Advertisement

ಕ್ಯಾನ್ಸರ್ ನಿಂದ ನೊಂದು, ಬೆಂದಿದ್ದ ತಾಯಿಗೆ ಮರು ಮದುವೆ ಮಾಡಿಸಿದ ಪುತ್ರ!

11:38 AM Mar 03, 2022 | Team Udayavani |

ನವದೆಹಲಿ : ಬದುಕಿನಲ್ಲಿ ಮಾರಕವಾಗಿ ಕಾಡಿದ ಅನಾರೋಗ್ಯ, ಪತಿಯನ್ನು ಕಳೆದುಕೊಂಡು ನೊಂದು ಬೆಂದಿದ್ದ ಮಹಿಳೊಬ್ಬರ ಹೊಸ ಬದುಕಿಗೆ ಇನ್ನೊಂದು ಮದುವೆಗೆ ಪುತ್ರ ಸಹಕಾರಿಯಾಗಿ ಜೀವನ ಉತ್ಸಾಹ ಮೂಡಿಸಿದ ಘಟನೆ ನಡೆದಿದೆ.

Advertisement

ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿರುವ ಜಿಮೀತ್ ಗಾಂಧಿ ಎನ್ನುವವರು ತನ್ನ ತಾಯಿಯ ನೋವಿನ ಕ್ಷಣಗಳು ಮತ್ತು ಹೊಸ ಭರವಸೆಯ ಬದುಕಿನ ಆರಂಭದ ಕುರಿತು ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿದ್ದಾರೆ.

ಜಿಮೀತ್ ಪೋಸ್ಟ್ ನಲ್ಲಿ, ”ನನ್ನ ತಾಯಿ ಅ 44 ವರ್ಷದವರಾಗಿದ್ದಾಗ (2013) ಪತಿಯನ್ನು ಕಳೆದುಕೊಂಡರು.ಆಕೆಗೆ 2019 ರಲ್ಲಿ 3 ನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಅವರು ಅನೇಕ ಕೀಮೋ ಸೆಷನ್‌ಗಳಿಗೆ ಒಳಗಾದರು ಮತ್ತು 2 ವರ್ಷಗಳ ನಂತರ ಮತ್ತೆ ಚೇತರಿಸಿಕೊಂಡರು. ಅವರು ಕ್ಯಾನ್ಸರ್ ಚಿಕಿತ್ಸೆಯಲ್ಲಿದ್ದಾಗ ಡೆಲ್ಟಾ ರೂಪಾಂತರವನ್ನು ಪಡೆಡಿದ್ದರು.ನನಗೆ ನೆನಪಿಲ್ಲದ ಸಮಯದಿಂದ ಅವರು ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ಹೆಚ್ಚಿನ ಸಮಯ, ನಾವು ಬೇರೆಡೆ ನಮ್ಮ ವೃತ್ತಿಯನ್ನು ಮುಂದುವರಿಸಿದ್ದರಿಂದ ಅವರು ಭಾರತದಲ್ಲಿ ಒಬ್ಬಂಟಿಯಾಗಿದ್ದರು. ಆದರೆ ಅವಳು ಬದುಕಿನ ಉತ್ಸಾಹ ಬಿಡಲಿಲ್ಲ. ಅವರು ಪ್ರೀತಿಯನ್ನು ಕಂಡುಕೊಂಡರು. ಭಾರತೀಯ ಸಮಾಜದಲ್ಲಿನ ಎಲ್ಲಾ ಕಳಂಕಗಳನ್ನು, ಎಲ್ಲಾ ನಿಷೇಧಗಳನ್ನು ಮುರಿಯಲು ನಿರ್ಧರಿಸಿದರು. ಮತ್ತು ಅವಳು ಪ್ರೀತಿಸುವ ವ್ಯಕ್ತಿಯನ್ನು ಮದುವೆಯಾದರು. ಅವರು 52 ನೇ ವಯಸ್ಸಿನಲ್ಲಿ ಪ್ರೀತಿಯನ್ನು ಕಂಡುಕೊಂಡರು. ಅವಳು ಯೋಧ. ಅವಳು ಹೋರಾಟಗಾರ್ತಿ.ಅವಳು ನನ್ನ ತಾಯಿ.ಭಾರತದಲ್ಲಿ ನನ್ನ ತಲೆಮಾರಿನ ಎಲ್ಲಾ ಜನರಿಗೆ, ನೀವು ಒಬ್ಬ ಪೋಷಕರನ್ನು ಹೊಂದಿದ್ದರೆ, ಒಡನಾಟವನ್ನು ಕಂಡುಕೊಳ್ಳುವ ಅವರ ನಿರ್ಧಾರವನ್ನು ದಯವಿಟ್ಟು ಬೆಂಬಲಿಸಿ. ಎಲ್ಲಕ್ಕಿಂತ ಹೆಚ್ಚು ಪ್ರೀತಿ ಮತ್ತು ಮಾನಸಿಕ ಆರೋಗ್ಯ!” ಎಂದು ಬರೆದಿದ್ದಾರೆ.

ಪೋಸ್ಟ್ ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಹಲವಾರು ಮಂದಿ ಪ್ರತಿಕ್ರಿಯೆ ನೀಡಿ ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.