ಬೆಂಗಳೂರು-ಮಡಗಾಂವ್ ನಡುವೆ ಒನ್‌ವೇ ಸ್ಪೇಶಲ್ ಎಕ್ಸ್ ಪ್ರೆಸ್ ರೈಲು ಓಡಿಸಲು ನಿರ್ಧರಿಸಿದೆ. 4ರಂದು ಎಸ್‌ಎಂವಿಟಿ ಬೆಂಗಳೂರು- ಮಡಗಾಂವ್ (01685) ವಿಶೇಷ ರೈಲು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 7:35 ಗಂಟೆಗೆ ಮಡಗಾಂವ್ ತಲುಪಲಿದೆ.
Advertisement
ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬಿರೂರು, ದಾವಣಗೆರೆ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್‌ರಾಕ್, ಕುಲೇಂ, ಸಂವೋರ್ದಂ (ಕುಡಚಾಡೆ)ಗಳಲ್ಲಿ ನಿಲುಗಡೆಯಾಗಲಿದೆ.
ಕೊಂಕಣ ರೈಲ್ವೆಯು ನ. 3ರಂದು ಕಾರವಾರ-ಎಸ್ ಎಂವಿಟಿ ಬೆಂಗಳೂರು ನಡುವೆ ಒನ್ ವೇ ಸ್ಪೇಷಲ್ ಎಕ್ಸಪ್ರೆಸ್ ರೈಲು ಓಡಿಸಲಿದೆ. ಅಂದು ಕಾರವಾರ-ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲು (01686) ಮಧ್ಯಾಹ್ನ 12 ಗಂಟೆಗೆ
ಕಾರವಾರದಿಂದ ಹೊರಟು ಮರುದಿನ ಬೆಳಗಿನ ಜಾವ 4 ಗಂಟೆಗೆ ಬೆಂಗಳೂರು ತಲುಪಲಿದೆ. ಅಂಕೋಲಾ, ಗೋಕರ್ಣ ರೋಡ್, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್, ಬೈಂದೂರು,
ಕುಂದಾಪುರ, ಬಾರ್ಕೂರು, ಉಡುಪಿ, ಮುಲ್ಕಿ, ಸುರತ್ಕಲ್, ಟೋಕೂರ, ಬಂಟ್ವಾಳ, ಕಬಕ, ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಣಪಟ್ಟಣ, ಕುಣಿಗಲ್, ಚಿಕ್ಕಬಾಣಾವರಗಳಲ್ಲಿ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.