Advertisement

ಭಕ್ತರ ಆಶಯದಂತೆ ನೇರ ಪ್ರಸಾರಗೊಂಡ ಧಾರ್ಮಿಕ ಮುಖಂಡ ಸ್ವಾಮಿ ಪ್ರೇಮಾನಂದ ಪುರಿ ಅಂತ್ಯಸಂಸ್ಕಾರ

08:18 PM Apr 08, 2020 | Hari Prasad |

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕದಲ್ಲಿ ನಿಧನ ಹೊಂದಿದ ಪ್ರಮುಖ ಧಾರ್ಮಿಕ ಮುಖಂಡ ಸ್ವಾಮಿ ಪ್ರೇಮಾನಂದ ಪುರಿ (74) ಅವರ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ನೇರ ಪ್ರಸಾರದಲ್ಲಿ ಭಕ್ತರಿಗೆ ತೋರಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು.

Advertisement

ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕದಲ್ಲಿ 21 ದಿನಗಳ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯ ಧಾರ್ಮಿಕ ವಿಧಿವಿಧಾನಗಳನ್ನು ಭಕ್ತರ ಆಶಯದಂತೆ ನೇರ ಪ್ರಸಾರ ಮಾಡಲಾಯಿತು. ಒಟ್ಟು 50 ಮಂದಿ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು.

ಈ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನ್ಯಾಷನ್‌ ಪಬ್ಲಿಕ್‌ ಬ್ರಾಡ್‌ಕಾಸ್ಟರ್‌ ಚಿತ್ರೀಕರಿಸಿದೆ. ಹೀಗಾಗಿ, ಪ್ರಪಂಚದಾದ್ಯಂತ ಹರಡಿರುವ ಸ್ವಾಮಿಗಳ ಭಕ್ತ ಸಮೂಹ ವೀಕ್ಷಿಸಲು  ಸಾಧ್ಯವಾಗಿದೆ ಎಂದು ನಿರ್ಮಾಪಕ ಯಶಿಕಾ ಸಿಂಗ್‌ ಹೇಳಿದ್ದಾರೆ.

ಸ್ವಾಮಿ ಪ್ರೇಮಾನಂದ ಪುರಿ ಅವರಿಗೆ ಎರಡು ಬಾರಿ ಕೋವಿಡ್ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿತ್ತು ಮತ್ತು ಈ ಎರಡೂ ವರದಿಗಳು ನೆಗೆಟಿವ್‌ ಬಂದಿತ್ತು. 2001ರಲ್ಲಿ ಅವರು ಜೊಹಾನ್ಸ್‌ ಬರ್ಗ್‌ನ ದಕ್ಷಿಣ ಭಾಗವಾಗಿರುವ ಲೆನಾಸಿಯಾದಲ್ಲಿ ಶ್ರೀ ರಾಮಕೃಷ್ಣ ಧಾಮ ಸ್ಥಾಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next