Advertisement

ಸ್ಪೇನ್‌ ಪ್ರಧಾನಿ, ರಕ್ಷಣಾ ಸಚಿವರ ಮೊಬೈಲ್‌ ಗೂ “ಪೆಗಾಸಸ್‌’ದಾಳಿ

08:14 AM May 03, 2022 | Team Udayavani |

ಹೊಸದಿಲ್ಲಿ: ಕಳೆದ ವರ್ಷ ಭಾರತದಲ್ಲಿ ಸದ್ದು ಮಾಡಿದ್ದ ಪೆಗಾಸಸ್‌ ಮೊಬೈಲ್‌ ವೈರಸ್‌, ಈಗ ಸ್ಪೇನ್‌ಗೂ ಕಾಲಿಟ್ಟಿದೆ. ಅಲ್ಲಿನ ಪ್ರಧಾನಿ ಪೆಡ್ರೊ ಸ್ಯಾಚೆಝ್, ರಕ್ಷಣ ಸಚಿವೆ ಮಾರ್ಗರಿಟಾ ರಾಬಲ್ಸ್‌ ಅವರ ಮೊಬೈಲ್‌ಗ‌ಳಲ್ಲಿ ಪೆಗಾಸಸ್‌ ಕಾಣಿಸಿಕೊಂಡಿದೆ ಎಂದು ಸರಕಾರವೇ ದೃಢಪಡಿಸಿದೆ.

Advertisement

ಇತ್ತೀಚೆಗೆ, ಕೆನಡಾದ ಸಿಟಿಜನ್‌ ಲ್ಯಾಬ್‌ ಎಂಬ ಸಂಸ್ಥೆ, ಸ್ಪೇನ್‌ನಲ್ಲಿ ನಡೆಯುತ್ತಿರುವ ಕ್ಯಾಟಲಾನ್‌ ಪ್ರತ್ಯೇಕತಾ ಚಳುವಳಿಗೆ ಸೇರಿದ ಸುಮಾರು 60 ಜನರ ಮೊಬೈಲ್‌ ಫೋನ್‌ಗಳಿಗೆ ಪೆಗಾಸಸ್‌ ದಾಳಿಯಾಗಿದೆ ಎಂದು ಹೇಳಿತ್ತು.

ಇದರ ಬೆನ್ನಿಗೆ, ಈಗ ಸ್ಪೇನ್‌ ಸರಕಾರದಿಂದ ಮೇಲಿನ ಮಾಹಿತಿ ಹೊರಬಿದ್ದಿದೆ. 2021ರ ಮೇ ತಿಂಗಳಲ್ಲೇ ಇವರಿಬ್ಬರ ಫೋನ್‌ಗೆ ಪೆಗಾಸಸ್‌ ಲಗ್ಗೆಯಿಟ್ಟಿದೆ. ಅಲ್ಲಿಂದ ಇಲ್ಲಿಯವರೆಗೆ ಇವರ ಮೊಬೈಲ್‌ ಫೋನ್‌ಗಳಿಂದ ಕೇವಲ ಒಂದು ಮಾಹಿತಿ ಮಾತ್ರ ಸೋರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next