Advertisement

ಚಂದ್ರನ ಮೇಲೆ ಬಾಹ್ಯಾಕಾಶ ಕೇಂದ್ರ, ಜೀವಿಸಬಲ್ಲ ಗ್ರಹ ಸಂಶೋಧನೆ: ಚೀನಾ

09:33 PM Oct 15, 2024 | Team Udayavani |

ಬೀಜಿಂಗ್‌: ಚೀನಾ ತನ್ನ ಮುಂದಿನ ಬಾಹ್ಯಾಕಾಶ ಯೋಜನೆಗಳನ್ನು ಮಂಗಳವಾರ ಘೋಷಣೆ ಮಾಡಿದೆ. ಮಾನವ ಸಹಿತ ಚಂದ್ರಯಾನ, ಚಂದ್ರ ಮೇಲೆ ಬಾಹ್ಯಾಕಾಶ ಕೇಂದ್ರ, ಜೀವಿಸಲು ಸಾಧ್ಯವಾಗುವ ಗ್ರಹಗಳ ಹುಡುಕಾಟ ನಡೆಸಲಾಗುವುದು ಎಂದು ಚೀನಾ ಹೇಳಿದೆ.

Advertisement

ಇದು 2024ರಿಂದ 2050ರವರೆಗೆ ನಡೆಯುವ ಯೋಜನೆಗಳಾಗಿವೆ. 2028ರಿಂದ 2035ರವರೆಗೆ ಚೀನಾ ಬಾಹ್ಯಾಕಾಶ ಕೇಂದ್ರ ಯೋಜನೆ ಕೈಗೊಳ್ಳಲಿದೆ. ಇದೇ ಸಮಯದಲ್ಲಿ ಮಾನವ ಸಹಿತ ಗಗನಯಾನವನ್ನು ಕೈಗೊಳ್ಳಲಿದೆ. ಇದಲ್ಲದೇ ಭೂಮಿಯನ್ನು ಹೊರತುಪಡಿಸಿ ಇತರ ಗ್ರಹಗಳಲ್ಲಿ ಮಾನವ ಬದುಕಲು ಸಾಧ್ಯವೇ ಎಂಬುದರ ಬಗ್ಗೆಯೂ ಚೀನಾ ಸಂಶೋಧನೆ ನಡೆಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗಾಗಲೇ ಭೂಮಿಯ ಮೇಲ್ಭಾಗದಲ್ಲಿ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಾಣ ಮಾಡಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಸಾಧಿಸಿರುವ ಉನ್ನತಿಯನ್ನು ತೋರ್ಪಡಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next