Advertisement

ದಕ್ಷಿಣ ಆಫ್ರಿಕಾದ ಬಾರೊಂದರಲ್ಲಿ ಗುಂಡಿನ ದಾಳಿ ;ಕನಿಷ್ಠ 14 ಮಂದಿ ಬಲಿ

02:13 PM Jul 10, 2022 | Team Udayavani |

ಜೋಹಾನ್ಸ್‌ಬರ್ಗ್‌ : ಸೊವೆಟೊ ಟೌನ್‌ಶಿಪ್‌ನಲ್ಲಿರುವ ಹೋಟೆಲಿನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಕನಿಷ್ಠ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ.

Advertisement

ಶನಿವಾರ ತಡರಾತ್ರಿ ಮಿನಿಬಸ್ ಟ್ಯಾಕ್ಸಿಯಲ್ಲಿ ಬಂದ ಪುರುಷರ ಗುಂಪು ಬಾರ್‌ನಲ್ಲಿ ಕೆಲವರ ಮೇಲೆ ಗುಂಡು ಹಾರಿಸಿದೆ ಎಂಬ ವರದಿಗಳ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಭಾನುವಾರ ಬೆಳಗ್ಗೆ ಪೊಲೀಸರು  ಶವಗಳನ್ನು ಹೊರತೆಗೆದು ಸಾಮೂಹಿಕ ಗುಂಡಿನ ದಾಳಿಗೆ ಕಾರಣವೇನು ಎಂದು ತನಿಖೆ ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು  ಕ್ರಿಸ್ ಹನಿ ಬರಗವಾನಾಥ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next