Advertisement

ಸುರೇಶ್ ರೈನಾ ಸಹಾಯಕ್ಕೆ ಬಂದ ಸೋನು ಸೂದ್ : ಕೇವಲ 10 ನಿಮಿಷದಲ್ಲಿ ಆಕ್ಸಿಜನ್ ಒದಗಿಸಿದ ನಟ

07:52 AM May 07, 2021 | Team Udayavani |

ನವದೆಹಲಿ : ಮಾಜಿ ಟೀಮ್​ ಇಂಡಿಯಾ ಕ್ರಿಕೆಟಿಗ ಸುರೇಶ್​ ರೈನಾ ಅವರ 65 ವರ್ಷದ ಚಿಕ್ಕಮ್ಮ ( aunt) ಕೋವಿಡ್ ​ಗೆ ತುತ್ತಾಗಿದ್ದು, ಅವರ ಪರಿಸ್ಥಿತಿ ಗಂಭಿರವಾಗಿದೆ. ಈ ಸಂದರ್ಭದಲ್ಲಿ ಆಕ್ಸಿಜನ್​ ಗಾಗಿ ಸರೇಶ್ ರೈನಾ ಅಲೆದಾಟ ನಡೆಸಿದ್ದು, ಟ್ವಿಟರ್ ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥಗೆ ಮನವಿ ಮಾಡಿಕೊಂಡಿದ್ದಾರೆ. ಟ್ವೀಟ್ ನಲ್ಲಿ ಬರೆದಿದ್ದ ರೈನಾ, ಮೀರತ್​ ನ ನಮ್ಮ ಆಂಟಿ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದಾರೆ. ಅವರಿಗೆ ತಕ್ಷಣ ಆಕ್ಸಿಜನ್​ ಬೇಕಾಗಿದೆ. ಅವರ ಆಕ್ಸಿಜನ್​  ಮಟ್ಟ 91 ಇದ್ದು, ಸಹಾಯ ಮಾಡುವಂತೆ ಕೇಳಿದ್ದರು.

Advertisement

ಈ ಟ್ವೀಟ್ ನೋಡಿದ ಬಹುಭಾಷಾ ನಟ ಸೋನು ಸೂದ್,​ ತಕ್ಷಣಕ್ಕೆ ರೈನಾ ನೆರವಿಗೆ ನಿಂತಿದ್ದಾರೆ. ಕೆಲವೇ ನಿಮಿಷದಲ್ಲಿ ಆಕ್ಸಿಜನ್​ ತಲುಪಲಿದೆ ಸಹೋದರ ಎಂದು ಟ್ವೀಟ್ ಮೂಲಕ ರೈನಾಗೆ ಸೋನು ಸೂದ್ ತಿಳಿಸಿದ್ದಾರೆ. ಅಲ್ಲದೆ ತಮ್ಮ ಫೌಂಡೇಶನ್ ಮೂಲಕ ಸೋನು ಸೂದ್ ಆಕ್ಸಿಜನ್​ ವ್ಯವಸ್ಥೆ ಮಾಡಿದ್ದಾರೆ.

ಕಷ್ಟಕಾಲದಲ್ಲಿ ಸಹಾಯ ಮಾಡಿದ ನಟನಿಗೆ ಸುರೇಶ್ ರೈನಾ ಧನ್ಯವಾದ ತಿಳಿಸಿದ್ದು, ನಿಮ್ಮಿಂದ ದೊಡ್ಡ ಉಪಕಾರ ಆಗಿದೆ. ದೇವರು ನಿಮಗೆ ಆಶೀರ್ವಾದ ಮಾಡಲಿ ಎಂದು ಹಾರೈಸಿದ್ದಾರೆ.

ಇನ್ನು ಸೋನು ಸೂದ್ ಮೊದಲ ಬಾರಿಗೆ ಭಾರತ ಲಾಕ್ ಡೌನ್ ಆದ ವೇಳೆಯಲ್ಲಿ ವಲಸೆ ಕಾರ್ಮಿಕರಿಗೆ ತುಂಬಾ ಸಹಾಯ ಮಾಡಿದ್ದರು. ದುರ್ಬಲ ವರ್ಗದವರಿಗೆ ನಟ ಸಹಾಯ ಮಾಡಿದ್ದರು.  ಸಾಮಾಜಿಕ ಜಾಲತಾಣದಲ್ಲಿ ಯಾರು ಯಾವುದೇ ಸಹಾಯವನ್ನು ಕೋರಿದರೂ ಅದು ತಮ್ಮಿಂದ ಸಾಧ್ಯವಾದರೇ ಸೂನು ಈಡೇರಿಸಿಯೇ ತೀರುತ್ತಾರೆ ಎಂಬುದಕ್ಕೆ ರೈನಾ ಅವರ ಆಂಟಿಗೆ ಸಹಾಯ ಮಾಡಿರುವುದೇ ಸಾಕ್ಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next