Advertisement

ಪ್ರವಾಸಿ ತಾಣ ರೂಪ ಪಡೆದ ರೈಲು ಸೌಧ ಆಕರ್ಷಣೆ ಕೇಂದ್ರ

03:05 PM Mar 27, 2021 | Team Udayavani |

ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆಯಲ್ಲಿರುವ ನೈಋತ್ಯ ರೈಲ್ವೆ ವಲಯದ ಪ್ರಧಾನಕಚೇರಿ ರೈಲು ಸೌಧವೀಗ ದೇಶದ ವೀರಮಹನೀಯರ, ವಚನಕಾರರ, ಮುನಿಗಳ, ಹೋರಾಟಗಾರರನ್ನು ನೆನಪಿಸುತ್ತಿದೆ.ಜೊತೆಗೆ ಪ್ರಾಚೀನ ಆಯುರ್ವೇದಗಿಡಮೂಲಿಕೆಗಳ ಉದ್ಯಾನವನಗಳುಇಲ್ಲಿವೆ. ಅಲ್ಲದೆ ರಾಜ್ಯದ ಪ್ರಮುಖನದಿಗಳ ಹೆಸರಿನ ಜಲಧಾರೆಗಳುಮೈದುಂಬಿ ಹರಿಯುತ್ತಿವೆ. ಇವೆಲ್ಲವೂಇಲ್ಲಿಗೆ ಭೇಟಿ ಕೊಡುವವರ ಕಣ್ಮನ ಸೆಳೆಯುತ್ತಿವೆ.

Advertisement

ಯಾರ್ಯಾರ ಮೂರ್ತಿಗಳಿವೆ?: ಯೋಗ ಪಿತಾಮಹ ಮಹರ್ಷಿ ಪತಂಜಲಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ| ಬಾಬಾಸಾಹೇಬ ಅಂಬೇಡ್ಕರ್‌, ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಭಾಯ್‌ ಪಟೇಲ, ವಿಶ್ವಗುರು ಬಸವಣ್ಣ,ಸ್ವಾಮಿ ವಿವೇಕಾನಂದ, ವೀರರಾಣಿಕಿತ್ತೂರು ಚನ್ನಮ್ಮ, ರವೀಂದ್ರನಾಥಟಾಗೋರ್‌, ಡಾ| ಸರ್ವಪಲ್ಲಿರಾಧಾಕೃಷ್ಣನ್‌, ಸರ್‌ ಎಂ. ವಿಶ್ವೇಶ್ವರಯ್ಯ,ತಮಿಳಿನ ಪ್ರಸಿದ್ಧ ಕವಿ ತಿರುವಳ್ಳುವರ,ಕವಿ ಶಿವರಾಮ ಕಾರಂತ ಅವರ ಮೂರ್ತಿ ಸ್ಥಾಪಿಸಲಾಗಿದೆ.

20 ವಾಟಿಕಾ(ಉದ್ಯಾನ)ಗಳು: ರೈಲು ಸೌಧ ಆವರಣದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲವಿವಿಧ ಬಗೆಯ 20 ವಾಟಿಕಾಗಳಮಹರ್ಷಿ ಪತಂಜಲಿ ನವ ಭಾರತಉದ್ಯಾನವನ ಕಾಣುತ್ತದೆ. ಅಹಿಂಸಾವಾಟಿಕಾ, ಸಂತೋಷ ವಾಟಿಕಾ,ಸತ್ಯ ವಾಟಿಕಾ, ಅಸ್ತೇಯ ವಾಟಿಕಾ,ಪ್ರಾಣಾಯಾಮ ವಾಟಿಕಾ, ಸ್ವಾಧ್ಯಾಯವಾಟಿಕಾ, ಬ್ರಹ್ಮಚರ್ಯ ವಾಟಿಕಾ, ಅನಹತವಾಟಿಕಾ, ವಿಶುದ್ಧಿ ವಾಟಿಕಾ, ಮಣಿಪುರವಾಟಿಕಾ, ಆಜ್ಞಾ ವಾಟಿಕಾ, ಸ್ವಾದಿಷ್ಟಣವಾಟಿಕಾ, ಮೂಲಾಧಾರ ವಾಟಿಕಾ, ಕೈವಲ್ಯವಾಟಿಕಾ, ಗ್ಯಾನ ವಾಟಿಕಾ, ಸಹಸ್ರಾರವಾಟಿಕಾ, ಶೌಚ ವಾಟಿಕಾ, ಅಪರಿಗ್ರಹ ವಾಟಿಕಾ, ತಪ ವಾಟಿಕಾ, ಪ್ರತ್ಯಾಹಾರ ವಾಟಿಕಾಗಳ ಉದ್ಯಾನವನಗಳಿವೆ. ಆರು ವಾಟಿಕಾಗಳಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಮಾ. 21ರಂದು ಮಹರ್ಷಿ ಪತಂಜಲಿ ನವ ಭಾರತಉದ್ಯಾನಕ್ಕೆ ವಲಯದ ಜಿಎಂ ಅಜಯಕುಮಾರ ಸಿಂಗ್‌ ಹಾಗೂ ಇನ್ನುಳಿದಎಲ್ಲಾ ವಾಟಿಕಾಗಳಿಗೆ ಇತರೆ ವಿಭಾಗಗಳ ಅಧಿಕಾರಿಗಳು ಚಾಲನೆ ನೀಡಿದ್ದಾರೆ.

Advertisement

ಕಾರಂಜಿಗಳು :  ಉದ್ಯಾನಗಳ ನಡುವೆನಾಡಿನ ಹೆಸರಾಂತ ನದಿಗಳಜಲಧಾರೆ(ಕಾರಂಜಿ)ಗಳು ಕೈಬೀಸಿಕರೆಯುತ್ತವೆ. ಗೋದಾವರಿಜಲಧಾರಾ, ಯಮುನಾ ಜಲಧಾರಾ,ಕಾವೇರಿ ಜಲಧಾರಾ, ಬ್ರಹ್ಮಪುತ್ರ ಜಲಧಾರಾಗಳಿದ್ದು, ಮನಸ್ಸಿಗೆ ಮುದ ನೀಡುತ್ತಿವೆ.

ರೈಲು ಸೌಧ ಕೇವಲ ಆಡಳಿತ ಭವನ ಆಗಿರದೆ ದಾರ್ಶನಿಕರ, ಮಹಾತ್ಮರ, ವೀರ ಮಹನೀಯರ ಸ್ಮೃತಿ ವನ ಆಗಬೇಕು. ಇದನ್ನು ನೋಡಿದವರಿಗೆ ಪ್ರೇರಣೆ ಆಗಬೇಕು. ಭ್ರಷ್ಟಾಚಾರ, ಅಪ್ರಾಮಾಣಿಕತೆಗೆ ಆಸ್ಪದ ಕೊಡಬಾರದು. ಶ್ರದ್ಧೆ, ಪರಿಶ್ರಮ,ವಿಶ್ವಾಸ, ಪ್ರೀತಿಯಿಂದ ಕಾರ್ಯ ಮಾಡಬೇಕು. ಈ ಪರಿಕಲ್ಪನೆ ಇಟ್ಟುಕೊಂಡು ನೈಋತ್ಯರೈಲ್ವೆ ಮಹಾ ಪ್ರಬಂಧಕ ಅಜಯ ಕುಮಾರ ಸಿಂಗ್‌ ರೈಲು ಸೌಧ ಆವರಣಕ್ಕೆ ಹೊಸ ರೂಪಕೊಟ್ಟಿದ್ದಾರೆ. ಇದರಿಂದ ಇಲಾಖೆ ಸಿಬ್ಬಂದಿ ಮತ್ತು ಸಾರ್ವಜನಿಕರು ಪ್ರೇರಣೆ ಹೊಂದಿಜೀವನದಲ್ಲಿ ಬದಲಾವಣೆ ಹೊಂದಬಹುದು.  –ಇ. ವಿಜಯಾ, ಸಿಪಿಆರ್‌ಒ, ಎಸ್‌ಡಬ್ಲ್ಯುಆರ್‌

 

­ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next