Advertisement
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್‌ಇಂಡೀಸ್ ತಂಡವು 48.2 ಓವರ್‌ಗಳಲ್ಲಿ 260 ರನ್ನಿಗೆ ಆಲೌಟಾಯಿತು. ಇದುಕ್ಕುತ್ತರವಾಗಿ ಹೆನ್ರಿಚ್ ಕ್ಲಾಸೆನ್ ಅವರ ಸೊಗಸಾದ ಅಜೇಯ ಶತಕದಿಂದಾಗಿ ದಕ್ಷಿಣ ಆಫ್ರಿಕಾ ತಂಡವು 29.3 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 264 ರನ್ ಗಳಿಸಿ ಜಯ ಸಾಧಿಸಿತು.ಒಂದು ಹಂತದಲ್ಲಿ 87 ರನ್ನಿಗೆ 4 ವಿಕೆಟ್ ಕಳೆದುಕೊಂಡು ಒದ್ದಾಡುತ್ತಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಕ್ಲಾಸೆನ್ ಆಧರಿಸಿದರು. ಅವರು ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್ ಜತೆಗೆ ಎರಡು ಅಮೂಲ್ಯ ಜತೆಯಾಟದ ಆಟದ ಮೂಲಕ ತಂಡಕ್ಕೆ ಜಯ ತಂದು ಕೊಟ್ಟರು. ಅವರು ಜಾನ್ಸೆನ್ ಜತೆ ಆರನೇ ವಿಕೆಟಿಗೆ 103 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಕ್ಲಾಸೆನ್ 119 ರನ್ ಗಳಿಸಿ ಅಜೇಯರಾಗಿ ಉಳಿದರು. ಕೇವಲ 61 ಎಸೆತ ಎದುರಿಸಿದ ಅವರು 15 ಬೌಂಡರಿ, 5 ಸಿಕ್ಸರ್ ಬಾರಿಸಿದ್ದರು.