Advertisement
ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸು ತ್ತದೆಯೇ ಎನ್ನುವುದು ಇನ್ನೂ ಖಚಿತ ವಾಗಿಲ್ಲ. ಜ. 27ರಂದು ಈ ಸಂಬಂಧ ಬಿಜೆಪಿ ನಾಯಕರು ಸಭೆ ನಡೆಸಲು ನಿರ್ಧರಿಸಿದ್ದಾರೆ.
Related Articles
Advertisement
ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗೃಹ ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಹೊರಟ್ಟಿ ಅವರನ್ನು ಸಭಾಪತಿ ಮಾಡಲು ಸಹಕಾರ ನೀಡುವಂತೆ ಬಿಜೆಪಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡುವಂತೆ ಬೊಮ್ಮಾಯಿ ಸಲಹೆ ನೀಡಿದ್ದು, ಅದರಂತೆ ಜ. 27ರೊಳಗೆ ಕುಮಾರಸ್ವಾಮಿ ಅವರು ಯಡಿಯೂರಪ್ಪರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಜೆಡಿಎಸ್‌ಗೆ ದೊರೆತರೆ ಮೊದಲ ಸಭಾಪತಿ :
ಜನತಾ ಪರಿವಾರ ಇಬ್ಭಾಗವಾದ ಬಳಿಕ ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‌ಗೆ ಇದುವರೆಗೂ ಸಭಾಪತಿ ಸ್ಥಾನ ದೊರೆತಿಲ್ಲ. ಈಗ ಸಿಕ್ಕಿದರೆ ಅದು ಮೊದಲ ಅವಕಾಶವಾಗಲಿದೆ.
ಎರಡೂ ಪಕ್ಷದ ಹಿರಿಯ ನಾಯಕರು ಚರ್ಚಿಸಿ ಯಾವ ಪಕ್ಷಕ್ಕೆ ಯಾವ ಹುದ್ದೆ ನಿಡಬೇಕು ಎನ್ನುವುದನ್ನು ತೀರ್ಮಾನಿಸುತ್ತಾರೆ. ಪಕ್ಷದ ನಾಯ ಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. -ಮಹಾಂತೇಶ ಕವಟಗಿ ಮಠ, ವಿಧಾನ ಪರಿಷತ್ತಿನಲ್ಲಿ ಸರಕಾರದ ಮುಖ್ಯ ಸಚೇತಕ