Advertisement

ಸೋಮಶೇಖರ ರೆಡ್ಡಿ 26 ಕೋಟಿ ರೂ. ಸಾಲಗಾರ! 

06:00 AM Apr 22, 2018 | Team Udayavani |

ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಸೋಮಶೇಖರರೆಡ್ಡಿ ಆಸ್ತಿ ವಿವರದಲ್ಲಿ 26.63 ಕೋಟಿ ರೂ. ಸಾಲ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಕೈಯಲ್ಲಿ ಕೇವಲ 29.28 ಲಕ್ಷ ರೂ. ಹೊಂದಿರುವ ಸೋಮಶೇಖರರೆಡ್ಡಿ, ತಮ್ಮ ಹೆಸರಿನಲ್ಲಿ 15.38 ಕೋಟಿ ರೂ. ಚರಾಸ್ತಿ, 18.02 ಕೋಟಿ ರೂ. ಸ್ಥಿರಾಸ್ತಿ ಸೇರಿ ಒಟ್ಟು 33.82 ಕೋಟಿ ರೂ. ಆಸ್ತಿ ಹೊಂದಿದ್ದಾರೆ. 11 ಬ್ಯಾಂಕ್‌ ಸೇರಿ ಇತರ ಕಡೆಗಳಲ್ಲಿ ಸುಮಾರು 3 ಕೋಟಿ ರೂ. ಠೇವಣಿ ಇಟ್ಟಿದ್ದಾರೆ. 41 ಲಕ್ಷ ರೂ. ಮೌಲ್ಯದ ಒಂದು ಟೊಯೋಟಾ ಫಾಚೂÂìನರ್‌ ಸೇರಿ ನಾಲ್ಕು ಕಾರು ಮತ್ತು ಒಂದು ಬೈಕ್‌ ಹೊಂದಿದ್ದಾರೆ. ಅಲ್ಲದೆ 69.09 ಲಕ್ಷ ರೂ. ಮೌಲ್ಯದ 2558 ಗ್ರಾಂ ಚಿನ್ನಾಭರಣವಿದೆ.  ಬೆಂಗಳೂರಿನ ಆರ್‌ಟಿ ನಗರದಲ್ಲಿ 2, ಬಳ್ಳಾರಿಯಲ್ಲಿ 3 ಸೇರಿ ಒಟ್ಟು 5 ನಿವೇಶನ ಹೊಂದಿದ್ದಾರೆ.

Advertisement

25 ಕೋಟಿ ಒಡೆಯ
ಮೊಳಕಾಲ್ಮೂರು ಎಸ್‌.ಟಿ. ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು 25.36 ಕೋಟಿ ರೂ. ಒಡೆಯರಾಗಿದ್ದಾರೆ. ಶ್ರೀರಾಮುಲು 2.20 ಲಕ್ಷ ರೂ.ನಗದು, 4.51 ಕೋಟಿ ಚರಾಸ್ತಿ ಹೊಂದಿ ದ್ದಾರೆ. 1.20 ಕೋಟಿ ರೂ. ಮೌಲ್ಯದ ಹುಮ್ಮರ್‌ ಐಷಾರಾಮಿ ಕಾರು, ಒಂದು ಕೋಟಿ ರೂ .ಮೌಲ್ಯದ ಬಿಎಂಡಬ್ಲ್ಯು ಕಾರು, 4 ಕೆಜಿ 257 ಗ್ರಾಂ ಬಂಗಾರ, 9500 ಗ್ರಾಂ ಬೆಳ್ಳಿ, 66.54 ಲಕ್ಷ ರೂ.ಗಳ ಬ್ಯಾಂಕ್‌ ಠೇವಣಿಗಳನ್ನು ಹೊಂದಿದ್ದಾರೆ. 19.63 ಕೋಟಿ ರೂ.ಮೌಲ್ಯದ ಜಮೀನು, ಕಟ್ಟಡ, ನಿವೇಶನ ಮತ್ತಿತರ ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು 24.14 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಹೊಂದಿದ್ದಾರೆ. 

ಸಿದ್ದು ಬಂಡಿ ಆಸ್ತಿ ಮೌಲ್ಯ 4 ಕೋಟಿ
ಲಿಂಗಸುಗೂರು ಕ್ಷೇತ್ರದ ಜೆಡಿಎಸ್‌ನ ಸಿದ್ದು ಬಂಡಿ 4 ಕೋಟಿ ಆಸ್ತಿಗೆ ಒಡೆಯರಾಗಿದ್ದಾರೆ. ಮೂಲತಃ ಗ್ರಾನೈಟ್‌ ಉದ್ದಿಮೆದಾರರಾದ ಸಿದ್ದು ಬಂಡಿ ಅವರ ವಾರ್ಷಿಕ ಆದಾಯ 23,97,370 ರೂ. ಇವರ ಬಳಿ 10 ಲಕ್ಷ ರೂ. ನಗದು, ಎಸ್‌ಬಿಐ ಇಲಕಲ್‌ನಲ್ಲಿ 1,61,000 ರೂ. ಠೇವಣಿ., ಎರಡು ಹಿಟಾಚಿ, ಯೂನಿಟ್‌ ಮಷಿನ್‌, ಟ್ರೇಲರ್‌, ಒಂದು ಕಾರು, ಎರಡು ಬೈಕ್‌ಗಳು, 200 ಗ್ರಾಂ ಚಿನ್ನ, 150
ಗ್ರಾಂ ಬೆಳ್ಳಿ ಇದ್ದು, ಒಟ್ಟು ಚರಾಸ್ತಿ 3,71,86,079 ಮೌಲ್ಯದ್ದಾಗಿದ್ದರೆ, ಸ್ಥಿರಾಸ್ತಿ 19,40,000 ಮೌಲ್ಯದ್ದಾಗಿದೆ. ಕುಷ್ಟಗಿಯ ಕಡೂರು, ಅಂಟರ ಠಾಣಾ, ಹೂಲಗೇರಿ, ಹೇರೂರು ಗ್ರಾಮದಲ್ಲಿ ಭೂಮಿ, ಇಲಕಲ್‌ನಲ್ಲಿ ನಿವೇಶನ ಹೊಂದಿದ್ದಾರೆ. ವಿವಿಧ ಬ್ಯಾಂಕ್‌ನಲ್ಲಿ 50 ಲಕ್ಷ ರೂ. ಸಾಲ ಇದೆ. ಪತ್ನಿ ಗಂಗಾ ಬಂಡಿ ಬಳಿ 5 ಲಕ್ಷ ರೂ. ನಗದು, 250 ಗ್ರಾಂ ಚಿನ್ನ ಹಾಗೂ 250 ಗ್ರಾಂ ಬೆಳ್ಳಿ, ಒಟ್ಟು 13,50,000 ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 2012-13 ಸಾಲಿನಲ್ಲಿ 44,88,084 ರೂ. ಆದಾಯ ಘೋಷಿಸಿದ್ದರು. 

ಕೋಟ್ಯಧೀಶ ಮಾನಪ್ಪ ವಜ್ಜಲ್‌ ಬಳಿ ವಾಹನವೇ ಇಲ್ಲ!
ಲಿಂಗಸುಗೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜ ಮತ್ತು ಪತ್ನಿ ಬಳಿ ಯಾವುದೇ ಕಾರು ಅಥವಾ ಬೈಕ್‌ ಇಲ್ಲ, ಸಾಲವೂ ಇಲ್ಲ. 3,82,755 ರೂ. ವಾರ್ಷಿಕ ಆದಾಯವಿದೆ. 50 ಸಾವಿರ ನಗದು, ಲಿಂಗಸುಗೂರು, ಬೆಂಗಳೂರು, ಹುಣಸಗಿ ವಿವಿಧ ಬ್ಯಾಂಕ್‌ಗಳಲ್ಲಿ 28,88,665.24 ರೂ. ಠೇವಣಿಯಿದೆ. ಎಂ.ಡಿ.ವಡ್ಡರ್‌ ಕಂಪನಿಯಿಂದ 59,50,798 ರೂ., ಸರಸ್ವತಿ ಜಾಲಹಳ್ಳಿ ಅವರಿಂದ 1,40,00,000 ರೂ. ಬಾಕಿ ಬರಬೇಕಿದೆ. ವಜ್ಜಲ್‌ರ ಬಳಿ 600 ಗ್ರಾಂ ಚಿನ್ನ, 10 ಕೆಜಿ ಬೆಳ್ಳಿ ಇದೆ. ಈಗಿನ ಹುಣಸಗಿ ತಾಲೂಕಿನ ಚೆನ್ನೂರು ಗ್ರಾಮದಲ್ಲಿ 4 ಎಕರೆ ಭೂಮಿ ಹಾಗೂ ಬೆಂಗಳೂರಿನಲ್ಲಿ ಸಹೋದರನ ಜಂಟಿ ಖಾತೆಯಲ್ಲಿ 9 ಗುಂಟೆ ಜಾಗ ಹೊಂದಿದ್ದಾರೆ. ಶಹಾಪುರದಲ್ಲಿ 2 ನಿವೇಶನ, ಲಿಂಗಸುಗೂರಿನಲ್ಲಿ ಮಕ್ಕಳಾದ ಈಶ್ವರ ಹಾಗೂ ಶ್ರೀಮಂತರಾಯ ಅವರಿಂದ ದಾನ ಪಡೆದ 3 ನಿವೇಶನಗಳಿವೆ. ಒಟ್ಟು ಚರಾಸ್ಥಿ 1,12,15,463 ರೂ. ಮೌಲ್ಯ. ಸ್ಥಿರಾಸ್ಥಿ  1,13,00,000 ರೂ. ಮೌಲ್ಯ. ಒಟ್ಟು 2,25,15.463
ರೂ. ಆಗಿದೆ. 2013ರಲ್ಲಿ 2,12,92,000 ಆಸ್ತಿ ಘೋಷಿಸಿದ್ದರು. ವಜ್ಜಲ್‌ ಅವರಿಗಿಂತ ಪತ್ನಿ ಅಮರಮ್ಮ ಆದಾಯ ಹೆಚ್ಚಿದ್ದು, ಈ ಸಾಲಿನ ಆದಾಯ 2,17,21,188.00 ರೂಪಾಯಿ. 1 ಲಕ್ಷ ರೂ. ನಗದು ಹೊಂದಿದ್ದಾರೆ. ವಿವಿಧ ಬ್ಯಾಂಕ್‌ ಖಾತೆಯಲ್ಲಿ 8,10,551 ರೂ. ಠೇವಣಿಯಿದೆ. ಎಂ.ಡಿ.ವಡ್ಡರ್‌ ಕಂಪನಿಯಲ್ಲಿ 1,87,35,212.00 ರೂ. ಹೂಡಿಕೆ ಮಾಡಲಾಗಿದೆ.

ಶೀರೂರು ಶ್ರೀ ಬಳಿ 13.69 ಲಕ್ಷ ರೂ. ಆಸ್ತಿ
ಉಡುಪಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು 13.69 ಲಕ್ಷ
ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 50,000 ರೂ. ನಗದು, ಕೆನರಾ ಬ್ಯಾಂಕ್‌ ಖಾತೆಯಲ್ಲಿ 20,242ರೂ. ಹೊಂದಿದ್ದು, 98,800 ರೂ. ಮೌಲ್ಯದ ಬ್ಯಾಂಕ್‌ ಶೇರುಗಳನ್ನು ಹಾಗೂ 12 ಲಕ್ಷ ರೂ. ಮೌಲ್ಯದ 400 ಗ್ರಾಂ ಆಭರಣ ಹೊಂದಿರುವುದಾಗಿ ಘೋಷಿಸಿದ್ದಾರೆ. ಯಾವುದೇ ಸಾಲ ಬಾಕಿ ಇಲ್ಲ, ಸ್ಥಿರಾಸ್ತಿ ಇಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next