Advertisement

ಸೋನಿಯಾ ಗಾಂಧಿ  ರಾಜಕೀಯ ನಿವೃತ್ತಿ ಪಡೆಯುತ್ತಿಲ್ಲ

02:35 PM Dec 15, 2017 | |

ಹೊಸದಿಲ್ಲಿ : ಸೋನಿಯಾ ಗಾಂಧಿ ಅವರು ರಾಜಕೀಯ ನಿವೃತ್ತಿ ಪಡೆಯುತ್ತಿಲ್ಲ ಎಂದು ಕಾಂಗ್ರೆಸ್‌ ಗುರುವಾರ ಸ್ಪಷ್ಟನೆ ನೀಡಿದೆ. 

Advertisement

ಕಾಂಗ್ರೆಸ್‌ ವಕ್ತಾರ ರಣ್‌ದೀಪ್‌ ಸುರ್ಜೇವಾಲಾ ಟ್ವೀಟ್‌ ಮಾಡಿ ‘ಸ್ನೇಹಿತರಲ್ಲಿ ನನ್ನ ವಿನಂತಿ, ಇಂತ ಸುಳ್ಳು ಸುದ್ದಿಗಳ ಮೇಲೆ ಅವಲಂಬಿತಾರಾಗಬೇಡಿ. ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷೆ ಸ್ಥಾನದಿಂದ ಮಾತ್ರ ನಿವೃತ್ತರಾಗಿದ್ದಾರೆ. ರಾಜಕೀಯದಿಂದ ಅವರು ನಿವೃತ್ತರಾಗುತ್ತಿಲ್ಲ. ಅವರ ಆಶೀರ್ವಾದ, ಬುದ್ಧಿವಂತಿಕೆ ಮತ್ತು ಕಾಂಗ್ರೆಸ್ ಸಿದ್ಧಾಂತಕ್ಕೆ ಸಹಜವಾದ ಬದ್ಧತೆ ಯಾವಾಗಲೂ ನಮ್ಮ ಮಾರ್ಗದರ್ಶಿ’ ಎಂದು ಬರೆದಿದ್ದಾರೆ. 

ಅನಾರೋಗ್ಯದ ಹಿನ್ನಲೆಯಲ್ಲಿ ಸೋನಿಯಾ ಅವರು ರಾಜಕೀಯದಿಂದಲೇ ನಿವೃತ್ತಲಾಗಲಿದ್ದಾರೆ ಎಂದು ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next