ಸೊರಬ: ಗ್ರಾಮೀಣ ಭಾಗದ ರೈತರಹಬ್ಬವಾಗಿರುವ ಜನಪದ ಕ್ರೀಡೆಸಾಂಪ್ರದಾಯಿಕ ಹೋರಿ ಬೆದರಿಸುವಹಬ್ಬ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿಸೋಮವಾರ ವಿಜೃಂಭಣೆಯಿಂದಜರುಗಿದ್ದು, ಹೋರಿ ಪ್ರಿಯರಲ್ಲಿ ಉತ್ಸಾಹಕ್ಕೆಕಾರಣವಾಯಿತು.
ದೀಪಾವಳಿಯ ನಂತರದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವಹಬ್ಬ ಮಹತ್ವ ಪಡೆದಿದ್ದು, ಅಖಾಡದಲ್ಲಿಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳುಸೇರಿದಂತೆ ನೆರೆಯ ತಾಲೂಕು, ಜಿಲ್ಲೆಗಳಿಂದಭಾರೀ ಸಂಖ್ಯೆಯಲ್ಲಿ ಹೋರಿ ಪ್ರಿಯರುಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವದೃಶ್ಯ ನೋಡುಗರ ಮೈ ನವಿರೇಳಿಸಿತು.
ಹೋರಿಗಳ ಮಾಲೀಕರು ಹೋರಿಗಳಿಗೆವಿವಿಧ ಬಗೆಯ ಜೂಲಗಳನ್ನು ಹೊದಿಸಿ,ಬಣ್ಣ- ಬಣ್ಣದ ಬಲೂನುಗಳು ಹಾಗೂಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿಪುನೀತ್ ರಾಜ್‌ಕುಮಾರ್ ಸವಿನೆನಪಿಗಾಗಿಆನವಟ್ಟಿಯ ಪವರ್‌ಸ್ಟಾರ್, ಹಿರೇಕಸವಿಹಂತಕ, ತಡಸನಹಳ್ಳಿ ಡಾನ್, ಬಿಳಕಿಕೆಪಿಆರ್ ಕಿಂಗ್, ಮಾವಲಿ ಗೌಡ್ರು ಮಗ,ಬೈರೇಕೊಪ್ಪದ ಮದಗಜ, ಕೊಡಕಣಿ ಕದಂಬ,ಶಿರಾಳಕೊಪ್ಪದ ವೀರಕೇಸರಿ, ಸೊರಬದಶ್ರೀರಾಮ, ಚಿಕ್ಕಸವಿ ಜನಮೆಚ್ಚಿದ ಮಗ,ಕೊಡಕಣಿ ಬಸವ, ಯಲವಳ್ಳಿ ಗ್ರಾಮದಹೋರಿಗಳಾದ ಪಾಳೇಗಾರ, ಜಮೀನಾªರ,ಗರುಡ, ಅಭಿಮನ್ಯು, ಕಂಸ ಹೋರಿ ಸವಿನೆನಪಿಗಾಗಿ ಕಲ್ಲೇಶ ಸೇರಿದಂತೆ ವಿವಿಧಹೆಸರುಗಳ ಹೋರಿಗಳು ಅಖಾಡದಲ್ಲಿ ಓಡಿದವು.
ಯುವಕರು ಹೋರಿಗಳನ್ನುಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನುನೋಡಿ ರೋಮಾಂಚನಗೊಂಡರು.ಗ್ರಾಮ ಸಮಿತಿಯವರು ಅಖಾಡದಲ್ಲಿಎರಡು ಬದಿಯಲ್ಲಿ ಸುರಕ್ಷತಾ ಕ್ರಮಕೈಗೊಂಡಿದ್ದರು. ಅಖಾಡದಲ್ಲಿ ಕ್ರಮವಾಗಿಒಂದೊಂದೇ ಹೋರಿಗಳನ್ನು ಓಡಿಸಿದರು.ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ.
ಸಮಿತಿಯವರುಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನನೀಡಿದ್ದರು. ಇದು ಸಾರ್ವಜನಿಕರಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿಉತ್ತಮವಾಗಿ ಓಡಿದ ಹೋರಿಗಳು ಹಾಗೂಬಲ ಪ್ರದರ್ಶನ ತೋರಿದ ಯುವಕರನ್ನುಗುರುತಿಸಲಾಯಿತು.