Advertisement

ಟಿ20: ಆಫ್ರಿಕಾ ವಿರುದ್ಧ ಬಾಂಗ್ಲಾಕ್ಕೆ ಸೋಲು

07:50 AM Oct 28, 2017 | Team Udayavani |

ಬ್ಲೋಮ್‌ಫಾಂಟೇನ್‌: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಹೋರಾಟ ನೀಡಿಯೂ ಬಾಂಗ್ಲಾದೇಶ 20 ರನ್ನುಗಳ ಸೋಲನುಭವಿಸಿದೆ. 

Advertisement

ಗುರುವಾರ ರಾತ್ರಿ ಬ್ಲೋಮ್‌ಫಾಂಟೀನ್‌ನಲ್ಲಿ ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ದಕ್ಷಿಣ ಆಫ್ರಿಕಾ ನಾಲ್ಕೇ ವಿಕೆಟಿಗೆ 195 ರನ್‌ ಬಾರಿಸಿದರೆ, ಈ ಮೊತ್ತವನ್ನು ಬೆನ್ನಟ್ಟಿಕೊಂಡು ಬಂದ ಬಾಂಗ್ಲಾದೇಶ 9ಕ್ಕೆ 175 ರನ್‌ ಬಾರಿಸಿ ಶರಣಾಯಿತು. ಹರಿಣಗಳ ಬೃಹತ್‌ ಮೊತ್ತದಲ್ಲಿ ಆರಂಭಕಾರ ಕ್ವಿಂಟನ್‌ ಡಿ ಕಾಕ್‌ (44 ಎಸೆತ, 59 ರನ್‌, 5 ಬೌಂಡರಿ, 1 ಸಿಕ್ಸರ್‌), ಎಬಿ ಡಿ ವಿಲಿಯರ್ (27 ಎಸೆತ, 49 ರನ್‌, 8 ಬೌಂಡರಿ), ಕೊನೆಯಲ್ಲಿ ಸಿಡಿದು ನಿಂತ ಫ‌ರ್ಹಾನ್‌ ಬೆಹದೀìನ್‌ (ಅಜೇಯ 36 ರನ್‌, 17 ಎಸೆತ, 2 ಬೌಂಡರಿ, 2 ಸಿಕ್ಸರ್‌), ಡೇವಿಡ್‌ ಮಿಲ್ಲರ್‌ (ಅಜೇಯ 25 ರನ್‌, 19 ಎಸೆತ) ಅವರ ಬ್ಯಾಟಿಂಗ್‌ ಮಹತ್ವದ ಪಾತ್ರ ವಹಿಸಿತು. ಮಿಲ್ಲರ್‌-ಬೆಹರ್ದಿನ್‌ ಕೊನೆಯ 5 ಓವರ್‌ಗಳಲ್ಲಿ 62 ರನ್‌ ಸಿಡಿಸಿದರು. ಎಬಿಡಿ ಪಂದ್ಯಶ್ರೇಷ್ಠರೆನಿಸಿದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ 20 ಓವರ್‌, 195/5 (ಡಿ ಕಾಕ್‌ 59, ಡಿ ವಿಲಿಯರ್ 49, ಮಿರಾಜ್‌ 31ಕ್ಕೆ 2). ಬಾಂಗ್ಲಾದೇಶ 20 ಓವರ್‌, 175/9 (ಸರ್ಕಾರ್‌ 47, ಸೈಫ‌ುದ್ದೀನ್‌ 39, ಫೆಲುಕ್ವಾಯೊ 25ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next