Advertisement

Space Science: ಎಸ್‌ಎಸ್‌ಎಲ್‌ವಿ ಇಂದು ಕೊನೆ ಉಡಾವಣೆ: ಇಸ್ರೋ

12:00 AM Aug 16, 2024 | Team Udayavani |

ಶ್ರೀಹರಿಕೋಟ: ಪರಿಸರದ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ 175 ಕೆ.ಜಿ. ತೂಕದ ಭೂ ವೀಕ್ಷಣಾ ಉಪಗ್ರಹ ಇಒಎಸ್‌ -08ರ ಉಡಾವಣೆಯನ್ನು ಇಸ್ರೋ ಆ.16ರಂದು ನಡೆಸಲಿದೆ.

Advertisement

ಸಣ್ಣ ಉಪಗ್ರಹ ಉಡಾವಣ ವಾಹನ(ಎಸ್‌ಎಸ್‌ಎಲ್‌ವಿ) ಈ ಉಪಗ್ರಹವನ್ನು ಹೊತ್ತೂಯ್ಯಲಿದೆ. ಇದು ಎಸ್‌ಎಸ್‌ಎಲ್‌ವಿಯ ಮೂರನೇ ಹಾಗೂ ಕೊನೆಯ ಉಡಾವಣೆಯಾಗಿರಲಿದೆ. ಬಾಹ್ಯಾಕಾಶಕ್ಕೆ ಕೇವಲ 500 ಕೆಜಿ ತೂಕವನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಎಸ್‌ಎಸ್‌ಎಲ್‌ವಿ ಯನ್ನು ವಾಣಿಜ್ಯೀಕರಣಗೊಳಿಸುವ ಉದ್ದೇಶದಿಂದ ಅದನ್ನು ಇಸ್ರೋ ಅಭಿ ವೃದ್ಧಿಪಡಿಸಿದೆ.

ಎಸ್‌ಎಸ್‌ಎಲ್‌ವಿಯು ಇನ್ನು ಮುಂದೆ ಖಾಸಗಿ ಸಂಸ್ಥೆಗಳ ಹಾರಾಟಕ್ಕಷ್ಟೇ ಉಪಯೋಗಿಸಲ್ಪಡುತ್ತದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಎಸ್ಸೆಸ್‌ಎಲ್‌ವಿ ವಿಶೇಷತೆಗಳು
ಕೇವಲ 2 ಮೀ. ವ್ಯಾಸ ಹಾಗೂ 34 ಮೀ. ಉದ್ದ
3 ಘನ , 1 ದ್ರವ ಇಂಧನ ಹಂತದಲ್ಲಿ ವೇಗ ನಿರ್ವಹಣೆ
2023ರಲ್ಲಿ 450 ಕಿಮೀ ಕಕ್ಷೆಯಲ್ಲಿ 3 ಉಪಗ್ರಹ ಉಡಾವಣೆ ಯಶಸ್ವಿ

Advertisement

Udayavani is now on Telegram. Click here to join our channel and stay updated with the latest news.

Next