Advertisement
ವಿಜ್ಞಾನ ವಿಷಯದಲ್ಲಿ ಶೇಷಾದ್ರಿಪುರಂ ಕಂಪೊಸಿಟ್ ಪಿಯು ಕಾಲೇಜಿನ ಪ್ರೀತಂ ರವಲಪ್ಪ ಪನಸೂಡ್ಕರ್ 600ಕ್ಕೆ 599 ಅಂಕ ಪಡೆದಿದ್ದಾರೆ. ಧಾರವಾಡದ ವಿದ್ಯಾನಿಕೇತನ ಸೈನ್ಸ್ ಪಿಯು ಕಾಲೇಜಿನ ಎ. ವಿದ್ಯಾಲಕ್ಷ್ಮೀ 598 ಅಂಕ ಪಡೆದಿದ್ದಾರೆ. ಉಳಿದಂತೆ 11 ವಿದ್ಯಾರ್ಥಿಗಳು 597 ಅಂಕ ಗಳಿಸಿದ್ದಾರೆ.ಇನ್ನು ವಾಣಿಜ್ಯ ವಿಭಾಗದಲ್ಲಿ ಉಡುಪಿಯ ಕುಕ್ಕುಂದೂರಿನ ಕ್ರಿಯೇಟಿವ್ ಪಿಯು ಕಾಲೇಜಿನ ಸಾನ್ವಿ ರಾವ್ 598 ಅಂಕ ಗಳಿಸಿದ್ದಾರೆ.ತುಮಕೂರಿನ ವಿದ್ಯಾನಿಧಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಜ್ಞಾನವಿ ರಾವ್ 597 ಅಂಕ ಪಡೆದಿದ್ದಾರೆ. ಉಳಿದಂತೆ 8 ಮಂದಿ ವಿದ್ಯಾರ್ಥಿಗಳು 596 ಅಂಕ ಗಳಿಸಿದ್ದಾರೆ.
ದ್ವಿತೀಯ ಸ್ಥಾನದಲ್ಲಿ 595 ಅಂಕ ಪಡೆದಿರುವ ಬೆಂಗಳೂರಿನ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ದೇವಾಂಶಿ ದಿನೇಶ ಅಮಿತಾ, ಧಾರವಾಡದ ಕೆಇಬಿ ಕಂಪಾಸಿಟ್ ಪಿಯು ಕಾಲೇಜಿನ ರವೀನಾ ಸೊಮಪ್ಪ ಲಮಾಣಿ ತಲಾ 594 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಔಟ್ ಆಫ್ ಔಟ್ ಎಷ್ಟು?
ಗಣಿತದಲ್ಲಿ ಗರಿಷ್ಠ 7,378 ವಿದ್ಯಾರ್ಥಿಗಳು, ಜೀವಶಾಸ್ತ್ರ -5,959, ಕಂಪ್ಯೂಟರ್ ಸೈನ್ಸ್-2,681, ಕನ್ನಡ- 2,595, ರಸಾಯನಶಾಸ್ತ್ರ-1,986, ಅಕೌಂಟೆನ್ಸಿ-1,834, ಸಂಸ್ಕೃತ-1,512, ಅರ್ಥಶಾಸ್ತ್ರ-1,452 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ತಮಿಳು, ತೆಲುಗು, ಮರಾಠಿ, ಅರೇಬಿಕ್, ಹಿಂದೂಸ್ತಾನಿ ಸಂಗೀತ, ರಿಟೇಲ್ ವಿಷಯದಲ್ಲಿ ಒಬ್ಬರೂ 100ಕ್ಕೆ 100 ಅಂಕ ಪಡೆದಿಲ್ಲ.