ಸಿಎಂಎಸ್-01 ಎಷ್ಟನೇ
ಸಂವಹನ ಉಪಗ್ರಹ? 42
ನಭಕ್ಕೆ ಚಿಮ್ಮಿದ ಎಷ್ಟು
ನಿಮಿಷಗಳಲ್ಲಿ ಕಕ್ಷೆಗೆ – 20
ಇದರ ಜೀವಿತ ಅವಧಿ 7 ವರ್ಷ
Advertisement
ಶ್ರೀಹರಿಕೋಟಾ: ಬಾಹ್ಯಾಕಾಶ ಯೋಜನೆಗಳಲ್ಲಿ ಖಾಸಗಿ ಸಂಸ್ಥೆಗಳಿಗೂ ಅವಕಾಶ ಕಲ್ಪಿಸುವ ಯೋಜನೆಯ ಭಾಗವಾಗಿ ಸದ್ಯದಲ್ಲೇ ಹೊಸ ಉಪಗ್ರಹವೊಂದನ್ನು ಇಸ್ರೋ ಉಡಾಯಿಸಲಿದೆ. ಪಿಕ್ಸೆಲ್ ಇಂಡಿಯಾ ಎಂಬ ಖಾಸಗಿ ಸ್ಟಾರ್ಟಪ್‌ವೊಂದು ಅಭಿವೃದ್ಧಿಪಡಿಸಿರುವ “ಆನಂದ್’ ಎಂಬ ಹೆಸರಿನ ಭೂಪರಿವೀಕ್ಷಣ ಉಪಗ್ರಹವನ್ನು ಸದ್ಯದಲ್ಲೇ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಅಧ್ಯಕ್ಷ ಶಿವನ್ ತಿಳಿಸಿದ್ದಾರೆ.
Related Articles
Advertisement
20 ನಿಮಿಷದಲ್ಲಿ ಸಿಎಂಎಸ್-01 ಕಕ್ಷೆಗೆದೇಶದ 42ನೇ ಸಂವಹನ ಉಪಗ್ರಹದ ಉಡಾವಣೆ ಗುರುವಾರ ನೆರವೇರಿದ್ದು, ಸಿಎಂಎಸ್-01 ಉಪಗ್ರಹವನ್ನು ಹೊತ್ತು ಸಾಗಿದ ಪಿಎಸ್‌ಎಲ್‌ವಿ – ಸಿ50 ರಾಕೆಟ್ ಯಶಸ್ವಿಯಾಗಿ ಅದನ್ನು ಕಕ್ಷೆಗೆ ಸೇರಿಸಿದೆ. ಇದು ಕೊರೊನಾ ಸೋಂಕಿನ ನಡುವೆಯೇ ಈ ವರ್ಷ ಇಸ್ರೋ ನಡೆಸಿದ 2ನೇ ಮತ್ತು ಕೊನೆಯ ಉಡಾವಣೆಯಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಉಡಾವಣೆ ನಡೆದಿದ್ದು, ನಭಕ್ಕೆ ಚಿಮ್ಮಿದ 20 ನಿಮಿಷಗಳಲ್ಲಿ ಇಸ್ರೋದ ವಿಶ್ವಾಸಾರ್ಹ ಬಾಹ್ಯಾಕಾಶ ನೌಕೆಯು ಸಂವಹನ ಉಪಗ್ರಹವನ್ನು ಕಕ್ಷೆಗೆ ಸೇರಿಸಿದೆ. ಉಪಗ್ರಹವು ಅಂದುಕೊಂಡಂತೆಯೇ ಕಾರ್ಯಾಚರಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಮಾಹಿತಿ ನೀಡಿದ್ದಾರೆ. 11 ವರ್ಷಗಳ ಹಿಂದೆ ಉಡಾಯಿಸಲಾದ ಜಿಸ್ಯಾಟ್-12ರ ಬದಲಿಗೆ ಈ ಉಪಗ್ರಹ ಕಾರ್ಯಾಚರಿಸಲಿದೆ. ಸಿಎಂಎಸ್-01 ಉಪಗ್ರಹದ ಜೀವಿತಾವಧಿ 7 ವರ್ಷ ಎಂದೂ ಅವರು ತಿಳಿಸಿದ್ದಾರೆ.