Advertisement

2nd Test ; ಒಂದೇ ದಿನ 23 ವಿಕೆಟ್ ಪತನ ಹೊಸ ದಾಖಲೆ: ಏಕಾಏಕಿ ಕುಸಿತ ಕಂಡ ಟೀಮ್ ಇಂಡಿಯಾ

09:18 PM Jan 03, 2024 | Team Udayavani |

ಕೇಪ್ ಟೌನ್ :ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಬುಧವಾರ ಆರಂಭವಾದ ಎರಡನೇ ಪಂದ್ಯದ ಮೊದಲ ದಿನ ಬೌಲರ್ ಗಳು ಪರಾಕ್ರಮ ಮೆರೆದಿದ್ದಾರೆ. ಭಾರತ ಬೌಲಿಂಗ್ ದಾಳಿ ನಡೆಸಿ ತಂಡವನ್ನು ಅಗ್ಗದ 55 ರನ್ ಗಳಿಗೆ ಆಲೌಟ್ ಮಾಡಿತು. ಬೆನ್ನಲ್ಲೇ ಬಿಗಿ ದಾಳಿ ಮೂಲಕ ಟೀಮ್ ಇಂಡಿಯಾವನ್ನು ಆಫ್ರಿಕಾ ಬೌಲರ್ ಗಳು 153 ಕ್ಕೆ ಕಟ್ಟಿ ಹಾಕುವ ಮೂಲಕ ಪಂದ್ಯದ ಮೇಲಿನ ಕುತೂಹಲ ಹೆಚ್ಚಿಸುವಂತೆ ಮಾಡಿದ್ದಾರೆ.

Advertisement

ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು . ಬಿಗಿ ಬೌಲಿಂಗ್ ದಾಳಿ ನಡೆಸಿದ ಮೊಹಮದ್ ಸಿರಾಜ್ 6 ವಿಕೆಟ್ ಕಿತ್ತು ಹರಿಣಗಳ ಪಾಲಿಗೆ ಘಾತಕವಾಗಿ ಪರಿಣಮಿಸಿದರು.ಬಿಗಿ ದಾಳಿಯನ್ನು ಎದುರಿಸಲಾಗದೆ ಕಂಗಾಲಾಯಿತು. 34 ರನ್ ಆಗುವಷ್ಟರಲ್ಲೇ 5 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತು. ಪೆವಿಲಿಯನ್ ಪರೇಡ್ ನಡುವೆ ಬೆಡಿಂಗ್ಹ್ಯಾಮ್ 12 ರನ್ ಮತ್ತು ವಿಕೆಟ್ ಕೀಪರ್ ವೆರ್ರೆನ್ನೆ 15 ರನ್ ಮಾತ್ರ ಗರಿಷ್ಠ ಸ್ಕೋರ್.9 ಓವರ್ ಎಸೆದ ಸಿರಾಜ್ 3 ಮೇಡನ್ ಓವರ್ 15 ರನ್ ಮಾತ್ರ ಬಿಟ್ಟುಕೊಟ್ಟು 6 ವಿಕೆಟ್ ಕಬಳಿಸಿದರು. ಬುಮ್ರಾ ಮತ್ತು ಮುಕೇಶ್ ಕುಮಾರ್ 2 ವಿಕೆಟ್ ಕಿತ್ತರು.

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 34.5 ಓವರ್ ಗಳಲ್ಲಿ 153 ರನ್ ಗಳಿಗೆ ಆಲೌಟಾಯಿತು. ಅಚ್ಚರಿಯೆಂದರೆ ದಕ್ಷಿಣ ಆಫ್ರಿಕಾದ ಬಿಗಿ ದಾಳಿಗೆ ನಲುಗಿದ ಭಾರತದ 7 ಮಂದಿ ಶೂನ್ಯಕ್ಕೆ ನಿರ್ಗಮಿಸಿದರು. ರಬಾಡ, ಲುಂಗಿ ಎನ್ಗಿಡಿ ಮತ್ತು ನಾಂದ್ರೆ ಬರ್ಗರ್ ತಲಾ 3 ವಿಕೆಟ್ ಪಡೆದರು.

ನಾಯಕ ರೋಹಿತ್ ಶರ್ಮ 39 ರನ್ ಗಳಿಸಿ ಔಟಾದರೆ, ಕೊಹ್ಲಿ 46, ಶುಭಮನ್ ಗಿಲ್ 36 ರನ್ ಗಳಿಸಿದ್ದು ವಿಶೇಷವಾಗಿತ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಶೂನ್ಯಕ್ಕೆ ನಿರ್ಗಮಿಸಿದರು. 110 ಕ್ಕೆ 4 ವಿಕೆಟ್ ಕಳೆದು ಕೊಂಡಿದ್ದ ಭಾರತ 153 ರನ್ ಆಗುವಷ್ಟರಲ್ಲಿ ಸರ್ವ ಪತನ ಕಂಡಿತು.

ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ ನಲ್ಲಿ 62ಕ್ಕೆ 3 ವಿಕೆಟ್ ಕಳೆದುಕೊಂಡು 36 ರನ್‌ಗಳ ಹಿನ್ನಡೆಯಲ್ಲಿದೆ.

Advertisement

ಹೊಸ ದಾಖಲೆ
ಒಂದೇ ದಿನ 23 ವಿಕೆಟ್ ಪತನವಾಗಿರುವುದು ಟೆಸ್ಟ್ ಇತಿಹಾಸದಲ್ಲಿ ಈ ಶತಮಾನದ ಹೊಸ ದಾಖಲೆಯಾಗಿದೆ.
1902 ರಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವೆ ಮೆಲ್ಬೋರ್ನ್ ನಲ್ಲಿ ನಡೆದ ಪಂದ್ಯದಲ್ಲಿ 25 ವಿಕೆಟ್ ಪತನವಾಗಿದ್ದು ಈ ಹಿಂದಿನ ದಾಖಲೆಯಾಗಿತ್ತು. 1888 ರಲ್ಲಿ ಲಾರ್ಡ್ಸ್ ನಲ್ಲಿ ನಡೆದ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಎರಡನೇ ದಿನದ ಆಟದಲ್ಲಿ 27 ವಿಕೆಟ್ ಪತನವಾಗಿತ್ತು. 2018 ರಲ್ಲಿ ಬೆಂಗಳೂರಿನಲ್ಲಿ ಭಾರತ ಮತ್ತು ಅಫ್ಘಾನಿಸ್ಥಾನ ನಡುವೆ ನಡೆದ ಪಂದ್ಯದಲ್ಲಿ 2ನೇ ದಿನ 24 ವಿಕೆಟ್ ಪತನವಾಗಿತ್ತು.

ನಾಯಕ ಡೀನ್ ಎಲ್ಗರ್ ವಿದಾಯ ಪಂದ್ಯ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕ ಡೀನ್ ಎಲ್ಗರ್ ಅವರ ಅಂತಿಮ ಪಂದ್ಯ ಇದಾಯಿತು. ಔಟಾಗಿ ಹಿಂದಿರುಗುವ ವೇಳೆ ಅವರನ್ನು ಭಾರತೀಯ ಆಟಗಾರರು ಅಭಿನಂದಿಸಿದರು. ಕೊಹ್ಲಿಅಪ್ಪುಗೆ ನೀಡಿದರು. ಡ್ರೆಸ್ಸಿಂಗ್ ರೂಮ್ ಗೆ ತೆರಳುತ್ತಿದ್ದ ವೇಳೆ ಪ್ರೇಕ್ಷಕರು ಚಪ್ಪಾಳೆಯಿಂದ ಸ್ವಾಗತಿಸಿದರು.

ಮುಖೇಶ್‌ ಎಸೆದ ರೌಂಡ್ ದ ವಿಕೇಟ್‌ನಿಂದ ಹೊರಗಿದ್ದ ಚೆಂಡನ್ನು ಮೊದಲ ಸ್ಲಿಪ್‌ನಲ್ಲಿ ಕೊಹ್ಲಿಗೆ ಆರಾಮದಾಯಕ ಕ್ಯಾಚ್ ನೀಡಿದರು. ಎಲ್ಗರ್ ಬಹುಶಃ ಅದನ್ನು ಬಿಡಬಹುದಿತ್ತು ಆದರೆ ಹೊಡೆಯಲು ಮುಂದಾಗಿ 12 ರನ್ ಗಳಿಸಿದ್ದ ವೇಳೆ ಔಟಾದರು. ಮೊದಲ ಇನ್ನಿಂಗ್ಸ್ ನಲ್ಲಿ 4 ರನ್ ಗೆ ಔಟಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next