Advertisement

“ಆತ್ಮೋನ್ನತಿಯಿಂದ ಸಮಾಜೋನ್ನತಿ’

05:45 AM Jul 21, 2017 | Harsha Rao |

ವಿಟ್ಲ : ಸಂಪತ್ತನ್ನು ಸೇವೆ ಗಾಗಿ ಸದ್ವಿನಿಯೋಗ ಮಾಡಬೇಕು. ಅಧ್ಯಾತ್ಮ ವಿದ್ಯೆಯಿಂದ ನರ ನಾರಾಯಣನಾ ಗಲುಸಾಧ್ಯ. ಸಮಾಜದ ಉನ್ನತಿಯ ಬೇರು ಆತ್ಮೋನ್ನತಿಯಲ್ಲಿದೆ ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದರು.

Advertisement

ಅವರು ಗುರುವಾರ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀಗಳವರ ಜನ್ಮ ದಿನೋತ್ಸವ ಸಮಿತಿ ಹಾಗೂ ಶ್ರೀ ಸಂಸ್ಥಾನದ ಎಲ್ಲ ಸಹಸಂಸ್ಥೆಗಳ ವತಿಯಿಂದ ಶ್ರೀಗಳವರ ಜನ್ಮದಿನೋತ್ಸವದ ಅಂಗವಾಗಿ ಜರಗಿದ ಪಾದಪೂಜೆ, ಗುರುವಂದನೆ ಬಳಿಕ ಜನ್ಮದಿನದ ಸಂದೇಶ ನೀಡಿದರು.

ಬದುಕು ಆದರ್ಶವಾಗಬೇಕು. ಧರ್ಮದ ಪಥದಲ್ಲಿ ನಡೆದರೆ ಬದುಕು ಸಾರ್ಥಕವಾಗುತ್ತದೆ. ಭಾಷೆ ಹಿಂದಿನ ಸಂಸ್ಕೃತಿಯ ಅರಿವಿರಬೇಕು ಎಂದರು.

ಹೆಸರು ಶಾಶ್ವತವಾಗಲಿ
ಬಳ್ಳಾರಿ ಹೂವಿನಹಡಗಲಿ ಮಲ್ಲನಕೇರಿ ವಿರಕ್ತಮಠ ಅಭಿನವ ಚೆನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಉಸಿರಿರುವಾಗ ಹೆಸರು ಗಳಿಸಬೇಕು. ಅದು ಶಾಶ್ವತವಾಗಿರುತ್ತದೆ. ಒಡಿಯೂರು ಶ್ರೀಗಳು ತಮಗಾಗಿ ಏನನ್ನೂ ಬಯಸದೇ ಸಮಾಜಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಇಂತಹ ಮಹಾತ್ಮರಿಂದ ಸಮಾಜಕ್ಕೆ ಮಹಾನ್‌ ಕೊಡುಗೆ ಸಲ್ಲುತ್ತದೆ ಎಂದರು.

ಸಮಾಜಕ್ಕೆ ಮಾದರಿ
ಬಳ್ಳಾರಿ ಹೂವಿನಹಡಗಲಿ ಕೊಪ್ಪಳ ಗವಿಸಿದ್ಧೇಶ್ವರ ಸಂಸ್ಥಾನದ ಡಾ| ಹಿರಿಶಾಂತವೀರ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಸಂಸ್ಕೃತಿ, ಸಂಸ್ಕಾರ ಒಡಿಯೂರಿನಲ್ಲಿ ನೋಡಬಹುದು. ಭಕ್ತಿ, ಶ್ರದ್ಧೆ, ಪೂಜೆ, ಪುನಸ್ಕಾರಗಳು ಅತ್ಯಂತ ಸಂಭ್ರಮದಲ್ಲಿ ನಡೆಯುತ್ತಿವೆ. ಸಮಾಜಕ್ಕೆ ಇದು ಮಾದರಿಯಾಗಿದೆ ಎಂದರು.

Advertisement

ಸಾಧ್ವಿà ಶ್ರೀ ಮಾತಾನಂದಮಯೀ ಮತ್ತು ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷ  ಎಚ್‌ಕೆ.ಪುರುಷೋತ್ತಮ್‌ ದಂಪತಿ ಅವರಿಂದ ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ಶ್ರೀಗುರು ಪಾದಪೂಜೆ ನೆರವೇರಿತು. ಬಳಿಕ ಸ್ವಾಮೀಜಿಯವರಿಗೆ ಭಕ್ತರಿಂದ ನವಧಾನ್ಯಗಳ ತುಲಾಭಾರ ಸೇವೆ ಜರಗಿತು. ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದವರ ವತಿಯಿಂದ ಸಲ್ಲಿಸಿದ ಉಯ್ನಾಲೆ ಸೇವೆಗೆ ಸ್ವಾಮೀಜಿಯವರ ಮಾತೃಶ್ರೀ ಅಂತಕ್ಕೆ ಅವರು ಚಾಲನೆ ನೀಡಿದರ‌ು.

ಕರ್ನಾಟಕ ರಾಜ್ಯ ಜೋಗಿ ಸಮಾಜದ ಮಹಿಳಾ ಭಜನ ಮಂಡಳಿಯವರಿಂದ ಭಜನೆ ನಡೆಯಿತು. ವಿಕಾಸ ಕೇಂದ್ರದ ಪುಟಾಣಿಗಳಿಂದ ಗುರುನಮನ ಸಲ್ಲಿಸ ಲಾಯಿತು.

ಉದ್ಯಮಿ ವಾಮಯ್ಯ ಶೆಟ್ಟಿ ಮುಂಬಯಿ, ಜನ್ಮದಿನೋತ್ಸವ ಸಮಿತಿ ಸಂಚಾಲಕ ತಾರಾನಾಥ ಕೊಟ್ಟಾರಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಅಧ್ಯಕ್ಷ ಅಶೋಕ್‌ ಕುಮಾರ್‌ ಬಿಜೈ, ಮಂಗಳೂರು ಶ್ರೀ ಗುರುದೇವ ಸೇವಾ ಬಳಗ ಅಧ್ಯಕ್ಷ ಜಯಂತ್‌ ಜೆ.ಕೋಟ್ಯಾನ್‌, ಒಡಿಯೂರುಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ  ಸುರೇಶ್‌ ರೈ, ನಿರ್ದೇಶಕ ವೇಣುಗೋಪಾಲ ಮಾರ್ಲ, ಬಿ.ಕೆ.ಚಂದ್ರಶೇಖರ್‌, ಲಿಂಗಪ್ಪ ಗೌಡ ಪನೆಯಡ್ಕ, ತಾರಾನಾಥ ಶೆಟ್ಟಿ ಒಡಿ ಯೂರು, ಸ್ವಾಗತ ಸಮಿತಿಯ ದಾಮೋದರ ಶೆಟ್ಟಿ ಪಟ್ಲಗುತ್ತು, ವಾಸು ದೇವ ಆರ್‌.ಕೊಟ್ಟಾರಿ, ಶಿವಪ್ರಸಾದ 
ಶೆಟ್ಟಿ  ಅನೆಯಾಲಗುತ್ತು, ಶ್ರೀಧರ ಶೆಟ್ಟಿ ಗುಬÂ ಮೇಗಿನಗುತ್ತು, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಶೆಟ್ಟಿ, ಕನ್ಯಾನ ಗ್ರಾಮ ಸಮಿತಿ ಅಧ್ಯಕ್ಷ ಕೆ.ಪಿ.ರಘುರಾಮ ಶೆಟ್ಟಿ, ಕರೋಪಾಡಿ ಗ್ರಾಮ ಸಮಿತಿ ಅಧ್ಯಕ್ಷ ರಘುನಾಥ ಶೆಟ್ಟಿ ಪಟ್ಲಗುತ್ತು, ಹಿರಿಯರಾದ ಮಲಾರು ಜಯರಾಮ ರೈ, ವೇದಿಕೆ ಸಮಿತಿ ಸಂಚಾಲಕ ಸಂತೋಷ್‌ ಭಂಡಾರಿ, ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್‌ ಮೊದಲಾದವರು ಉಪಸ್ಥಿತರಿದ್ದರು. ರೇಣುಕಾ ಎಸ್‌. ರೈ ಆಶಯ ಗೀತೆ ಹಾಡಿದರು. 

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಎಲ್ಲ ಘಟಕಗಳು, ಗ್ರಾಮ ವಿಕಾಸ ಯೋಜನೆ ಗ್ರಾಮ ಸಮಿತಿಗಳ ಮಂಡಲ ಸಮಿತಿ, ಘಟ ಸಮಿತಿಗಳ ಪದಾಧಿಕಾರಿಗಳು, ಬಂಟ್ವಾಳ ತಾ| ಮೇಲ್ವಿಚಾರಕ ಸದಾಶಿವ ಅಳಿಕೆ  ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next