Advertisement

ವಿಶೇಷ ಗೆಲುವು: ಕೋಚ್‌ ಮನ್‌ಪ್ರೀತ್‌

09:10 AM Aug 17, 2017 | Team Udayavani |

ಅಹ್ಮದಾಬಾದ್‌: ಪ್ರೊ ಕಬಡ್ಡಿ ಲೀಗ್‌ನ ಚೊಚ್ಚಲ ಪ್ರವೇಶದಲ್ಲಿಯೇ ಕನ್ನಡಿಗ ಸುಕೇಶ್‌ ಹೆಗ್ಡೆ ನೇತೃತ್ವದ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ ತಂಡ ಗಮನಾರ್ಹ ನಿರ್ವಹಣೆ ದಾಖಲಿಸಿದೆ. ಅಹ್ಮದಾಬಾದ್‌ ಗುಜರಾತ್‌ ತಂಡದ ತವರಿನ ತಾಣವಾಗಿದ್ದು ಇಷ್ಟರವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ಸಾಧನೆ ಮಾಡಿದೆ.

Advertisement

ಇದೊಂದು ವಿಶೇಷ ಗೆಲುವು. ಯಾಕೆಂದರೆ ಆರಂಭದಲ್ಲಿ ನಾವು ಅಂಕ ಗಳಿಕೆಯಲ್ಲಿ ಎದುರಾಳಿ ಬೆಂಗಳೂರು ಬುಲ್ಸ್‌ ತಂಡಕ್ಕಿಂತ ಹಿಂದೆ ಇದ್ದೆವು. ಬುಲ್ಸ್‌ 9 ಅಂಕಗಳಿಂದ ಮುನ್ನಡೆಯಲ್ಲಿತ್ತು. ಆಬಳಿಕ ನಾವು ನಮ್ಮ ಅನುಭವದ ಆಟ ಪ್ರದರ್ಶಿಸಿ ಗೆಲುವು ಒಲಿಸಿಕೊಂಡೆವು ಎಂದು ಗುಜರಾತ್‌ ತಂಡದ ಕೋಚ್‌ ಮನ್‌ಪ್ರೀತ್‌ ಸಿಂಗ್‌ ತಿಳಿಸಿದರು. ಗುಜರಾತ್‌ ತಂಡವು ಮಂಗಳವಾರದ ಪಂದ್ಯದಲ್ಲಿ ಬುಲ್ಸ್‌ ತಂಡವನ್ನು 27-24 ಅಂಕಗಳಿಂದ ಕೆಡಹಿತ್ತು.

ಆರಂಭದಲ್ಲಿ ನಾವು ಕೆಲವೊಂದು ತಪ್ಪುಗಳನ್ನು ಮಾಡಿದೆವು. ಇದರಿಂದ ನಾವು ಹಿನ್ನಡೆ ಅನುಭವಿಸುವಂತಾಯಿತು. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಾವು ಬೇಗನೇ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಚೇತರಿಸಿಕೊಳ್ಳಲು ಪೂರ್ಣ ಪಂದ್ಯ ಬೇಕಾಗುತ್ತದೆ. ಯಾವ ರೀತಿ ಮುನ್ನಡೆಯಬೇಕು ಮತ್ತು ಎದುರಾಳಿಯ ಮುನ್ನಡೆಯನ್ನು ಯಾವ ರೀತಿ ಹಿಡಿದಿಟ್ಟುಕೊಳ್ಳಬಹುದು ಎಂಬ ಬಗ್ಗೆ ಯೋಜನೆ ಹಾಕಿಕೊಂಡರೆ ನಾವು ಮೇಲುಗೈ ಸಾಧಿಸಬಹುದು. ಆಟವಾಡುವ ಜತೆ ಕೆಲವೊಂದು ತಂತ್ರಗಳನ್ನು ಬಳಸಿದರೆ ಮುನ್ನಡೆ ಪಡೆಯಬಹುದು ಎಂದು ಅವರು ವಿವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next