ್‌ ಕುಮಾರ್‌, ಕಾರ್ಯದರ್ಶಿ ಸಹಕರಿಸಿದರು. 

ವಿಜೇತ ತಂಡಗಳು
ಹೊರನಾಡಿನ ಶ್ರೀ ಓಂಕಾರ ಜಿನ ಭಜನ ತಂಡ, ಹೇಮಾ ಶ್ರೀ ಜಿನಭಜನ ತಂಡ ಕಾರ್ಕಳ, ಭಕ್ತಿಸುಧಾ ಜಿನಭಜನ ತಂಡ ಹೊರನಾಡು, ಣಮೋಕಾರ ಜಿನ ಭಜನ ತಂಡ ಮಂಗಳೂರು, ತ್ರಿಭುವನ ಜಿನಭಜನ ತಂಡ ಮೂಡಬಿದಿರೆ, ಅನಂತ ಶ್ರೀ ಜಿನಭಜನ ತಂಡ ಬಜಗೋಳಿ ಹಾಗೂ ಶ್ರುತದೇವಿ ಜಿನಭಜನ ತಂಡ ಹೊರನಾಡು.

Advertisement

Udayavani is now on Telegram. Click here to join our channel and stay updated with the latest news.

Next