Advertisement
ಕೋವಿಡ್ ನಿಯಮದಿಂದ ತಪ್ಪಿಸಿಕೊಳ್ಳಲು ಮದುರೈಯ ಯುವಜೋಡಿಯೊಂದು ಬೆಂಗಳೂರಿಗೆ ತಲುಪುವ ವಿಮಾನವನ್ನು ಬಾಡಿಗೆ ಪಡೆದು ಮಾರ್ಗಮಧ್ಯೆದಲ್ಲಿಯೇ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ವಧು, ವರನ ಸಂಬಂಧಿಕರು, ಆಪ್ತರು ಎಲ್ಲರೂ ಹಾಜರಿದ್ದರು ಎಂದು ವರದಿ ತಿಳಿಸಿದೆ.
ಬೋಯಿಂಗ್ 737 ವಿಮಾನದಲ್ಲಿ ಅತಿಥಿಗಳು, ಸಂಬಂಧಿಕರು ಇದ್ದಿರುವುದು ವೈರಲ್ ಆದ ವಿಡಿಯೋ ಮತ್ತು ಫೋಟೊಗಳಿಂದ ಬಹಿರಂಗವಾಗಿತ್ತು. ಒಂದು ವಿಡಿಯೋದಲ್ಲಿ ವರ ವಧುವಿನ ಮಂಗಳಸೂತ್ರ ಕಟ್ಟುವ ವೇಳೆ ಜನರ ಗುಂಪು ಕೂಡಾ ಸೆರೆಯಾಗಿತ್ತು. ವಿಮಾನದಲ್ಲಿ ಕುಳಿತಿರುವ ಜನರು ಯಾರೂ ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರವನ್ನೂ ಕಾಪಾಡಿಲ್ಲ ಎಂಬುದು ವೈರಲ್ ಆದ ವಿಡಿಯೋದಿಂದ ಬಹಿರಂಗವಾಗಿದೆ. ವಿಮಾನದಲ್ಲಿ ವಿವಾಹವಾದ ಜೋಡಿ ಹಾಗೂ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ತನಿಖೆಯನ್ನು ಆರಂಭಿಸಿದೆ. ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ದೂರು ದಾಖಲಿಸುವಂತೆ ಸ್ಪೈಸ್ ಜೆಟ್ ಗೆ ಸೂಚಿಸಲಾಗಿದೆ ಎಂದು ಡಿಜಿಸಿಎ ತಿಳಿಸಿರುವುದಾಗಿ ವರದಿ ಹೇಳಿದೆ.