Advertisement

ರಾಜ್ಯಸಭಾ ಸ್ಥಾನದ ಆಫರ್ ರಿಜೆಕ್ಟ್ ಮಾಡಿದರೆ ನಟ ಸೋನು ಸೂದ್ ?

01:25 PM Aug 03, 2021 | Team Udayavani |

ಮುಂಬೈ : ನಟ ಸೋನು ಸೂದ್ ಅವರು ಈ ದೇಶದ ಪ್ರಧಾನಿಯಾಗಬೇಕೆಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ತನ್ನ ಫ್ಯಾನ್ಸ್ ಗಳ ಈ ಬಯಕೆಗೆ ನಗುತ್ತಲೆ ಉತ್ತರಿಸಿರುವ ಸೋನು, ನಾನು ರಾಜಕೀಯಕ್ಕೆ ಬರೋಲ್ಲ ಎಂದಷ್ಟೆ ಹೇಳಿದ್ದಾರೆ. ಸೋಷಿಯಲ್ ವರ್ಕ್ ಮೂಲಕ ರಿಯಲ್ ಹೀರೋ ಆಗಿರುವ ಈ ನಟ  ರಾಜಕೀಯಕ್ಕೆ ಬರಲೇ ಬಾರದು ಎಂದು ದೃಢ ನಿಶ್ಚಯ ಮಾಡಿಕೊಂಡಂತಿದೆ..ಯಾಕೆ ಅಂತಿರಾ ?

Advertisement

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರಾಜ್ಯ ಸರ್ಕಾರವೊಂದು ( ಹೆಸರು ಬಹಿರಂಗವಾಗಿಲ್ಲ) ಸೋನು ಸೂದ್ ಅವರಿಗೆ ರಾಜ್ಯಸಭಾ ಸ್ಥಾನ ನೀಡಲು ಮುಂದಾಗಿದೆಯಂತೆ. ಈ ಕುರಿತು ಈ ನಟನ ಜೊತೆ ಮಾತುಕತೆ ಕೂಡ ನಡೆಸಿದೆಯಂತೆ. ಆದರೆ, ಸೋನು ಮಾತ್ರ ತನ್ನನ್ನು ಹುಡುಕಿಕೊಂಡು ಬಂದ ಅವಕಾಶವನ್ನು ನಯವಾಗಿಯೆ ತಿರಸ್ಕರಿಸಿದ್ದಾರಂತೆ. ತನ್ನನ್ನು ರಾಜಕೀಯಕ್ಕೆ ಕರೆತರಲು ಇಚ್ಛಿಸಿದ ಸರ್ಕಾರಕ್ಕೆ ಧನ್ಯವಾದ ಹೇಳಿರುವ ಅವರು, ನಾನು ಸಕ್ರಿಯ ರಾಜಕಾರಣಕ್ಕೆ ಬರುವುದಿಲ್ಲ ಎಂದಿದ್ದಾರಂತೆ.

ಸೋನು ರಾಜಕೀಯಕ್ಕೆ ಬರಲಿ. ಇಂತಹ ಸೇವಾ ಮನೋಭಾವದವರು ನಮ್ಮ ನೇತಾರರಾಗಲಿ ಎಂದು ಜನರು ಬಯಸುತ್ತಿದ್ದಾರೆ. ಇದಕ್ಕೆ ಕಾರಣ ಕೋವಿಡ್ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಹೇರಲಾದ ಲಾಕ್ ಡೌನ್ ವೇಳೆ ಸೋನು ಸೂದ್ ಮಾಡಿದ ಕಾರ್ಯಗಳು. ಮುಂಬೈನಲ್ಲಿ ಬೀದಿಯಲ್ಲಿ ನಿರ್ಗತಿಕರಂತೆ ತಂಗಿದ್ದ ಕೂಲಿ ಕಾರ್ಮಿಕರನ್ನು ಅವರ ತವರು ತಲುಪಿಸುವುದರಿಂದ ಶುರುವಾದ ಇವರ ಪರೋಪಕಾರಿ ಕಾರ್ಯ ಹಲವು ಬಗೆಯಲ್ಲಿ ನಡೆದೆ ಇವೆ. ಕಷ್ಟ ಅಂತ ಹೇಳಿಕೊಂಡು ಬಂದವರಿಗೆ ಸ್ಪಂದಿಸುವ ಮಾತೃ ಹೃದಯದ ಸೋನು ಸೂದ್ ರಾಜಕೀಯಕ್ಕೆ ಬಂದರೆ ಮತ್ತಷ್ಟು ಒಳ್ಳೆಯ ಕೆಲಸಗಳು ಆಗಬಹುದು ಎನ್ನುವುದು ಅವರ ಬೆಂಬಲಿಗರ ಉದ್ದೇಶವಾಗಿದೆ. ಆದರೆ, ಸೋನು ಅವರು ಈ ಮೊದಲು ತಾವಾಡಿದ ಮಾತುಗಳಿಗೆ ಬದ್ಧರಾಗಿ ಉಳಿದುಕೊಂಡಿದ್ದಾರೆ. ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಮತ್ತೊಮ್ಮೆ ಹೇಳಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next