Advertisement
ಹತ್ತಿರದ ದಾರಿ
Related Articles
Advertisement
ಶಿಫಾರಸು
ಅಂದಿನ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು 2016ರಲ್ಲಿ ಅಂದಿನ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಮೂಲಕ ಮಂಜೂರಾತಿ ಮಾಡಿಸಿದ್ದರೂ ಕೊನೇ ಕ್ಷಣದಲ್ಲಿ ಸಿಆರ್‌ಎಫ್1ನೇ ಹಂತದ ಪಟ್ಟಿಯಲ್ಲಿ ಸೇತುವೆ ಹೆಸರು ಕೈ ಬಿಟ್ಟು ಹೊಯಿತು. ಆ ಸಂದರ್ಭದಲ್ಲಿ ಅಂದಿನ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರೂ ಸೇತುವೆ ನಿರ್ಮಾಣಕ್ಕೆ ಶಿಫಾರಸು ಮಾಡಿದ್ದರು.
ಎರಡನೇ ಪ್ರಯತ್ನ
ಸಿಆರ್‌ಎಫ್ – 2ನೇ ಹಂತದಲ್ಲಿ ಮಂಜೂರಾತಿ ವಿಳಂಬವಾಗುತ್ತದೆ ಎಂದು ತತ್‌ಕ್ಷಣ ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಅವರು ಲೋಕೋಪಯೋಗಿ ಸಚಿವರಾಗಿದ್ದ ಡಾ| ಎಚ್.ಸಿ. ಮಹಾದೇವಪ್ಪ ಅವರ ಮೂಲಕ ಕೆಆರ್‌ಡಿಸಿಎಲ್ ನಲ್ಲಿ ಸೌಡ ಸೇತುವೆಗೆ 7 ಕೋ. ರೂ. ಮಂಜೂರು ಮಾಡಿಸಿದರು. ಟ್ರಾಯಲ್ ಬೋರ್ ತೆಗೆದು ಅಂದಾಜು ಪಟ್ಟಿ ತಯಾರಾಗುವ ಹಂತದಲ್ಲಿ ಆಸ್ಕರ್ ಫೆರ್ನಾಂಡಿಸ್ ಅವರು ಕೇಂದ್ರ ಹೆದ್ದಾರಿ ಭೂ ಸಾರಿಗೆ ಸಚಿವರಾದರು. ಒಂದು ತಿಂಗಳಲ್ಲಿ ಸಿಆರ್‌ಎಫ್ -2 ರಲ್ಲಿ ಸೌಡ ಸೇತುವೆಗೆ 7 ಕೋ.ರೂ. ಮಂಜೂರಾತಿ ಆಯ್ತು.
ಬಾಯಿಗೆ ಬರದ ತುತ್ತು
ಒಂದೇ ಕಡೆಗೆ 2 ಸೇತುವೆ ಮಂಜೂರಾದ ಬಗ್ಗೆ ಇಲಾಖಾ ಮಟ್ಟದಲ್ಲಿ ಚರ್ಚೆಯಾಗಿ ಕೊನೆಗೆ ಕೇಂದ್ರದ ಸಿಆರ್‌ಎಫ್- 2ರ ಅನುದಾನದಲ್ಲಿ ಸೇತುವೆ ಅಂದಾಜು ಪಟ್ಟಿ ಟೆಂಡರ್ ಕರೆಯಲು ಲೋಕೊಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚಿಸಿದರು. ಟೆಂಡರ್ ಪ್ರಕ್ರಿಯೆ ನಡೆದು ಗುತ್ತಿಗೆದಾರರು ಕರಾರು ಮಾಡಿಕೊಳ್ಳದೇ ಇರುವುದರಿಂದ ಟೆಂಡರ್ ರದ್ದಾಯಿತು.
ಮೂರನೇ ಪ್ರಯತ್ನ
ಅನಂತರ ಬೈಂದೂರು ಶಾಸಕರಾಗಿ ಆಯ್ಕೆಯಾದ ಬಿ.ಎಂ. ಸುಕುಮಾರ್ ಶೆಟ್ಟಿ ಅವರು ಮುತುವರ್ಜಿ ವಹಿಸಿ ಇಲಾಖಾ ಮೂಲಕ ಅಂದಾಜು ಪಟ್ಟಿ ಪರಿಷ್ಕರಿಸಿ ನಬಾರ್ಡ್ ನಲ್ಲಿ ಮಂಜೂರಾತಿ ಹಂತದಲ್ಲಿದ್ದಾಗ ಬ್ರಹ್ಮಾವರ-ಜನ್ನಾಡಿ-ಸೌಡ- ಶಂಕರನಾರಾಯಣ- ತಿರ್ಥಹಳ್ಳಿ ರಸ್ತೆ ಮೇಲ್ದ ರ್ಜೆಯಾಗಿ “ರಾಜ್ಯ ಹೆದ್ದಾರಿ’ಯಾಯಿತು. ಇದರಿಂದ ರಾಜ್ಯ ಹೆದ್ದಾರಿ ಗುಣಮಟ್ಟಕ್ಕೆ ಅನುಗುಣವಾಗಿ ಸೇತುವೆ ಅಗಲಗೊಳಿಸಲು 8 ಕೋ.ರೂ. ಬದಲಿಗೆ 16 ರಿಂದ 17 ಕೋ.ರೂ. ಅನುದಾನ ಅಗತ್ಯವಿತ್ತು. ಅದೀಗ ಮಂಜೂರಾಗಿ ಕಾಮಗಾರಿ ಆರಂಭವಾಗಲಿದೆ.
ಎರಡು ಕ್ಷೇತ್ರಗಳಿಗೆ ಸಂಬಂಧ
ಪ್ರಸ್ತಾವಿತ ಸೌಡ-ಶಂಕರನಾರಾಯಣ ಸೇತುವೆ ನಿರ್ಮಾಣ ಪ್ರದೇಶದಲ್ಲಿ ವಾರಾಹಿ ನದಿ ಪಾತ್ರದ ಒಂದು ದಡವು ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರಲ್ಲಿ ಹಾಗೂ ಇನ್ನೊಂದು ತೀರವು ಉಡುಪಿ-ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಕುಂದಾಪುರದಲ್ಲಿದೆ.
ಅಭಿನಂದನೆಗಳು: ಸೇತುವೆ ಮಂಜೂರಾತಿ ಪ್ರಕ್ರಿಯೆಗಳಲ್ಲಿ ಅಹರ್ನಿಶಿ ದುಡಿದ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅವರಿಗೆ ಸೌಡ ಮತ್ತು ಅದರರಿಂದ ಪ್ರಯೋಜನವಾಗಲಿರುವ ಸಹಸ್ರಾರು ನಾಗರಿಕರ ಪರವಾಗಿ ರಾಜಕೀಯ ಮೀರಿ ನನ್ನ ಅಭಿನಂದನೆಗಳು. –ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾಜಿ ಅಧ್ಯಕ್ಷರು, ಗ್ರಾ.ಪಂ. ಹಾರ್ದಳ್ಳಿ ಮಂಡಳ್ಳಿ