ಮುಂಬೈ: ಭಾರತ ಏಕದಿನ ತಂಡದ ನಾಯಕತ್ವ ಬದಲಾವಣೆಯ ಬಳಿಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಕೆಲ ಮಾತುಗಳು ನಡೆದಿದ್ದವು. ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧ ವಿರಾಟ್ ಅವರು ಬಿಸಿಸಿಐ ಗೆ ಕುಟುಕಿದ್ದರು.
ಇದೀಗ ಸೌರವ್ ಗಂಗೂಲಿ ಅವರು ವಿರಾಟ್ ಕೊಹ್ಲಿಯ ಅಟಿಟ್ಯೂಡ್ ನ್ನು ಇಷ್ಟ ಪಡುತ್ತೇನೆ ಆದರೆ ಅವರು ತುಂಬಾ ಜಗಳವಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಗುರ್ಗಾಂವ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗಂಗೂಲಿ ಅವರು ಯಾವ ಆಟಗಾರನ ವರ್ತನೆಯನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಕೇಳಲಾಯಿತು. ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನನಗೆ ವಿರಾಟ್ ಕೊಹ್ಲಿ ವರ್ತನೆ ಇಷ್ಟ ಆದರೆ ಅವರು ತುಂಬಾ ಜಗಳವಾಡುತ್ತಾರೆ” ಎಂದು ಹೇಳಿದರು.
ಇದನ್ನೂ ಓದಿ:ಚೆನ್ನೈ ತಂಡಕ್ಕೆ ಧೋನಿ ಮೊದಲ ಆಯ್ಕೆಯ ನಾಯಕನಾಗಿರಲಿಲ್ಲ: ಬದ್ರಿನಾಥ್
ಜೀವನದಲ್ಲಿ ಎಲ್ಲಾ ಒತ್ತಡವನ್ನು ಹೇಗೆ ಎದುರಿಸುತ್ತಾರೆ ಎಂಬ ಪ್ರಶ್ನೆಗೆ ವ್ಯಂಗ್ಯವಾಗಿ ಉತ್ತರಿಸಿದ ಗಂಗೂಲಿ “ಜೀವನದಲ್ಲಿ ಯಾವುದೇ ಒತ್ತಡವಿಲ್ಲ. ಹೆಂಡತಿ ಮತ್ತು ಗೆಳತಿಯರು ಮಾತ್ರ ಒತ್ತಡವನ್ನು ನೀಡುತ್ತಾರೆ” ಎಂದರು.
ವಿರಾಟ್ ಕೊಹ್ಲಿಗೆ ಟಿ20 ನಾಯಕತ್ವ ತ್ಯಜಿಸದಂತೆ ಮೊದಲೇ ಮನವಿ ಮಾಡಿಕೊಂಡಿದ್ದೆ ಎಂದು ಸೌರವ್ ಗಂಗೂಲಿ ಹೇಳಿದ್ದರು. ಆದರೆ ಇದಕ್ಕೆ ಉತ್ತರಿಸಿದ ವಿರಾಟ್ ಕೊಹ್ಲಿ, “ ನನಗೆ ಯಾರಿಗೂ ನಾಯಕತ್ವ ತೊರೆಯದಂತೆ ಸೂಚಿಸಿರಲಿಲ್ಲ” ಎಂದಿದ್ದರು.