Advertisement
ಕಾಂಗ್ರೆಸ್ ಹೊರಕ್ಕೆ: ಉತ್ತರ ಪ್ರದೇಶದಲ್ಲಿನ ಮಹಾಮೈತ್ರಿಕೂಟದಿಂದ ಕಾಂಗ್ರೆಸ್ ಹೊರಗುಳಿಯಲಿದೆ ಎಂಬ ಸುದ್ದಿ ನಿಜವಾಗಿದೆ. 80 ಕ್ಷೇತ್ರಗಳಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಸ್ಪರ್ಧಿಸಲಿವೆ. ತಾತ್ವಿಕವಾಗಿ ಈ ಬಗ್ಗೆ ಒಪ್ಪಿಕೊಳ್ಳಲಾಗಿದೆ. ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆ ನಡೆಸುತ್ತದೆ ಎನ್ನುವುದನ್ನು ಶೀಘ್ರ ಪ್ರಕಟಿಸಲಾಗುತ್ತದೆ ಎಂದು ಎಸ್‌ಪಿ ನಾಯಕ ರಾಜೇಂದ್ರ ಚೌಧರಿ ಹೇಳಿದ್ದಾರೆ. ಮೂಲಗಳನ್ನು ಉಲ್ಲೇಖೀಸಿ “ನ್ಯೂಸ್ 18′ ವರದಿ ಮಾಡಿರುವ ಪ್ರಕಾರ ಎಸ್‌ಪಿ, ಬಿಎಸ್‌ಪಿ ತಲಾ 37 ಸ್ಥಾನಗಳಲ್ಲಿ ಸ್ಪರ್ಧಿ ಸಲು ಮುಂದಾಗಿವೆ. ಜತೆಗೆ ಕೇಂದ್ರದ ಮಾಜಿ ಸಚಿವ ಅಜಿತ್ ಸಿಂಗ್‌ರ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಕೂಡ ಮೈತ್ರಿಕೂಟದಲ್ಲಿ ಇರಲಿದೆ. ಅದಕ್ಕೆ 2 ಸ್ಥಾನ ಸಿಗಲಿವೆ. ಮಥುರಾದಿಂದ ಅಜಿತ್ ಸಿಂಗ್ ಪುತ್ರ ಜಯಂತ್ ಸಿಂಗ್, ಭಾಗ³ತ್ ನಿಂದ ಅಜಿತ್ ಸಿಂಗ್ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.
Related Articles
Advertisement
ಪ್ರಯಾಗ್‌ರಾಜ್‌ಗೆ ರಾಹುಲ್ ಭೇಟಿ?ಕುಂಭ ಮೇಳಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೇಟಿ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಸುಳಿವು ನೀಡಿದ ಪಕ್ಷದ ವಕ್ತಾರ ನದೀಂ ಜಾವೆದ್ “ರಾಹುಲ್ ಗಾಂಧಿ ತಾವು ನಂಬಿಕೊಂಡ ಧಾರ್ಮಿಕ ನಂಬಿಕೆಗಳಿಗೆ ಬದ್ಧರಾಗಿ ದ್ದಾರೆ. ಜವಾಹರ್‌ಲಾಲ್ ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅಧ್ಯಕ್ಷರಿಗೆ ಸಮಯವಿದ್ದರೆ ಅಲ್ಲಿಗೆ ಭೇಟಿ ನೀಡಲಿದ್ದಾರೆ’ ಎಂದು ಹೇಳಿದ್ದಾರೆ.