Advertisement
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಡೆದಿರುವ ಮತ ಎಣಿಕೆ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಅರ್ಜಿ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಸದ್ಯದಲ್ಲೇ ತೀರ್ಪು ಬರುವ ನಿರೀಕ್ಷೆ ಇದೆ. ಒಂದು ವೇಳೆ ಮರು ಎಣಿಕೆ ನಡೆದರೆ ಶೇ.100ರಷ್ಟು ನಮ್ಮ ಪರವಾಗಿ ಫಲಿತಾಂಶ ಬರಲಿದೆ. ಹೀಗಾಗಿ ಲೋಕಸಭೆ ಚುನಾವಣೆ ಬಗ್ಗೆ ಯೋಚನೆ ಮಾಡಿರಲಿಲ್ಲ ಎಂದರು.
ಬೆಂಗಳೂರು ದಕ್ಷಿಣ ಅಥವಾ ಉತ್ತರದಿಂದ ಕಾಂಗ್ರೆಸ್‌ನಿಂದ ಪ್ರಿಯಾಕೃಷ್ಣ ಅವರನ್ನು ಕಣಕ್ಕಿಳಿಸುವ ಆಶಯ ಹೊಂದಿದ್ದ ಶಾಸಕ ಎಂ.ಕೃಷ್ಣಪ್ಪ, ನಮಗೇನೂ ಸೂಚನೆ ಬಂದಿಲ್ಲ. ನಾವು ತಲೆಕೆಡಿಸಿಕೊಂಡಿಲ್ಲ. ಸುರ್ಜೇವಾಲ ಅವರು ಈ ಬಗ್ಗೆ ಚರ್ಚಿಸಿಲ್ಲ. ಹೀಗಾಗಿ ಈ ಬಗ್ಗೆ ಮಾತನಾಡುವುದು ಅಪ್ರಸ್ತುತ. ನನಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ಯಾರ ಧರ್ಮಕ್ಕೆ ಕೊಡುತ್ತಾರೆ. ಕೊಟ್ಟಿಲ್ಲ ಅಷ್ಟೇ ಎಂದು ಅಸಮಾಧಾನ ಹೊರಹಾಕಿದರು.