ಈ ಲೇಖನವು ಅಮೆರಿಕನ್ ಕಾಲೇಜ್ ಆಫ್ ಒಬ್‌ಸ್ಟೆಟ್ರಿಷಿಯನ್ಸ್ ಆ್ಯಂಡ್ ಗೈನಕಾಲಜಿಸ್ಟ್ಸ್ (ಎಸಿಒಜಿ), ರಾಯಲ್ ಕಾಲೇಜ್ ಆಫ್ ಒಬ್‌ಸ್ಟೆಟ್ರಿಷಿಯನ್ಸ್ ಆ್ಯಂಡ್ ಗೈನಕಾಲಜಿಸ್ಟ್ಸ್ (ಆರ್‌ಸಿಒಜಿ), ವಿಶ್ವ ಆರೋಗ್ಯ ಸಂಸ್ಥೆ, ರೋಗ ನಿಯಂತ್ರಣ ಕೇಂದ್ರಗಳ ಮಾರ್ಗಸೂಚಿಗಳು ಮತ್ತು ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ 2020ರ ಎಪ್ರಿಲ್ 20ರ ವರೆಗೆ ಪ್ರಕಟವಾದ ವಿವಿಧ ಸಂಶೋಧನ ಲೇಖನಗಳನ್ನು ಆಧರಿಸಿದೆ. ಈ ವಿಷಯದ ಬಗ್ಗೆ ಹೊಸ ಮಾಹಿತಿಗಳು ಪ್ರತಿದಿನವೂ ಹೊರಬರುತ್ತಿವೆ ಮತ್ತು ನಿರ್ವಹಣ ಕಾರ್ಯತಂತ್ರಗಳು ಅದಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ ಎಂದು ಓದುಗರು ಗಮನಿಸಬೇಕಾಗಿ ವಿನಂತಿ. ಆದಾಗ್ಯೂ ನಿರ್ವಹಣೆಯ ಮೂಲತತ್ವಗಳು ಹೆಚ್ಚು ಬದಲಾಗುವುದಿಲ್ಲ. ಈ ಲೇಖನವು ಕೋವಿಡ್ ಸಾಂಕ್ರಾಮಿಕದ ಈ ಸಮಯದಲ್ಲಿ, ಕೋವಿಡ್-19 ಅಲ್ಲದ ಗರ್ಭಿಣಿಯರ ಮತ್ತು ಕೋವಿಡ್-19 ಸೋಂಕುಪೀಡಿತ ಗರ್ಭಿಣಿಯರ ಪ್ರಸವಪೂರ್ವ, ಪ್ರಸವ ಸಮಯದ, ಪ್ರಸವಾನಂತರದ ನಿರ್ವಹಣೆಯ, ಶಿಶುವಿನ ಆರೈಕೆಯ, ಸ್ತನ್ಯಪಾನ ಮತ್ತು ಗರ್ಭನಿರೋಧಕ ಸಾಧನಗಳ ಮಾಹಿತಿಗಳನ್ನು ತಿಳಿಸುತ್ತದೆ.
ಸೋಂಕು ತಡೆಗಟ್ಟುವ ವಿಧಾನಗಳು ಗರ್ಭಿಣಿಯಲ್ಲದ ಸಾಮಾನ್ಯ ಮಹಿಳೆಯರಲ್ಲಿ ಇರುವಂತೆಯೇ ಆಗಿವೆ. ಮಕ್ಕಳೊಂದಿಗೆ ಗರ್ಭಿಣಿ ಮಹಿಳೆಯರು ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಗರ್ಭಿಣಿ ಸ್ತ್ರೀ, ಡಾಕ್ಟರ್, ನರ್ಸ್ ಅಥವಾ ಆರೋಗ್ಯ ಇಲಾಖೆಯ ಕಾರ್ಯಕರ್ತಳಾಗಿದ್ದರೆ, ಮೂರನೇ ತ್ರೆ„ಮಾಸಿಕ ಅವಧಿಯಲ್ಲಿ, ವಿಶೇಷವಾಗಿ 36 ವಾರಗಳ ಅನಂತರ ರೋಗಿಗಳೊಂದಿಗೆ ಮುಖಾಮುಖೀ ಸಂಪರ್ಕವನ್ನು ನಿಲ್ಲಿಸಬೇಕು.
ಕೋವಿಡ್ – 19 ವರ್ಗೀಕರಣ
ಸೌಮ್ಯ ಲಕ್ಷಣ: ಯಾವುದೇ ಲಕ್ಷಣಗಳಿಲ್ಲದಿರುವುದು ಅಥವಾ ಸೌಮ್ಯ ಲಕ್ಷಣಗಳು (ಜ್ವರ, ಆಯಾಸ, ಕೆಮ್ಮು ಮತ್ತು / ಅಥವಾ ಕೋವಿಡ್ -19ರ ಕಡಿಮೆ ಸಾಮಾನ್ಯ ಲಕ್ಷಣಗಳು)
ತೀವ್ರತರ ಲಕ್ಷಣ: ವೇಗದ ಉಸಿರಾಟ (ಉಸಿರಾಟದ ಪ್ರಮಾಣ ನಿಮಿಷಕ್ಕೆ 30ಕ್ಕಿಂತ ಹೆಚ್ಚು ಉಸಿರಾಟಗಳು), ಆಮ್ಲಜನಕದ ಕೊರತೆ (ಆಮ್ಲಜನಕದ ಶುದ್ಧತ್ವ ಶೇ.93ಕ್ಕಿಂತ ಕಡಿಮೆ ಅಥವಾ ಆಮ್ಲಜನಕದ ಭಾಗಶಃ ಒತ್ತಡ / ಪ್ರೇರಿತ ಆಮ್ಲಜನಕದ ಭಾಗ [PaO2 / FiO2