Advertisement

ಗರ್ಭಾವಸ್ಥೆ , ಹೆರಿಗೆ ಮತ್ತು ಶಿಶು ಆರೈಕೆಯ ಬಗ್ಗೆ ಕೆಲವು ಮಾಹಿತಿಗಳು

07:01 PM May 02, 2020 | Sriram |

ಕಳೆದ ವಾರದಿಂದ- ಪ್ರಸವ ಮತ್ತು ಹೆರಿಗೆಯ ನಿರ್ವಹಣೆ
– ಕೋವಿಡ್‌ -19 ಸಾಂಕ್ರಾಮಿಕ ಸಮಯದಲ್ಲಿ, ದೃಢಪಟ್ಟ ಅಥವಾ ಶಂಕಿತ ಕೋವಿಡ್‌ – 19 ಹೊಂದಿರುವ ಮಹಿಳೆಯರಲ್ಲಿ ಹೆರಿಗೆಯ ಸಾಮಾನ್ಯ ನಿರ್ವಹಣೆಯನ್ನು ಬದಲಾಯಿಸಲಾಗುವುದಿಲ್ಲ.
– ಗರ್ಭಿಣಿ ಕೋವಿಡ್‌ -19 ಒಳರೋಗಿಗಳನ್ನು ಕೋವಿಡ್‌ – 19 ಎಂದು ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ವಿಶೇಷವಾದ ಸುಸಜ್ಜಿತ ಕೋಣೆಯಲ್ಲಿ (ಉದಾ.: ಋಣಾತ್ಮಕ ಒತ್ತಡ) ನೋಡಿಕೊಳ್ಳಬೇಕು
– ಗರ್ಭಿಣಿಯು ಹೆರಿಗೆ ಸಮಯದಲ್ಲಿ ಮುಖಗವಸು (ಮಾಸ್ಕ್) ಧರಿಸಬೇಕು
– ವೈದ್ಯರು ವಿಶೇಷ ಪಿಪಿಇ ಧರಿಸಬೇಕು, ವಿಶೇಷವಾಗಿ ಶಂಕಿತ ಅಥವಾ ದೃಢೀಕರಿಸಿದ ಪ್ರಕರಣಗಳಲ್ಲಿ.
– ಸೋಂಕು ನಿಯಂತ್ರಣ ಮುನ್ನೆಚ್ಚರಿಕೆಗಳನ್ನು, ಗರ್ಭಿಣಿಯಲ್ಲದ ಸಾಮಾನ್ಯ ಮಹಿಳೆ ತೆಗೆದುಕೊಳ್ಳುವ ಹಾಗೆ ವಹಿಸಬೇಕು.
– ಶಿಶುವಿನ ಹೊಕ್ಕುಳ ಬಳ್ಳಿಯನ್ನು ವಿಳಂಬವಾಗಿ ಕ್ಲಾಂಪ್‌ ಮಾಡಲು “ಎಸಿಒಜಿ’ ಗೆ ಯಾವುದೇ ಆಕ್ಷೇಪವಿರುವುದಿಲ್ಲ. ಆದರೆ ಇತರ ಮಾರ್ಗಸೂಚಿಗಳು ಶಿಶು ತಿಂಗಳು ತುಂಬಿದ್ದರೆ ಕೂಡಲೇ ಕ್ಲಾಂಪ್‌ ಮಾಡುವುದನ್ನು ಸೂಚಿಸುತ್ತವೆ.
-ತಾಯಿಯೊಂದಿಗಿನ ಮಗುವಿನ ಚರ್ಮದ ಸಂಪರ್ಕವನ್ನು ತಪ್ಪಿಸಬೇಕು.

Advertisement

ಶಿಶುಗಳ ವಿಶ್ಲೇಷಣೆ
ಶಂಕಿತ ಕೋವಿಡ್‌-19 ಮತ್ತು ಅಜ್ಞಾತ ಪರೀಕ್ಷಾ ಫಲಿತಾಂಶಗಳನ್ನು ಹೊಂದಿರುವ ತಾಯಂದಿರ ಶಿಶುಗಳನ್ನು ಕೋವಿಡ್‌ -19 ಶಂಕಿತರೆಂದು ಪರಿಗಣಿಸಲಾಗುವುದಿಲ್ಲ ದೃಢೀಕೃತ ಕೋವಿಡ್‌-19 ತಾಯಂದಿರಲ್ಲಿ ಶಿಶುಗಳನ್ನು ಕೋವಿಡ್‌-19 ಶಂಕಿತರೆಂದು ಪರಿಗಣಿಸಲಾಗುವುದು, ಅಂತಹ ಶಿಶುಗಳನ್ನು ಕೋವಿಡ್‌-19 ಪರೀಕ್ಷೆಗೊಳಪಡಿಸಬೇಕು, ಇತರ ಆರೋಗ್ಯವಂತ ಶಿಶುಗಳಿಂದ ಪ್ರತ್ಯೇಕಿಸಬೇಕು ಮತ್ತು ಅವುಗಳನ್ನು ದೃಢಪಡಿಸಿದ ಅಥವಾ ಶಂಕಿತ ಕೋವಿಡ್‌ -19 ರೋಗಿಗಳಂತೆ, ಸೋಂಕು ನಿಯಂತ್ರಣ ಮುನ್ನೆಚ್ಚರಿಕೆಗಳ ಪ್ರಕಾರ ಆರೈಕೆ ಮಾಡಬೇಕು.

ಪ್ರಸವಾನಂತರದ ಆರೈಕೆ
ದೃಢಪಡಿಸಿದ ಅಥವಾ ಶಂಕಿತ ಕೋವಿಡ್‌ -19 ಹೊಂದಿರುವ ತಾಯಂದಿರನ್ನು ಅವರ ಹೊಸದಾಗಿ ಜನಿಸಿದ ಶಿಶುಗಳಿಂದ ತಾತ್ಕಾಲಿಕವಾಗಿ ಬೇರ್ಪಡಿಸುವುದನ್ನು, ತಾಯಿಯ ಮೂಲಕ ಮಗುವಿಗೆ ಹರಡುವ ಅಪಾಯವನ್ನು ಕಡಿಮೆ ಮಾಡಲು ಪ್ರಸ್ತಾಪಿಸಲಾಗಿದೆ. ಆದಾಗ್ಯೂ, ಇದು ಪ್ರತಿಕೂಲ ಪರಿಣಾಮಗಳನ್ನು ಸಹ ಉಂಟುಮಾಡಬಹುದು ಆದ್ದರಿಂದ ತಾಯಿಯೊಂದಿಗೆ ಸಮಾಲೋಚಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕು.

ಮಗುವನ್ನು ಬೇರ್ಪಡಿಸಿದರೆ – ಮಗುವನ್ನು ಇತರ ಆರೋಗ್ಯವಂತ ಶಿಶುಗಳಿಂದ ಪ್ರತ್ಯೇಕಿಸಿ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಶಿಫಾರಸುಗಳ ಪ್ರಕಾರ ನೋಡಿಕೊಳ್ಳಬೇಕು. ಇನ್ನೊಬ್ಬ ಆರೋಗ್ಯವಂತ ಕುಟುಂಬ ಸದಸ್ಯರು ಶಿಶುಪಾಲನೆಯನ್ನು ಒದಗಿಸುತ್ತಿದ್ದರೆ (ಉದಾ, ಡಯಾಪರಿಂಗ್‌, ಸ್ನಾನ, ಆಹಾರ), ಅವರು ಸೂಕ್ತವಾದ ಪಿಪಿಇ ಬಳಸಬೇಕು.

ಮಗುವನ್ನು ಬೇರ್ಪಡಿಸದಿದ್ದರೆ – ದೈಹಿಕ ಅಡೆತಡೆಗಳನ್ನು (ಉದಾ, ತಾಯಿ ಮತ್ತು ಮಗುವಿನ ನಡುವಿನ ಪರದೆ) ನಿರ್ಮಿಸಬೇಕು, ಮಗುವನ್ನು ತಾಯಿಯಿಂದ 6 ಅಡಿ ದೂರದಲ್ಲಿ ಇಡಬೇಕು. ತಾಯಿಯು ಮುಖಗವಸು (ಮಾಸ್ಕ್) ಧರಿಸಬೇಕು ಮತ್ತು ಶಿಶುವಿನೊಂದಿಗೆ ನಿಕಟ ಸಂಪರ್ಕದಲ್ಲಿರುವಾಗ, ವಿಶೇಷವಾಗಿ ಹಾಲುಣಿಸುವಾಗ ಕೈ ನೈರ್ಮಲ್ಯವನ್ನು ಅಭ್ಯಾಸ ಮಾಡಬೇಕು. ಇನ್ನೊಬ್ಬ ಆರೋಗ್ಯವಂತ ವಯಸ್ಕ ಕೋಣೆಯಲ್ಲಿದ್ದರೆ, ಅವರು ಹೊಸದಾಗಿ ಹುಟ್ಟಿದ ಮಗುವನ್ನು ನೋಡಿಕೊಳ್ಳಬಹುದು.

Advertisement

ಸ್ತನ್ಯಪಾನ
ಸ್ತನ್ಯಪಾನದ ಮೂಲಕ ವೈರಸ್‌ ಹರಡಬಹುದೇ ಎಂದು ತಿಳಿದಿಲ್ಲ. ಏಕೈಕ ವರದಿಯಲ್ಲಿ ತಾಯಿಯ ಮೊಲೆಹಾಲಿನಲ್ಲಿ ಯಾವುದೇ ವೈರಸ್‌ ಕಂಡುಬಂದಿಲ್ಲ. ಆದಾಗ್ಯೂ, ಸ್ತನ್ಯಪಾನ ಸಮಯದಲ್ಲಿ ನಿಕಟ ಸಂಪರ್ಕದ ಮೂಲಕ ಹನಿ ಹರಡುವಿಕೆ ಸಂಭವಿಸಬಹುದು.

ಇತರ ಪ್ರಯೋಜನಗಳ ಜತೆಗೆ, ಮೊಲೆಹಾಲು ಪ್ರತಿಕಾಯಗಳು ಮತ್ತು ಇತರ ಸೋಂಕು ನಿರೋಧಕ ಅಂಶಗಳ ಮೂಲವಾಗಿದೆ. ಅದರಿಂದ ಶಿಶುವಿಗೆ ನಿಷ್ಕ್ರಿಯ ಪ್ರತಿಕಾಯ ರಕ್ಷಣೆಯನ್ನು ಒದಗಿಸಬಹುದು. ಆದ್ದರಿಂದ, ತಾಯಿಯಿಂದ ಮಗುವನ್ನು ಬೇರ್ಪಡಿಸದಿದ್ದರೆ, ತಾಯಿ ಮಗುವಿನೊಂದಿಗೆ ಮೇಲೆ ಉಲ್ಲೇಖೀಸಿದ ಎಲ್ಲ ಮುನ್ನೆಚ್ಚರಿಕೆಗಳೊಂದಿಗೆ ಸ್ತನ್ಯಪಾನ ಮಾಡಿಸಬಹುದು. ಶಿಶುವನ್ನು ತಾಯಿಯಿಂದ ಬೇರ್ಪಡಿಸಿದರೆ ಅದನ್ನು ಆರೋಗ್ಯವಂತ ಇನ್ನೊಬ್ಬ ಆರೈಕೆದಾರರಿಂದ ವ್ಯಕ್ತಪಡಿಸಿದ ರೀತಿಯಲ್ಲಿ ಮೊಲೆಹಾಲನ್ನು ನೀಡಬೇಕು.
ಫಾರ್ಮುಲಾ ಫೀಡ್‌ – ತಾತ್ವಿಕವಾಗಿ ಇದನ್ನು ಆಯ್ಕೆಮಾಡುವ ಮಹಿಳೆಯರು ಶಿಶುವಿಗೆ ಮತ್ತೂಂದು ಆರೋಗ್ಯಕರ ಪಾಲನೆ ಮಾಡುವವರನ್ನು ಹೊಂದಿರಬೇಕು

ಟ್ಯುಬೆಕ್ಟಮಿ (ಸಂತಾನಹರಣ ಚಿಕಿತ್ಸೆ ) ನಿರ್ವಹಿಸಬಹುದೇ?
ಜಟಿಲವಲ್ಲದ ಸಿಸೇರಿಯನ್‌ ಹೆರಿಗೆ ಸಮಯದಲ್ಲಿ ಟ್ಯುಬೆಕ್ಟಮಿ ಗಮನಾರ್ಹವಾದ ಹೆಚ್ಚುವರಿ ಸಮಯ ಅಥವಾ ಅಪಾಯವನ್ನು ಹೊಂದಿರುವುದಿಲ್ಲ ಮತ್ತು ಆದ್ದರಿಂದ ಯೋಜಿಸಿದ್ದರೆ ಅದನ್ನು ನಿರ್ವಹಿಸಬಹುದು.

ಸಾಮಾನ್ಯ ಹೆರಿಗೆಯ ಅನಂತರ ಟ್ಯುಬೆಕ್ಟಮಿ ಹೆಚ್ಚು ಚುನಾಯಿತ ಕಾರ್ಯವಿಧಾನವಾಗಿದೆ. ಆದ್ದರಿಂದ ಲಭ್ಯವಿರುವ ಸಂಪನ್ಮೂಲಗಳ ಆಧಾರದ ಮೇಲೆ ಅಂತಹ ನಿರ್ಧಾರಗಳನ್ನು ಸ್ಥಳೀಯ ಮಟ್ಟದಲ್ಲಿ ತೆಗೆದುಕೊಳ್ಳಬೇಕು ಅಂತರಕ್ಕೆ ಗರ್ಭನಿರೋಧಕ ವಿಧಾನಗಳು ಟ್ಯುಬೆಕ್ಟಮಿ ನಿರ್ವಹಿಸದಿದ್ದರೆ ಮತ್ತು ರೋಗಿಯು ಗರ್ಭನಿರೋಧಕ ವಿಧಾನವನ್ನು ಕೇಳಿದರೆ ಪ್ರಸವಾನಂತರದ ಬಳಿಕ ಕಾಪರ್‌ಟಿ ಅನ್ನು ಸೇರಿಸಬಹುದು ಅಥವಾ ಡಿಪೋ ಮೆಡ್ರಾಕ್ಸಿಪ್ರೊಜೆಸ್ಟರಾನ್‌ ಅಸಿಟೇಟ್‌ ಇಂಜೆಕ್ಷನ್‌ ಅನ್ನು ನೀಡಬಹುದು. ಇದು ಪ್ರಸವಾನಂತರ ಹೆಚ್ಚುವರಿ ಹೊರರೋಗಿ ಭೇಟಿಗಳನ್ನು ತಪ್ಪಿಸುತ್ತದೆ.

ರೋಗಿಯನ್ನು ಯಾವಾಗ ಡಿಸಾcರ್ಜ್‌ ಮಾಡಬಹುದು?
ಆಸ್ಪತ್ರೆಯ ಪರಿಸರದಲ್ಲಿ ರೋಗಿಯ ವೈಯಕ್ತಿಕ ಅಪಾಯವನ್ನು ಮಿತಿಗೊಳಿಸಲು ಸಾಧಾರಣ ಹೆರಿಗೆಯ 2-3 ದಿನಗಳ ಅನಂತರ ಮತ್ತು ಸಿಸೇರಿಯನ್‌ ಹೆರಿಗೆಯ 3-4 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಬಹುದಾಗಿದೆ.

ಡಿಸ್ಚಾರ್ಜ್ ‌ ಆದ ಅನಂತರ
ಈ ಕೆಳಗೆ ತಿಳಿಸಿರುವ ಗುರಿಗಳನ್ನು ಮುಟ್ಟುವ ತನಕ ತಾಯಿ ಮಗುವಿನಿಂದ ಕನಿಷ್ಠ ಆರು ಅಡಿ ದೂರದ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಮಗುವಿನ ಆರೈಕೆಗಾಗಿ ಮುಖಗವಸು (ಮಾಸ್ಕ್) ಮತ್ತು ಕೈ ನೈರ್ಮಲ್ಯವನ್ನು ಬಳಸಬೇಕು.
– ತಾಯಿಯು ಜ್ವರದ ಮಾತ್ರೆಯನ್ನು ಬಳಸದೆ 72 ಗಂಟೆಗಳ ಕಾಲ ಜ್ವರ ರಹಿತ ಆಗಿರಬೇಕು.
– ರೋಗಲಕ್ಷಣಗಳು ಮೊದಲು ಕಾಣಿಸಿಕೊಂಡ ಅನಂತರ ಕನಿಷ್ಠ ಏಳು ದಿನಗಳು ಕಳೆದಿರಬೇಕು.
– ತಾಯಿಯ ಉಸಿರಾಟದ ಲಕ್ಷಣಗಳು ಸುಧಾರಿಸಿರಬೇಕು
≥24 ಗಂಟೆಗಳ ಅಂತರದಲ್ಲಿ ಸಂಗ್ರಹಿಸಲಾದ ಸತತ ಎರಡು SARS-CoV-2 ಪರೀಕ್ಷೆಗಳು ನಕಾರಾತ್ಮಕವಾಗಿರಬೇಕು

ಡಾ| ಮುರಲೀಧರ್‌ ವಿ. ಪೈ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ
ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next