Advertisement

ಪ್ರೀತಿಯಲ್ಲಿ ಬಿದ್ದ ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್: 2ನೇ ಮದುವೆಗೆ ರೆಡಿ

10:32 PM Jan 01, 2025 | Team Udayavani |

ಬೆಂಗಳೂರು: ಬಿಗ್ ಬಾಸ್ ಸೀಸನ್ -10 ನಲ್ಲಿ ಖ್ಯಾತಿ ಗಳಿಸಿದ ವರ್ತೂರು ಸಂತೋಷ್ (Varthur Santosh) ದೊಡ್ಮನೆ ಆಚೆಗೂ ಸದ್ದು ಮಾಡಿದ್ದರು.

Advertisement

ಬಿಗ್ ಬಾಸ್ ಮನೆಯಲ್ಲಿ ಗೋಲ್ಡ್ ಧರಿಸಿಕೊಂಡೇ ಇದ್ದ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ ಕಾರಣಕ್ಕೆ ಸಂಬಂಧ ಪಟ್ಟ ಅರಣ್ಯ ಅಧಿಕಾರಿಗಳು ಅವರನ್ನು ಬಿಗ್ ಬಾಸ್ ಮನೆಯೊಳಗೆ ಬಂದೇ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದರು.

ತನಿಷಾ ಕುಪ್ಪಂಡ ಜತೆ ವರ್ತೂರು ತುಂಬಾ ಕ್ಲೋಸ್ ಅಗಿದ್ದರು. ಈ ಕಾರಣದಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಇಬ್ಬರು ಮದುವೆ ಆಗಬೇಕೆಂದು ಅವರ ಫ್ಯಾನ್ಸ್ ಗಳು ಬಯಸಿದ್ದರು.

ಬಿಗ್ ಬಾಸ್ ಮುಗಿದ ಬಳಿಕವೂ ವರ್ತೂರು – ತನಿಷಾ ಇಬ್ಬರು ಹಲವು ಬಾರಿ ಜತೆಯಾಗಿ ಕಾಣಿಸಿಕೊಂಡಿದ್ದರು.

ಇದೀಗ ವರ್ತೂರು ಸಂತೋಷ್ ಮದುವೆಗೆ ಸಜ್ಜಾಗಿದ್ದಾರೆ. ಸಂದರ್ಶನವೊಂದರಲ್ಲಿ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ.

Advertisement

ವರ್ತೂರು ಸಂತೋಷ್ ಅವರು ಈಗಾಗಲೇ ಮದುವೆಯಾಗಿ ಪತ್ನಿಯಿಂದ ದೂರವಾಗಿದ್ದಾರೆ.‌ ಪತ್ನಿಯ ತಂದೆ ಮಾಧ್ಯಮಗಳ ಮುಂದೆ ಬಂದು ವರ್ತೂರು ಅವರ ಮೇಲೆ ಕೆಲ ಆರೋಪಗಳನ್ನು ಮಾಡಿದ್ದರು. ಬಿಗ್ ಬಾಸ್ ಮನೆಯ ಆಚೆಗೂ ವರ್ತೂರು ಈ ಎಲ್ಲ ಕಾರಣಗಳಿಂದ ಸುದ್ದಿಯಾಗಿದ್ದರು.


ಇದೀಗ ವರ್ತೂರು ಸಂತೋಷ್ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಹುಡುಗಿ ಯಾರು ಅಂಥನೂ ಹೇಳಿದ್ದಾರೆ.

“ನನ್ನ ಜೀವನದಲ್ಲಿ ಸುಮಾರು ಏರುಪೇರಾಗಿದೆ. ಇದೆಲ್ಲ ನೀವು ಸಹ ನೋಡಿದ್ದೀರಿ. ಅದೇನು ದೊಡ್ಡ ವಿಷ್ಯ ಅಲ್ಲ. ನನ್ನ ಜೀವನದಲ್ಲಿ ಒಂದು ಹುಡುಗಿ ಇದ್ದಾಳೆ.‌ಅವಳೊಂದಿಗೆ ಚೆನ್ನಾಗಿ ಇದ್ದೀನಿ. ಮಾತನಾಡ್ತೀನಿ. ಮೀಟ್ ಆಗುತ್ತೇವೆ. ನೀವು ಹೇಳುವ ಹುಡುಗಿ ತನಿಷಾ ಅಲ್ಲ. ಹುಡುಗಿ‌ ನಮ್ಮ ಸಂಬಂಧದಲ್ಲೇ ಇದ್ದಾಳೆ. ಮದುವೆ ಸಹ ಆಗಲಿದ್ದೇನೆ” ಎಂದು ವರ್ತೂರು ಹೇಳಿದ್ದಾರೆ.

ಸದ್ಯ ವರ್ತೂರು ಹೇಳಿರುವ ಮಾತುಗಳು ಸೋಶಿಯಲ್ ‌ಮೀಡಿಯಾದಲ್ಲಿ ಹರಿದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next