Advertisement

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

06:07 PM Nov 15, 2024 | Team Udayavani |

ಉದಯವಾಣಿ ಸಮಾಚಾರ
ಕನಕಗಿರಿ: ಪಟ್ಟಣದ ಕಾಸಿಂಸಾಬ್‌ ಮಂಗಳೂರು ಅವರ ಕುಟುಂಬ ಕಳೆದ 40 ವರ್ಷಗಳಿಂದ ಸಕ್ಕರೆ ಆರತಿ ತಯಾರಿಸುತ್ತಿದ್ದಾರೆ. ಮಿಠಾಯಿ, ಕಾರ, ಜಿಲೇಬಿ, ಮೈಸೂರು ಪಾಕ್‌ ಸೇರಿದಂತೆ ನಾನಾ ತಿನಿಸು ತಯಾರಿಸುತ್ತಿದ್ದಾರೆ . ಜತೆಗೆ ತಮ್ಮ ತಂದೆ ಕಾಲದಿಂದ ನಾನಾ ಬಗೆಯ ಸಕ್ಕರೆ ಆರತಿ ತಯಾರಿಸುತ್ತಿದ್ದಾರೆ .

Advertisement

ಪ್ರತಿವರ್ಷ ಗೌರಿ ಹುಣ್ಣಿಮೆಯ 10 15 ದಿನಗಳ ಮೊದಲೇ ಸಕ್ಕರೆ ಆರತಿ ತಯಾರಿಸಲು ಕಾಸಿಂಸಾಬ್‌ ಕುಟುಂಬದ ಸದಸ್ಯರು, ಕೆಲಸಗಾರರು ಸಿದ್ಧತೆ ನಡೆಸಿ ಹುಣ್ಣಿಮೆ ಮುಗಿಯುವುದರೊಳಗೆ 30-40 ಕ್ವಿಂಟಲ್‌ ಬಣ್ಣಬಣ್ಣದ ಸಕ್ಕರೆ ಆರತಿ ತಯಾರಿಸಿ ಗಂಗಾವತಿ, ಕೊಪ್ಪಳ ಸೇರಿದಂತೆ ನಾನಾ ಕಡೆ ಮಾರುತ್ತಾರೆ.

ಗ್ರಾಮೀಣ ಭಾಗದ ಜನತೆ ಕೆ.ಜಿ., ಕ್ವಿಂಟಲ್‌ಗ‌ಟ್ಟಲೇ ಖರೀದಿಸಿ ಮಾರುತ್ತಿದ್ದಾರೆ. ಕಾಸಿಂಸಾಬ್‌ ಮಂಗಳೂರು ಕುಟುಂಬ
ಈಗಾಗಲೇನೂರಾರು ಕೆ.ಜಿ. ಸಕ್ಕರೆ ಆರತಿ ತಯಾರಿಸಿದ್ದಾರೆ.

ಕಡಿಮೆ ಲಾಭ: ಮಂಗಳೂರು ಕುಟುಂಬದಲ್ಲಿ 60ಕ್ಕೂ ಹೆಚ್ಚು ಸಕ್ಕರೆ ಆರತಿ ತಯಾರಿಸುವ ಮಣಿ(ಅಚ್ಚು)ಗಳಿದ್ದು, ಒಂದು ಸಲ 30 ಕೆ.ಜಿ ಸಕ್ಕರೆ ಸುಡುತ್ತಿದ್ದಾರೆ. ಹಿರಿಯರಿಂದಲೂ ಸಕ್ಕರೆ ಆರತಿ ತಯಾರಿಸುತ್ತಿರುವ ಕಾರಣ ಇದನ್ನು ಮಕ್ಕಳು, ಮೊಮ್ಮಕ್ಕಳು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಪ್ರತಿ ವರ್ಷ 20.30 ಕ್ವಿಂಟಾಲ್ ಸಕ್ಕರೆ ಸುಟ್ಟು ಆರತಿ ತಯಾರಿಸುತ್ತಾರೆ.

ಹೆಚ್ಚು ಶ್ರಮ, ಲಾಭ ಕಡಿಮೆ ಇದ್ದರೂ ಕುಟುಂಬಸ್ಥರಿದ್ದರೂ ಜತೆಗೆ 10 ರಿಂದ 15 ಜನ ಕೂಲಿ ಕೆಲಸಗಾರರೊಂದಿಗೆ ಸಕ್ಕರೆ ಆರತಿ ತಯಾರಿಸುತ್ತಾರೆ. ಲಕ್ಷ ರೂ. ಖರ್ಚಾದರೂ ಉಳಿಯೋದು ಮಾತ್ರ ಸಾವಿರಾರು ರೂ.ಹಣ ಎನ್ನುತ್ತಾರೆ ಕಾಸಿಂಸಾಬ್‌ ಮಂಗಳೂರು.

Advertisement

ಭಾವೈಕ್ಯತೆಗೆ ಸಾಕ್ಷಿ
ಹೊಸದಾಗಿ ಮದುವೆ ನಿಶ್ಚಯಿಸಿದ ವಧುಗಳಿಗೆ ಇತರರಿಗೆ ಈ ಭಾಗದಲ್ಲಿ ಸಕ್ಕರೆ ಆರತಿ ವಿತರಿಸುವ ರೂಢಿಯಿದೆ. ಗೌರಿ ಹುಣ್ಣಿಮೆಯಂದು ಮಹಿಳೆಯರು ಸಕ್ಕರೆ ಆರತಿಯೊಂದಿಗೆ ಗೌರಮ್ಮನಿಗೆ ಬೆಳಗುತ್ತಾರೆ. ಸಕ್ಕರೆ ಆರತಿಯಲ್ಲಿ ಬಹುತೇಕ ಹಿಂದೂ ದೇವರುಗಳ ಕೆತ್ತನೆಯಿದ್ದರೂ ಮುಸ್ಲಿಂರು ಸಕ್ಕರೆ ಆರತಿ ತಯಾರಿಸುತ್ತಿರುವುದು ಭಾವೈಕ್ಯತೆಗೆ ಸಾಕ್ಷಿಯಾಗಿದೆ.

35-40 ವರ್ಷಗಳಿಂದ ನಮ್ಮ ಕುಟುಂಬ ನಾನಾ ಕಲಾಕೃತಿಯ ಬಣ್ಣ, ಬಣ್ಣದ ಸಕ್ಕರೆ ಆರತಿ ತರಾರಿಸುತ್ತಿರುವುದು ಹೆಮ್ಮೆಯಿದೆ.
ಕನಕಗಿರಿ ಸೇರಿದಂತೆ ನಾನಾ ಕಡೆ ಕೆ.ಜಿಗೆ 100ರೂ. ಗೆ ಮಾರಾಟ ಮಾಡಲಾಗುತ್ತಿದೆ. ಉತ್ತಮ ವ್ಯಾಪಾರದ ನಿರೀಕ್ಷೆ ಇದ್ದು, ಈ ವರ್ಷ ಬೆಲೆ ಏರಿಕೆ ಕಾರಣ ವ್ಯಾಪಾರ, ಲಾಭ ಕುಸಿಯಲಿದೆ ಎನ್ನಲಾಗಿದೆ.
ಮರ್ತುಜ್‌ಸಾಬ್‌ ಮಂಗಳೂರು,
ಆರತಿ ತಯಾರಕ, ಕನಕಗಿರಿ

*ಪ್ರವೀಣ ಕೋರಿಶೆಟ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next