Advertisement
ಆರೋಗ್ಯ ಸುರಕ್ಷಾ ಕಾರ್ಡ್ ಯೋಜನೆಯಂತೆ ಕಳೆದ ವರ್ಷ ಸುಮಾರು 40,000 ಜನರಿಗೆ ಈ ಸೌಲಭ್ಯ ವಿಸ್ತರಿಸಲಾಗಿದೆ. ಇದು ಕೇವಲ ಆರ್ಥಿಕ ದುರ್ಬಲ ವರ್ಗದವರಿಗೆ ಮಾತ್ರ ಸೀಮಿತವಲ್ಲ. ಈ ಕಾರ್ಡನ್ನು ಜನರಲ್, ಪ್ರೈವೆಟ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯಲು ಬಳಸಬಹುದು. ಕಾರ್ಡ್ ಹೊಂದಿದವರು ಹೊರರೋಗಿಯಾಗಿ ಉಚಿತ ವೈದ್ಯರ ಸಲಹೆಯೊಂದಿಗೆ ಸೂಚಿಸಿದ ಪರೀಕ್ಷೆಗಳಿಗೆ, ರಕ್ತ ಪರೀಕ್ಷೆ ಇತ್ಯಾದಿಗಳಿಗೆ ರಿಯಾಯಿತಿ ಕೂಡ ಲಭ್ಯವಿದೆ. ಈ ಯೋಜನೆಯಲ್ಲಿ ಅತ್ಯಂತ ರಿಯಾಯಿತಿ ದೇಣಿಗೆಯಲ್ಲಿ ಕುಟುಂಬಕ್ಕೆ 50,000 ರೂ. (ಷರತ್ತುಗಳು ಅನ್ವಯ) ಆರೋಗ್ಯ ಸೌಲಭ್ಯ ಒದಗಿಸಲಾಗುವುದು. ಅಲ್ಲದೇ ಕುಟುಂಬದ ಯಾವುದೇ ಒಬ್ಬ ಸದಸ್ಯ ಅಪಘಾತದಲ್ಲಿ ಮರಣ ಹೊಂದಿದಲ್ಲಿ ಪ್ರತ್ಯೇಕ 50,000 ರೂ. ವರೆಗೆ ಪರಿಹಾರ ಒದಗಿಸಲಾಗುವುದು.
ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನ; ಕುಂದಾಪುರ: ಶ್ರೀ ವೆಂಕಟರಮಣ ದೇವಸ್ಥಾನ; ಗಂಗೊಳ್ಳಿ: ಶ್ರೀ ವಿಠಲ ರುಕುಮಾಯಿ ದೇವಸ್ಥಾನ; ಮೂಡಬಿದಿರೆ: ಶ್ರೀ ವೆಂಕಟರಮಣ ದೇವಸ್ಥಾನ; ಕಾರ್ಕಳ: ಹಿತೈಷಿ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪ ಕಾಂಪೌಂಡ್; ಬಂಟ್ವಾಳ: ಶ್ರೀ ತಿರುಮಲ ಶ್ರೀ ವೆಂಕಟರಮಣ ದೇವಸ್ಥಾನ; ಬಿ.ಸಿ.ರೋಡ್: ಗೀತಾಂಜಲಿ ಕಲ್ಯಾಣ ಮಂಟಪ; ಉಳ್ಳಾಲ: ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ; ಮೂಲ್ಕಿ: ಶ್ರೀ ವೆಂಕಟರಮಣ ದೇವಸ್ಥಾನ; ಉಪ್ಪಿನಂಗಡಿ: ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ; ಬೆಳ್ತಂಗಡಿ: ಶ್ರೀ ವೆಂಕಟರಮಣ ದೇವಸ್ಥಾನ ಲಾೖಲ; ಉಜಿರೆ: ಶ್ರೀ ರಾಮ ಮಂದಿರ; ಗುರುಪುರ: ಶ್ರೀವರದರಾಜ ವೆಂಕಟರಮಣ ದೇವಸ್ಥಾನ; ಕುಮಟಾ: ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ರಥಬೀದಿ; ಮಾದನಗೇರಿ: ಶ್ರೀ ಸಿದ್ಧಿವಿನಾಯಕ ಮಹಾಲಸ ನಾರಾಯಣಿ ದೇವಸ್ಥಾನ; ಹಳದೀಪುರ: ವಿಶ್ವನಾಥ ಪೈ ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ; ಅಂಕೋಲಾ: ಶ್ರೀ ವೀರ ವಿಠಲ ಯುವಕ ಮಂಡಳಿ ಮತಕೇರಿ; ಹೊನ್ನಾವರ: ಶ್ರೀ ರಾಮ ಮಂದಿರ; ಶಿರಸಿ: ಸುಧೀರ್ ಭಟ್, ಶ್ರೀ ಮಹಾವಿಷ್ಣು ಸೇವಾ ಸಮಿತಿ; ಕಾಪು: ಕೊಂಕಣಿ ಮಠ; ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನ; ಕಟಪಾಡಿ: ಶ್ರೀ ವೆಂಕಟರಮಣ ದೇವಸ್ಥಾನ; ಕಿನ್ನಿಗೋಳಿ: ಶ್ರೀ ರಾಮ ಮಂದಿರ; ಚೇಂಪಿ: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ; ಮುಂಡ್ಕೂರು: ಶ್ರೀ ವಿಠೊಬ ದೇವಸ್ಥಾನ; ಸಿದ್ಧಾಪುರ: ಶ್ರೀ ವೆಂಕಟರಮಣ ದೇವಸ್ಥಾನ; ಹೆಬ್ರಿ: ಶ್ರೀ ರಾಮ ಮಂದಿರ; ಬೆಳ್ಮಣ್: ಜಿಎಸ್‌ಬಿ ಯುವಜನ ಸಭಾ; ಸಾೖಬ್ರಕಟ್ಟೆ: ಜಿಎಸ್‌ಬಿ ಸಭಾಭವನ; ವಿಟ್ಲ: ಶ್ರೀ ರಾಮ ಮಂದಿರ; ಶಿರ್ವ: ಶ್ರೀ ಮಹಾಲಸ ನಾರಾಯಣಿ ದೇವಸ್ಥಾನ; ಉಪ್ಪುಂದ: ಆನಂದ ಭಟ್ಟ, ಮೂಡುಗಣಪತಿ ದೇವಸ್ಥಾನದ ಹತ್ತಿರ; ಪಾಣೆಮಂಗಳೂರು: ಶ್ರೀ ವೆಂಕಟರಮಣ ದೇವಸ್ಥಾನ; ಕೋಟ: ಶ್ರೀ ಕಾಶೀಮಠ; ಹೆಜಮಾಡಿ: ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನ; ಸುಳ್ಯ ಶ್ರೀ ವೆಂಕಟರಮಣ ದೇವ ಮಂದಿರ; ಪುಂಜಾಲಕಟ್ಟೆ: ಶ್ರೀ ಗೋಪಾಲಕೃಷ್ಣ ದೇವಸ್ಥಾನಗಳಲ್ಲಿ ಅರ್ಜಿಗಳನ್ನು ಪಡೆದುಕೊಳ್ಳಬಹುದು. ಅರ್ಜಿ ಹಿಂದಿರುಗಿಸಲು ಆ. 5 ಕೊನೆಯ ದಿನ ಎಂದು ಟ್ರಸ್ಟ್ ಕಾರ್ಯದರ್ಶಿ ಟಿ. ಗಣಪತಿ ಪೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.