ಮೆಲ್ಬರ್ನ್: ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಸ್ಟ್ರೇಲಿಯ ತನ್ನ ಟೆಸ್ಟ್ ಹಾಗೂ ಟಿ20 ತಂಡಗಳನ್ನು ಸೋಮವಾರ ಹೆಸರಿಸಿದ್ದು, ಒಂದೆರಡು ಅಚ್ಚರಿಗಳು ಗೋಚರಿಸಿವೆ. ಪಶ್ಚಿಮ ಆಸ್ಟ್ರೇಲಿಯದ ಪೇಸ್ ಬೌಲರ್ ಜೇ ರಿಚರ್ಡ್‌ಸನ್ ಮತ್ತು ಎಡಗೈ ಸ್ಪಿನ್ನರ್ ಜಾನ್ ಹಾಲಂಡ್ ಸೇರ್ಪಡೆ ಆಶ್ಚರ್ಯಕ್ಕೆ ಕಾರಣವಾಗಿದೆ.
ಜಾನ್ ಹಾಲಂಡ್ 2016ರ ಶ್ರೀಲಂಕಾ ಪ್ರವಾಸದ ವೇಳೆ ಆಸ್ಟ್ರೇಲಿಯ ತಂಡದಲ್ಲಿದ್ದರು. 2 ಟೆಸ್ಟ್ ಆಡಿ 5 ವಿಕೆಟ್ ಉರುಳಿಸಿದ್ದರು. ಆದರೆ ಅಂದಿನ ಸರಣಿಯಲ್ಲಿ ಆಸೀಸ್ ವೈಟ್‌ವಾಶ್ ಸಂಕಟಕ್ಕೆ ಸಿಲುಕಿತ್ತು. ಅಂದು ಮೂಲೆಗುಂಪಾದ ಹಾಲಂಡ್ ಈಗ ಮತ್ತೆ ಅವಕಾಶ ಪಡೆದಿದ್ದಾರೆ.
21ರ ಹರೆಯದ ರಿಚರ್ಡ್‌ಸನ್ ಕಳೆದ ವರ್ಷ ಶ್ರೀಲಂಕಾ ವಿರುದ್ಧ ಟಿ20 ಪಂದ್ಯ ಆಡಿದ್ದರು. ಪ್ರಸ್ತುತ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಅವಕಾಶ ಪಡೆದಿದ್ದಾರೆ. ಉಳಿದಂತೆ ಆಸೀಸ್ ಟೆಸ್ಟ್ ತಂಡದಲ್ಲಿ ಗಮನಾರ್ಹ ಬದಲಾವಣೆ ಸಂಭವಿಸಿಲ್ಲ. ತಂಡವನ್ನು ಸ್ಟೀವನ್ ಸ್ಮಿತ್ ಮುನ್ನಡೆಸಲಿದ್ದಾರೆ. ಆದರೆ ಟಿ20 ಸರಣಿಗಾಗಿ ಸ್ಮಿತ್‌ಗೆ ವಿಶ್ರಾಂತಿ ನೀಡಲಾಗಿದ್ದು, ಡೇವಿಡ್ ವಾರ್ನರ್ ಅವರಿಗೆ ತಂಡದ ನೇತೃತ್ವ ವಹಿಸಲಿದ್ದಾರೆ.
ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಮಾ. ಒಂದರಿಂದ ಡರ್ಬನ್‌ನಲ್ಲಿ ಆರಂಭವಾಗಲಿದೆ. ಉಳಿದ ಪಂದ್ಯಗಳ ತಾಣ ಪೋರ್ಟ್ ಎಲಿಜಬೆತ್, ಕೇಪ್‌ಟೌನ್ ಮತ್ತು ಜೊಹಾನ್ಸ್‌ಬರ್ಗ್.
ಆಸ್ಟ್ರೇಲಿಯ ಟೆಸ್ಟ್ ತಂಡ: ಸ್ಟೀವನ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಕ್ಯಾಮರನ್ ಬಾನ್‌ಕ್ರಾಫ್ಟ್, ಉಸ್ಮಾನ್ ಖ್ವಾಜಾ, ಪೀಟರ್ ಹ್ಯಾಂಡ್ಸ್‌ಕಾಂಬ್, ಶಾನ್ ಮಾರ್ಷ್, ಮಿಚೆಲ್ ಮಾರ್ಷ್, ಟಿಮ್ ಪೇನ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಪ್ಯಾಟ್ ಕಮಿನ್ಸ್, ನಥನ್ ಲಿಯೋನ್, ಜಾಕ್ಸನ್ ಬರ್ಡ್, ಜಾನ್ ಹಾಲಂಡ್, ಜೇ ರಿಚರ್ಡ್‌ಸನ್.
ಆಸ್ಟ್ರೇಲಿಯ ಟಿ20 ತಂಡ: ಡೇವಿಡ್ ವಾರ್ನರ್ (ನಾಯಕ), ಆರನ್ ಫಿಂಚ್, ಆ್ಯಶrನ್ ಅಗರ್, ಅಲೆಕ್ಸ್ ಕ್ಯಾರಿ, ಬೆನ್ ಡ್ವಾರ್ಶಿಯಸ್. ಟ್ರ್ಯಾವಿಸ್ ಹೆಡ್, ಕ್ರಿಸ್ ಲಿನ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಡಿ’ಆರ್ಸಿ ಶಾರ್ಟ್, ಬಿಲ್ಲಿ ಸ್ಟಾನ್‌ಲೇಕ್, ಮಾರ್ಕಸ್ ಸ್ಟೋಯಿನಿಸ್, ಆ್ಯಂಡ್ರೂé ಟೈ, ಆ್ಯಡಂ ಝಂಪ.