Advertisement
ಲಂಕೆಗೆ 4ನೇ 5-0 ಸೋಲುವಿಶ್ವಕಪ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾಕ್ಕೆ ಈ ಗೆಲುವು ಹೊಸ ಹುಮ್ಮಸ್ಸು ಮೂಡಿಸಿದರೆ, ಶ್ರೀಲಂಕಾ ತೀವ್ರ ಹಿನ್ನಡೆ ಅನುಭವಿಸಿದೆ. 2015ರ ವಿಶ್ವಕಪ್ ಬಳಿಕ ಶ್ರೀಲಂಕಾ ದ್ವಿಪಕ್ಷೀಯ ಸರಣಿಯಲ್ಲಿ 5-0 ಅಂತರದಿಂದ ಸೋತ 4ನೇ ನಿದರ್ಶನ ಇದಾಗಿದೆ.
14 ರನ್ ಆಗುವಷ್ಟರಲ್ಲಿ ಆರಂಭಿ ಕರಿಬ್ಬರನ್ನೂ ಕಳೆದುಕೊಂಡ ಲಂಕೆಗೆ ಈ ಆಘಾತದಿಂದ ಚೇತರಿಸಿ ಕೊಳ್ಳಲು ಸಾಧ್ಯವಾಗಲಿಲ್ಲ. ಮಧ್ಯಮ ಸರದಿಯ ಆಟಗಾರರು ಹೋರಾಟ ನಡೆಸಿದರೂ ರನ್ ಗತಿ ಏರಿಸಲು ವಿಫಲರಾದರು. ಕುಸಲ್ ಮೆಂಡಿಸ್ ಅವರಿಂದ ಏಕೈಕ ಅರ್ಧ ಶತಕ ದಾಖಲಾಯಿತು (84 ಎಸೆತಗಳಿಂದ 56 ರನ್). ಕೊನೆಯಲ್ಲಿ ಇಸುರು ಉದಾನ ಮುನ್ನುಗ್ಗಿ ಬಾರಿಸಿದ್ದರಿಂದ ತಂಡದ ಮೊತ್ತ ಇನ್ನೂರರ ಗಡಿ ದಾಟಿತು (29 ಎಸೆತ, 32 ರನ್). ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-49.3 ಓವರ್‌ಗಳಲ್ಲಿ 225 (ಕುಸಲ್ ಮೆಂಡಿಸ್ 56, ಪ್ರಿಯಾಮಲ್ 33, ಉದಾನ 32, ಆ್ಯಂಜೆಲೊ ಪೆರೆರ 31, ರಬಾಡ 50ಕ್ಕೆ 3, ತಾಹಿರ್ 33ಕ್ಕೆ 2, ನೋರ್ಜೆ 35ಕ್ಕೆ 2). ದಕ್ಷಿಣ ಆಫ್ರಿಕಾ-28 ಓವರ್‌ಗಳಲ್ಲಿ 2 ವಿಕೆಟಿಗೆ 135 (ಮಾರ್ಕ್‌ರಮ್ ಔಟಾಗದೆ 67, ಡುಸೆನ್ 28).
Related Articles
Advertisement