Advertisement

ಅಧ್ಯಾತ್ಮದಿಂದ ಸಮಾಜ ಪರಿವರ್ತನೆ: ಮಾಣಿಲ ಶ್ರೀ

01:04 PM Feb 26, 2017 | |

ವಿಟ್ಲ: ಅಧ್ಯಾತ್ಮದಿಂದ ಸಮಾಜ ಪರಿವರ್ತನೆ ಸಾಧ್ಯವಾಗುತ್ತದೆ. ಅದಕ್ಕಾಗಿ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅಗತ್ಯ. ದೇವರನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿದವರಿಗೆ ಬದುಕಿನುದ್ದಕ್ಕೂ ಯಶಸ್ಸು ಲಭಿಸುತ್ತದೆ ಎಂದು ಮಾಣಿಲ  ಶ್ರೀಧಾಮ  ಶ್ರೀ ಮಹಾಲಕ್ಷ್ಮೀ ಕ್ಷೇತ್ರದ  ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

Advertisement

ಅವರು ಶನಿವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ  ಶ್ರೀಮಹಾಲಕ್ಷ್ಮೀ, ವಿಠೊಭ ರುಕ್ಮಯಿ, ನಾಗದೇವರ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಶತ ಚಂಡಿಕಾಯಾಗದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಸಾಧು – ಸಂತರಿಗೆ ಸಂಪತ್ತು, ಕೀರ್ತಿ ಮುಖ್ಯವಲ್ಲ. ಸಮಾಜದಲ್ಲಿ ಒಳ್ಳೆಯದನ್ನು ನೋಡಿ, ಒಳ್ಳೆಯದನ್ನೇ ಮಾಡಲು ಮುಂದಾಗುವ ಮನೋಪ್ರವೃತ್ತಿ ಹೆಚ್ಚಾಗಬೇಕು. ಪೂರ್ವಜರು ಹಾಕಿಕೊಟ್ಟ ಪರಂಪರೆ, ಮೂಲ ನಂಬಿಕೆಯನ್ನು ಉಳಿಸುವ ಕಾರ್ಯ ನಿರಂತ ನಡೆಯಬೇಕು ಎಂದರು.

ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ ಪ್ರಕೃತಿ ಹಾಗೂ ಸಂಸ್ಕೃತಿಯ ಸಂರಕ್ಷಣೆಯಾಗಬೇಕು. ಭಗವಂತನ ಅನುಗ್ರಹದಿಂದ ಕಠಿನ ಕಾರ್ಯಗಳು ಸುಲಭವಾಗಿ ನಡೆಯುತ್ತವೆ ಎಂದು ಹೇಳಿದರು.

ಶ್ರೀಕ್ಷೇತ್ರ ಕಟೀಲು ವೇ|ಮೂ|  ಶ್ರೀ  ಕಮಲಾದೇವಿಪ್ರಸಾದ ಆಸ್ರಣ್ಣ ಮಾತನಾಡಿ ಫಲಕೊಡುವ ಮರ ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ನೆರಳು ನೀಡುವ ಮೂಲಕ ಸಾರ್ಥಕತೆ  ಹೊಂದುತ್ತದೆ. ಮಾಣಿಲದಲ್ಲಿ ಸ್ವಾಮೀಜಿಯವರ ಮೂಲಕ ಅಂತಹ ಕಾರ್ಯವಾಗಿದೆ. ನದಿ ತಿರುವಿನಂತಹ ಯೋಜನೆ ಜಾರಿಗೆ ತರುವುದು ಸರಿಯಲ್ಲ ಎಂದು ಹೇಳಿದರು.

Advertisement

ಸಾಧ್ವಿà ವರದಬಾಯಿ ಮುಂಬಯಿ, ಮುಂಬಯಿ ಉದ್ಯಮಿ ದಯಾನಂದ ಬಂಗೇರ, ಬೆಂಗಳೂರು ಶ್ರೀಧಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್‌ ಮೂಲ್ಯ, ನಿಕಟಪೂರ್ವ ಅಧ್ಯಕ್ಷ ಪುರುಷೋತ್ತಮ ಚೇಂಡ್ಲ, ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಪುಣೆ, ಲೋಕೇಶ್‌ ಕುಲಾಲ್‌ ಬೆಂಗಳೂರು, ಮಂಗಳೂರು ವೀರನಾರಾಯಣ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ, ಬಂಟ್ವಾಳ ಶ್ರೀಧಾಮ ಸೇವಾ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ,  ಶ್ರೀಧಾಮ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ ಶೆಟ್ಟಿ, ಶ್ರೀಧಾಮ ಮಿತ್ರವೃಂದ ಅಧ್ಯಕ್ಷ ಯೋಗೀಶ್‌ ಮತ್ತಿತರರು ಉಪಸ್ಥಿತರಿದ್ದರು. ಗೀತಾ, ರೇಶ್ಮಾ, ಮೀನಾಕ್ಷಿ, ನಳಿನಿ ಆಶಯಗೀತೆ ಹಾಡಿದರು. ಕ್ಷೇತ್ರದ ಟ್ರಸ್ಟಿಗಳಾದ ದಾಮೋದರ ಬಿ. ಎಂ. ಮಾರ್ನಬೈಲು ಸ್ವಾಗತಿಸಿದರು. ಟಿ.ತಾರಾನಾಥ ಕೊಟ್ಟಾರಿ ಪ್ರಸ್ತಾವನೆಗೆ„ದರು. ಜಯರಾಜ್‌ ಪ್ರಕಾಶ್‌ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಗಣಪತಿಯಾಗ, ನವಗ್ರಹ ಪೂಜೆ, ಶತ ಚಂಡಿಕಾಯಾಗ,  ಶ್ರೀದೇವಿಗೆ ಕಲಶಾಭಿಷೇಕ, ದುರ್ಗಾ ಪೂಜೆ ನಡೆಯಿತು. ರಾತ್ರಿ ಕಟೀಲು ಶ್ರೀ  ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ  ಶ್ರೀ ಕಟೀಲು ಕ್ಷೇತ್ರ ಮಹಾತೆ¾ ಯಕ್ಷಗಾನ ಬಯಲಾಟ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next