ಬೆಂಗಳೂರು: ಟಿಕ್ ಸ್ಟಾರ್, ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಇದೀಗ ಮತ್ತೊಂದು ವಿಡಿಯೋ ಮೂಲಕ ಅವರು ಸುದ್ದಿಯಾಗಿದ್ದಾರೆ.
ಬಿಗ್ ಬಾಸ್ ಓಟಿಟಿ ಖ್ಯಾತಿಯ ಸೋನು ಗೌಡ ವ್ಲಾಗ್ ವಿಡಿಯೋಸ್ ಮೂಲಕ ಯೂಟ್ಯೂಬ್ನಲ್ಲಿ ದಿನ ನಿತ್ಯ ಕಾಣಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸೋನು ಏನೇ ಪೋಸ್ಟ್ ಮಾಡಿದರೂ ಅದು ವೈರಲ್ ಆಗುತ್ತದೆ. ಇತ್ತೀಚೆಗೆ ಶಾಪಿಂಗ್ಗೆ ಹೋಗುವ ವ್ಲಾಗ್ ವಿಡಿಯೋವನ್ನು ಅಪ್ಲೋಡ್ ಮಾಡಿರುವ ಅವರು, ಇದರಲ್ಲಿ ತಮ್ಮ ಮದುವೆಯ ವಿಚಾರವನ್ನು ಹೇಳಿಕೊಂಡಿದ್ದಾರೆ.
ಗಯ್ಸ್ ನನಗೆ ಮದುವೆ. ಸದ್ಯದಲ್ಲೇ ನನ್ನ ಮದುವೆ ಬಗ್ಗೆ ಅನೌನ್ಸ್ ಮಾಡ್ತೇನೆ. ಎಲ್ಲರ ಮದುವೆ ನೋಡಿ ನೋಡಿ ನನಗೆ ಮದುವೆ ಆಗಬೇಕು ಅಂಥ ಅನ್ನಿಸುತ್ತಿದೆ ಎಂದು ಹೇಳಿದ್ದಾರೆ. ಹುಡುಗ ಯಾರು ಏನು ಎನ್ನುವ ಡಿಟೈಲ್ಸ್ ಬೇಕಾದರೆ ಕಾಮೆಂಟ್ ಮಾಡಿ ಎಂದಿದ್ದಾರೆ.
ಸೋನು ಅವರ ಮದುವೆ ವಿಚಾರ ಫ್ಯಾನ್ಸ್ ಖುಷ್ ಆಗಿದ್ದಾರೆ. ಅನೇಕರು ಒಳ್ಳೆಯದಾಗಲಿ ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಕೆಲವರು ಇದ್ದಕ್ಕಿದ್ದಂತೆ ಸೋನು ಮದುವೆ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.
ವಿಡಿಯೋ ಕೊನೆಯಲ್ಲಿ ತಾವು ಇಷ್ಟೆಲ್ಲಾ ಶಾಪಿಂಗ್ ಮಾಡಿರುವುದು ತಮ್ಮ ಹೊಸ ಮನೆಯ ಗೃಹ ಪ್ರವೇಶಕ್ಕೆಂದು ಸೋನು ಮದುವೆ ವಿಚಾರಕ್ಕೆ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ಮಗು ದತ್ತು ಪಡೆದ ವಿಚಾರದಲ್ಲಿ ಸುದ್ದಿಯಾಗಿದ್ದರು. ಕಾನೂನು ಬಾಹಿರವನ್ನು ಮಗುವನ್ನು ದತ್ತು ಪಡೆದುಕೊಂಡಿದ್ದರು ಎನ್ನುವ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಸಂಬಂಧ ಅವರನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಜಾಮೀನು ಪಡೆದು ಹೊರಬಂದಿದ್ದರು.