ಹೊಸದಿಲ್ಲಿ: ಬಾಲಿವುಡ್ ನಟಿ ಸೋನಂ ಕಪೂರ್ ಅವರ ಹೊಸದಿಲ್ಲಿ ಮನೆಗೆ ಕಳ್ಳರು ನುಗ್ಗಿದ್ದು, ಸುಮಾರು 2.4 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಹಣ ದರೋಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 11 ರಂದು ದರೋಡೆ ನಡೆದಿದ್ದು, ಅಪರಾಧ ನಡೆದ ಸುಮಾರು ಎರಡು ವಾರಗಳ ನಂತರ ಫೆಬ್ರವರಿ 23 ರಂದು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಫೆ.23ರಂದು ನಮಗೆ ದೂರು ನೀಡಲಾಗಿದೆ. ಫೆ.11ರಂದು 2.4 ಕೋಟಿ ರೂ ಮೌಲ್ಯದ ಚಿನ್ನ ಮತ್ತು ಹಣ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕೂಡಲೇ ಎಫ್ ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ತನಿಖೆಗೆ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಏ.18ಕ್ಕೆ ವಿಜಯ್ ನಿರ್ದೇಶನದ ‘ಭೀಮ’ ಮುಹೂರ್ತ
ಸೋನಂ ಕಪೂರ್ ಗೆ ಸಂಬಂಧಿಸಿದಂತೆ ಇದು ಎರಡನೇ ಘಟನೆಯಾಗಿದೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಸೋನಂ ಕಪೂರ್ ಮಾವ ಹರೀಶ್ ಅಹುಜಾ ಅವರಿಗೆ ಸುಮಾರು 27 ಕೋಟಿ ರೂ. ಸೈಬರ್ ವಂಚನೆ ನಡೆಸಲಾಗಿತ್ತು. ಜುಲೈನಲ್ಲಿ ದಾಖಲಾಗಿದ್ದ ದೂರಿನ ಆಧಾರದ ಮೇಲೆ ದೆಹಲಿ, ಮುಂಬೈ, ಚೆನ್ನೈ, ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಒಂಬತ್ತು ಮಂದಿಯನ್ನು ಬಂಧಿಸಲಾಗಿತ್ತು.