Advertisement

ವಿದ್ಯೆ ಯಾರ ಸೊತ್ತಲ್ಲ: ಸ್ವಾಮೀಜಿ

02:49 PM Feb 15, 2017 | Team Udayavani |

ನವಲಗುಂದ: ವಿದ್ಯೆ ಯಾರ ಸೊತ್ತಲ್ಲ. ಅದು ಸಾಧಕರಿಗೆ ಮಾತ್ರ ಪ್ರಾಪ್ತಿಯಾಗುತ್ತದೆ ಎಂದು ಅಜಾತ ನಾಗಲಿಂಗ ಮಠದ ವೀರೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು. ಇಲ್ಲಿನ ಜಗದ್ಗುರು ಅಜಾತ ನಾಗಲಿಂಗ ಸ್ವಾಮಿಗಳ ವಿದ್ಯಾಪೀಠದ ಪ್ರೌಢಶಾಲೆಯ 28ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

Advertisement

ಕಳ್ಳರು, ಅಣ್ಣ-ತಮ್ಮಂದಿರೂ ವಿದ್ಯೆಯನ್ನು ಕದಿಯಲು ಸಾಧ್ಯವಿಲ್ಲ. ಆಸ್ತಿ, ಅಂತಸ್ತು, ಒಡವೆಗಳನ್ನು ಸಮಾನವಾಗಿ ಹಂಚಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ವಿದ್ಯೆ ಎಂಬ ಜ್ಞಾನ ಸಂಪಾದಿಸಬೇಕೆಂದು ಸಲಹೆ ನೀಡಿದರು. ಪಿಎಸ್‌ಐ ಮಹಾದೇವ ಯಲಿಗಾರ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿ, ಶಿಕ್ಷಕರ ಮಹತ್ವದ, ಪರಿಸರ ಕಾಳಜಿ, ಬೆಳೆಸಿಕೊಂಡು ಎಲ್ಲ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸನ್ಮಾರ್ಗದತ್ತ ನಡೆಯಬೇಕೆಂದು ಸಲಹೆ ನೀಡಿದರು.

ಹೊಸಪೇಟೆಯ ಹಂಸಾಂಬಾ ಶಾರದಾಶ್ರಮ ಮಾತಾ ಪ್ರಬೋಧಾಮಯಿ, ಹೊಳೆಆಲೂರಿನ ಯಚ್ಚರೇಶ್ವರ ವಿದ್ಯಾಸಂಸ್ಥೆ ಹೊಳೆಆಲೂರಿನ ಅಧ್ಯಕ್ಷ ಎ.ಎನ್‌.  ಬಡಿಗೇರ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎಂ.ಎನ್‌. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. 

ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.92 ಅಂಕಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದ ರೋಹಿಣಿ ಬಿರಾದಾರ ಅವರನ್ನು ಸನ್ಮಾನಿಸಲಾಯಿತು. ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಂ.ಎನ್‌. ಹಾರೋಗೇರಿ ಸ್ವಾಗತಿಸಿದರು. ಎ.ಆರ್‌. ಬನ್ನಿಕೋಡ ನಿರೂಪಿಸಿದರು. ಎಸ್‌.ಎಸ್‌. ಬಿರಾದಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next