Advertisement
ಭಾರತೀಯ ರೈಲ್ವೇಯಿಂದ ಮಂಜೂ ರಾಗಿರುವ ವಿಸಾxಡೋನ್ ಬೋಗಿ ಎರಡು ದಿನಗಳ ಹಿಂದೆ ನೈಋತ್ಯ ರೈಲ್ವೇಯ ಬೆಂಗಳೂರು ವಿಭಾಗಕ್ಕೆ ಬಂದಿದೆ. ಅದು ಮಾರ್ಚ್ 15ರ ವೇಳೆಗೆ ರೈಲು ಗಾಡಿಗೆ ಸೇರ್ಪಡೆಗೊಂಡು ಪ್ರಯಾಣಿಕರ ಸಂಚಾರಕ್ಕೆ ಲಭ್ಯವಾಗುವ ನಿರೀಕ್ಷೆ ಇದೆ. ನಿರ್ದಿಷ್ಟವಾಗಿ ಯಾವ ಮಾರ್ಗದ ರೈಲಿಗೆ ಇದನ್ನು ಜೋಡಿಸುವುದೆಂಬ ಬಗ್ಗೆ ಸದ್ಯ ನಿರ್ಧಾರವಾಗಿಲ್ಲ ಎಂದು ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ. ವಿಜಯ ಉದಯವಾಣಿಗೆ ತಿಳಿಸಿದ್ದಾರೆ.
ವಿಸಾxಡೋಮ್ ಬೋಗಿ 40 ಸುಖಾ ಸೀನ ಹಾಗೂ 360 ಡಿಗ್ರಿ ತಿರುಗುವ ಕುರ್ಚಿ ಗಳನ್ನು ಹೊಂದಿರುತ್ತದೆ. ಇದು ಹಗಲಿನ ವೇಳೆಯ ಸಂಚಾರದಲ್ಲಿ ಪ್ರಕೃತಿಯ ವಿಹಂಗಮ ನೋಟವನ್ನು ಸವಿಯಲು ಹೆಚ್ಚು ಪೂರಕವಾಗಿದೆ. ಮಂಗಳೂರು-ಬೆಂಗಳೂರು ರೈಲು
ಮಾರ್ಗದ ಸುಬ್ರಹ್ಮಣ್ಯ ರೋಡ್- ಸಕಲೇಶಪುರ ನಡುವಣ 55 ಕಿ.ಮೀ. ಮಾರ್ಗ ಘಾಟಿ, ದಟ್ಟ ಅರಣ್ಯ, ಜಲಪಾತಗಳು, ಗಿರಿಗಳ ವಿಹಂಗಮ ನೋಟವಿದೆ. ಅದು ದರಿಂದ ಮಂಗಳೂರು-ಬೆಂಗಳೂರು ಹಗಲು ರೈಲಿಗೆ ಇದನ್ನು ಜೋಡಿಸುವ ಸಾಧ್ಯತೆ ಹೆಚ್ಚು.