ಹೈದರಾಬಾದ್: ಕೊರೊನಾ ಹಾವಳಿ ಶುರುವಾದ ಬಳಿಕ ಆನ್‌ಲೈನ್-ಆಫ್ ಲೈನ್ ತರಗತಿಗಳು ಎಲ್ಲರಿಗೂ ಪರಿಚಿತವೇ ಆಗಿದೆ. ಅದನ್ನೇ ಶಾಶ್ವತವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಹೈದರಾಬಾದ್‌ನ ಸಂಸ್ಥೆಯೊಂದು ಮುಂದಾಗಿದೆ.
ಅದು ಹೈಬ್ರಿಡ್ ಮಾದರಿಯದ್ದಾಗಿರಲಿದ್ದು, ಆನ್‌ಲೈನ್‌ನಲ್ಲಿ ತರಹತಿಗಳನ್ನು ನಡೆಸಲಾಗುತ್ತದೆ. ಲ್ಯಾಬ್ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಫ್ ಲೈನ್‌ನಲ್ಲಿ ಅಂದರೆ ಶಾಲೆಯಲ್ಲಿ ನಡೆಸುವ ಹೊಸ ವ್ಯವಸ್ಥೆಯನ್ನು ಮುಂದಿನ ತಿಂಗಳಿಂದ ಪರಿಚಯಿಸಲಿದೆ. ನವದೆಹಲಿ, ಮುಂಬೈ, ಪುಣೆ, ವಿಶಾಖಪಟ್ಟಣ, ವಾರಾಣಸಿ ಸೇರಿದಂತೆ ದೇಶದ 40 ನಗರಗಳಲ್ಲಿ ಇಂಥ ಶಾಲೆಗಳನ್ನು ಸ್ಥಾಪಿಸಲು ಸಂಸ್ಥೆ ಮುಂದಾಗಿದೆ.
ಬೆಂಗಳೂರಿನಲ್ಲಿರುವ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ಈ ಎಲ್ಲಾ ಶಾಲೆಗಳಿಗೆ ಮಾತೃ ಸಂಸ್ಥೆಯಾಗಿರಲಿದೆ. ಹೈಬ್ರಿಡ್ ತರಗತಿಗಳ ಅನುಷ್ಠಾನಕ್ಕೆ ಹೈದರಾಬಾದ್‌ನ ಶಾಲೆಗಳ ನಿರ್ವಹಣಾ ಸಂಸ್ಥೆ ಕ್ರಿಮ್‌ಸನ್ ನೆರವಾಗಲಿದೆ. ಯಾವುದೇ ಭೌಗೋಳಿಕ ವ್ಯಾಪ್ತಿಯ ಪರಿವೆ ಇಲ್ಲದೆ, ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ನೀಡಲಾಗುತ್ತದೆ.
ಇದನ್ನೂ ಓದಿ:ಅಕ್ರಮ ಭೂಖರೀದಿ ಆರೋಪ ಪ್ರಕರಣದ ಸಮನ್ಸ್ ಗೆ ಧಾರವಾಡ ಹೈ ಕೋಟ್೯ ತಡೆ
ಕ್ರೀಡಾ ಚಟುವಟಿಕೆ ಮತ್ತು ಪಠ್ಯಕ್ಕೆ ಸಂಬಂಧಿಸಿದಂತೆ ಇರುವ ಪ್ರಯೋಗಶಾಲೆಗಳಲ್ಲಿನ ಅಭ್ಯಾಸಕ್ಕಾಗಿ ವಿದ್ಯಾರ್ಥಿಗಳ ಮನೆಯ ಸಮೀಪ ಇರುವ ಶಾಲೆಗಳ ಜತೆಗೆ ಸಹಭಾಗಿತ್ವ ಹೊಂದಲಾಗುತ್ತದೆ ಎಂದು ಶಾಲೆಯ ಆಡಳಿತ ಮಂಡಳಿ ಸದಸ್ಯ ಫ್ರಾನ್ಸಿಸ್ ಜೋಸೆಫ್ ತಿಳಿಸಿದ್ದಾರೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಡಿ.24ರಂದು ಈ ಹೈಬ್ರಿಡ್ ಶಾಲೆಯನ್ನು ಉದ್ಘಾಟಿಸಿದ್ದರು.