Advertisement

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

12:58 AM Dec 23, 2024 | Team Udayavani |

ಹೊಸದಿಲ್ಲಿ: ಇಸ್ರೇಲ್‌ ಮೂಲದ ಪೆಗಸಸ್‌ ಸ್ಪೈವೇರ್‌ ಹಲವು ವಾಟ್ಸ್‌ಆ್ಯಪ್‌ ಸಂಖ್ಯೆಗಳನ್ನು ಗುರಿಯಾಗಿಸಿದ್ದರ ಬಗ್ಗೆ ಅಮೆರಿಕದ ಕೋರ್ಟ್‌ ತೀರ್ಪು ನೀಡಿದೆ. ಭಾರತದ 300 ಮಂದಿಯ ಸಂಖ್ಯೆಯೂ ಇದರಲ್ಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

Advertisement

ಈ ಬಗ್ಗೆ ಟ್ವೀಟ್‌ ಮಾಡಿ, “ಅಮೆರಿಕದ ಕೋರ್ಟ್‌ ತೀರ್ಪಿನ ಮೇರೆಗೆ ಪೆಗಸಸ್‌ನ ಅಕ್ರಮ ಸ್ಪೈವೇರ್‌ ದಂಧೆಯಲ್ಲಿ ಭಾರತದ 300 ಮಂದಿ ವಾಟ್ಸ್‌ಆ್ಯಪ್‌ ಸಂಖ್ಯೆಗಳನ್ನೂ ಗುರಿಯಾ ಗಿಸಲಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್‌ ಮುಂದಿನ ತನಿಖೆ ನಡೆಸಿ, 300 ಮಂದಿ ಬಗ್ಗೆ ಕೇಂದ್ರ ಮಾಹಿತಿ ನೀಡಬೇಕು’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next