Advertisement
ಇದಕ್ಕೆ ಸಂಬಂಧಪಟ್ಟಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಪೌಷ್ಟಿಕ ಮತ್ತು ಆರೋಗ್ಯಕರ ಊಟ ಅಥವಾ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಹೇಳಿದೆ. ಈ ವಿಶೇಷ ಭೋಜನವು ಪಿಎಂ ಪೋಷಣ್‌ನ ಭಾಗವಾಗಿದೆ. ಎನ್‌ಜಿಒಗಳು, ಕೈಗಾರಿಕೆ, ವಾಣಿಜ್ಯ ಮತ್ತು ವ್ಯಾಪಾರ ಇತ್ಯಾದಿ ಸಮುದಾಯದ ಸದಸ್ಯರು ಸೇರಿ ಪೋಷಕರು, ಸಮುದಾಯದ ದಾನಿಗಳ ನೆರವು, ಪ್ರಾಯೋಜಕತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಸ್ಥಳೀಯವಾಗಿ ಲಭ್ಯವಿರುವ ಸೊಪ್ಪಿನ ತರಕಾರಿಗಳು, ಕಾಳು, ದ್ವಿದಳ ಧಾನ್ಯ ಮತ್ತು ಸಿರಿಧಾನ್ಯಗಳಿಗೆ ಒತ್ತು ನೀಡಬೇಕು. ಋತುಮಾನದ ಹಣ್ಣುಗಳನ್ನು, ತಾಜಾ ತರಕಾರಿಗಳನ್ನು ಬಳಸಿಕೊಳ್ಳಬಹುದು. ಆಹಾರ ಧಾನ್ಯ ಸಂಗ್ರಹ, ಅಡುಗೆ ಮಾಡುವಾಗ ಹಾಗೂ ಬಡಿಸುವಾಗ ಸ್ವತ್ಛತೆ ಮತ್ತು ನೈರ್ಮಲ್ಯದ ಮಾನದಂಡಗಳ ಕಡ್ಡಾಯ ಪಾಲನೆ ಆಗಬೇಕು. ಆಹಾರ ಕಲಬೆರಕೆ ಮತ್ತು ಆಹಾರ ಹಾಳಾಗುವುದನ್ನು ತಡೆಯಲು ಪ್ರಮಾಣಿತ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಶುದ್ಧ ಕುಡಿಯುವ ನೀರನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.
Related Articles
ಮಕ್ಕಳಲ್ಲಿ ಜಂಕ್ ಫುಡ್ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಆಗುತ್ತಿರುವ ಬಗ್ಗೆ ವಿವಿಧ ವರದಿಗಳಲ್ಲಿ ಉಲ್ಲೇಖ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆಯು ವಿಶೇಷ ಭೋಜನದಲ್ಲಿ ನೂಡಲ್ಸ್, ಚಿಪ್ಸ್, ಚಾಕೋಲೆಟ್ ಮುಂತಾದ ಜಂಕ್ ಫುಡ್‌ಗೆ ಅವಕಾಶವಿಲ್ಲ, ಹಳಸಿದ ಆಹಾರವನ್ನು ಕೊಡಬೇಡಿ ಎಂದು ಸೂಚಿಸಲಾಗಿದೆ. ಮಕ್ಕಳಿಗೆ ಉಣಬಡಿಸುವ ಮೊದಲು ಶಿಕ್ಷಕರು ಮತ್ತು ಅಡುಗೆಯವರು ರುಚಿ ನೋಡಬೇಕೆಂದು ಹೇಳಲಾಗಿದೆ. ವರ್ಷಕ್ಕೆ ನೂರರಷ್ಟು ವಿಶೇಷ ಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಬಹುದೆಂದು ಹೇಳಲಾಗಿದೆ.
Advertisement
“ಮಾರ್ಗಸೂಚಿಯಂತೆ ಶಾಲಾ ಹಂತದಲ್ಲಿ ವಿಶೇಷ ಭೋಜನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಮತ್ತು ಗುಣಮಟ್ಟದ ಪೋಷಕಾಂಶಗಳಿರುವ ಪೂರಕ ಆಹಾರ ಪದಾರ್ಥಗಳನ್ನು ಪೋಷಕರು ಮತ್ತು ಸಮುದಾಯದ ದಾನಿಗಳಿಂದ ಕೊಡುಗೆಯಾಗಿ ಕೊಡುವುದನ್ನು ಉತ್ತೇಜಿಸಬೇಕು.” – ಬಿ.ಬಿ. ಕಾವೇರಿ, ಆಯುಕ್ತ, ಶಾಲಾ ಶಿಕ್ಷಣ ಇಲಾಖೆ
– ರಾಕೇಶ್ ಎನ್.ಎಸ್.