Advertisement
ಮಂಗಳೂರು ನಗರ ದಿನೇದಿನೆ ಬೆಳೆಯುತ್ತಿದ್ದು, ಮರಗಳು ನಾಶವಾ ಗುತ್ತಿವೆ. ಪಕ್ಷಿಗಳಿಗೆ ಗೂಡುಕಟ್ಟಲು ಮರಗಳೇ ಇಲ್ಲ ಎಂಬ ಕಾರಣಕ್ಕೆ ಪಕ್ಷಿಗಳ ಸಂತತಿ ಉಳಿಸುವ ಉದ್ದೇಶದಿಂದ ತೌಸಿಫ್ ಅವರು ಪಿವಿಸಿ ಪೈಪ್ ಮೂಲಕ ಗುಬ್ಬಚ್ಚಿ ಗೂಡು ತಯಾರಿಸಿ ನಗರದ ಕಾಡುಗಳು, ಪಾರ್ಕ್, ಮನೆಗಳ ಟೆರೇಸ್ ಸೇರಿದಂತೆ 100 ಕಡೆ ಇರಿಸಿದ್ದರು. ಇದೀಗ ಕೆಲವು ಗೂಡುಗಳಲ್ಲಿ ಗುಬ್ಬಚ್ಚಿಗಳು ನೆಲೆಸಿದ್ದಲ್ಲದೆ ಕೆಲವು ಗುಬ್ಬಚ್ಚಿಗಳು ಮರಿ ಮಾಡಿವೆ.
ಗೂಡುಗಳಲ್ಲಿ ಬೇರೆ ಪಕ್ಷಿಗಳು, ಅಳಿಲು ಗಳು ನೆಲೆ ಕಂಡುಕೊಂಡದ್ದೂ ಇದೆ ಎನ್ನುತ್ತಾರೆ ತೌಸಿಫ್. ಮಳೆಗಾಲ ಮುಗಿದ ಬಳಿಕ ನಗರದ ವಿವಿಧ ಮನೆಗಳಿಗೆ ತೆರಳಿ ಗೂಡು ವಿತರಿಸುವ ಕಾರ್ಯಕ್ಕೆ ತೌಸಿಫ್ ಮುಂದಾಗಲಿದ್ದಾರೆ.ಈ ಗೂಡು ನಿರ್ಮಿಸಲು ಹೆಚ್ಚೇನೂ ಖರ್ಚಾಗಿಲ್ಲ. ಸುಮಾರು 2.5 ಅಡಿ ಉದ್ದ ಸುಮಾರು 4 ಇಂಚು ಅಗಲದ ಪೈಪ್ ತುಂಡು ಮಾಡಿ, ಮೂರು ತೂತುಗಳನ್ನು ಮಾಡಿ ಗೂಡುಗಳಾಗಿ ಪರಿವರ್ತಿಸಿದ್ದಾರೆ. ಅವುಗಳನ್ನು ಮನೆಯ ಹೊರಗಡೆ, ಕಾರು ಪಾರ್ಕಿಂಗ್, ಬಾಲ್ಕನಿ, ಮರಗಳಿ ರುವ ಪ್ರದೇಶದಲ್ಲಿ ಅಲ್ಲದೆ, ಮರಗಳ ಮೇಲೆಯೂ ಇಡಬಹುದು.
Related Articles
ಪ್ರಾಣಿ, ಪಕ್ಷಿಗಳಿಗೆ ಕುಡಿಯಲೆಂದು ತೌಸೀಫ್ ಅವರು ಈಗಾಗಲೇ ನಗರದ ವಿವಿಧ ಕಡೆಗಳಲ್ಲಿ ಸುಮಾರು 100 ಮಡಕೆಗಳಲ್ಲಿ ನೀರು ತುಂಬಿ ಇಟ್ಟಿದ್ದರು. ಸಾರ್ವಜನಿಕರು ಆ ಮಡಕೆಗೆ ನೀರು ಹಾಕುತ್ತಿದ್ದು, ಪಕ್ಷಿಗಳು, ದನ, ಬೀದಿ ನಾಯಿ ಸೇರಿದಂತೆ ಪ್ರಾಣಿಗಳ ದಾಹ ತಣಿಸುತ್ತಿದ್ದವು. ಸದ್ಯ ಮಳೆಗಾಲ ಆರಂಭವಾದ ಕಾರಣ, ಡೆಂಗ್ಯೂ ಸೇರಿದಂತೆ ಮತ್ತಿತರ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಬಾರದು ಎಂಬ ಉದ್ದೇಶದಿಂದ ಈ ಮಡಕೆಗಳನ್ನು ಕವುಚಿ ಇಡಲಾಗಿದೆ.
Advertisement