Advertisement

Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್

12:23 PM Nov 27, 2024 | Team Udayavani |

ಚೆನ್ನೈ: ಬಹುಭಾಷಾ ನಟಿ ಕೀರ್ತಿ ಸುರೇಶ್‌ (Keerthy Suresh) ಅವರ ಮದುವೆ ವಿಚಾರ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಹೊಸ ಫೋಟೋವನ್ನು ಹಂಚಿಕೊಂಡು ತಮ್ಮ ಸಂಬಂಧವನ್ನು ಕೀರ್ತಿ ಅಧಿಕೃತಗೊಳಿಸಿದ್ದಾರೆ.

Advertisement

ಕಳೆದ ಕೆಲ ದಿನಗಳಿಂದ ನಟಿ ಕೀರ್ತಿ ಸುರೇಶ್‌ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಿನಿವಲಯದಲ್ಲಿ ಹರಿದಾಡಿದೆ. ಡಿಸೆಂಬರ್ ಎರಡನೇ ವಾರದಲ್ಲಿ ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ (Antony Thattil) ಅವರೊಂದಿಗೆ ಕೀರ್ತಿ ಸುರೇಶ್‌ ಅವರು ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

ಆಂಟೋನಿ ದುಬೈ ಮೂಲದ ಉದ್ಯಮಿಯಾಗಿದ್ದು, ಕಳೆದ 15 ವರ್ಷಗಳಿಂದ ಕೀರ್ತಿ ಹಾಗೂ ಆಂಟೋನಿ ರಿಲೇಷನ್‌ ಶಿಪ್‌ನಲ್ಲಿದ್ದಾರೆ ಎನ್ನಲಾಗಿದೆ. ಡಿಸೆಂಬರ್‌ 11, 12 ರಂದು ಎರಡು ಕುಟುಂಬದವರ ಸಮ್ಮುಖದಲ್ಲಿ ಗೋವಾದಲ್ಲಿ ವಿವಾಹ ಸಮಾರಂಭ ನೆರವೇರಲಿದೆ ಎಂದು ವರದಿಯಾಗಿದೆ.

ಆಂಟೋನಿ ಹಾಗೂ ಕೀರ್ತಿ ಜತೆಯಾಗಿ ಶಾಲೆಗೆ ಹೋಗುತ್ತಿದ್ದರು. ಹೈಸ್ಕೂಲ್‌ನಿಂದಲೂ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದಾರೆ ಎನ್ನಲಾಗಿದೆ.

Advertisement

ಅವರ ಮದುವೆ ಸುದ್ದಿಯ ಬೆನ್ನಲ್ಲೇ ಕೀರ್ತಿ ಸೋಶಿಯಲ್‌ ಮೀಡಿಯಾಲ್ಲಿ ಆಂಟೋನಿ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗಿನ ದೀಪಾವಳಿ ಹಬ್ಬದ ಸಂಭ್ರಮದಲ್ಲಿನ ಫೋಟೋ ಕೀರ್ತಿ ಹಂಚಿಕೊಂಡಿದ್ದಾರೆ. “15 ವರ್ಷ ಮತ್ತು ಕೌಂಟಿಂಗ್.‌ ಯಾವಾಗಲೂ ಆಂಟೋನಿ x ಕೀರ್ತಿ” ಎಂದು ಬರೆದುಕೊಂಡಿದ್ದಾರೆ.

ಆ ಮೂಲಕ ತಮ್ಮ ಸಂಬಂಧದ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಗೋವಾದಲ್ಲಿ ನಡೆಯಲಿದೆ ಎನ್ನಲಾಗುತ್ತಿರುವ ಕೀರ್ತಿ – ಆಂಟೋನಿ ಮದುವೆ ಬಗ್ಗೆ ಅಧಿಕೃತ ಮಾಹಿತಿ ಶೀಘ್ರದಲ್ಲಿ ಹೊರಬೀಳುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next