Advertisement

ಚರ್ಚೆ ಮೂಲಕ ಟಿಕೆಟ್‌ ಹಂಚಿಕೆ ಸಮಸ್ಯೆ ಪರಿಹಾರ 

01:14 AM Feb 22, 2019 | Team Udayavani |

ಗದಗ: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕನಿಷ್ಠ 12 ಕ್ಷೇತ್ರಗಳನ್ನು ಬಿಟ್ಟು ಕೊಡಬೇಕೆಂದು ಜೆಡಿಎಸ್‌ ಬೇಡಿಕೆ ಇಟ್ಟಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕೊಡು ಕೊಳ್ಳುವಿಕೆ ಸಾಮಾನ್ಯವಾಗಿದ್ದು, ಯಾವುದನ್ನೂ ನಿದಿìಷ್ಟವಾಗಿ ಹೇಳ ಲಾಗದು ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್‌ ಹಂಚಿಕೆಯಲ್ಲಿ ಹಾಲಿ ಸಂಸದರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಎಚ್‌.ಡಿ. ದೇವೇಗೌಡ, ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಸೇರಿ ಅನೇಕ ಹಿರಿಯರು ಚರ್ಚೆ ಮೂಲಕ ನಿರ್ಧರಿಸಲಿದ್ದಾರೆ ಎಂದರು.

Advertisement

ಎಂ.ಬಿ.ಪಾಟೀಲ ದಾರಿ ತಪ್ಪಿ ಗೃಹ ಸಚಿವರಾಗಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ. ನಾನು ದಾರಿ ತಪ್ಪಿ ಗೃಹ ಸಚಿವನಾಗಿಲ್ಲ. ಸಂವಿಧಾನ ವನ್ನೇ ಬದಲಾಯಿಸಬೇಕೆಂದು ಮಾತನಾಡುತ್ತಿರುವ ಅನಂತಕುಮಾರ ಹೆಗಡೆ ದಾರಿ ತಪ್ಪಿದ್ದಾರೆ. ಕಾರವಾರದ ಜನರು ಅನಂತಕುಮಾರ್‌ ಅವರನ್ನೇ ಬದಲಾಯಿಸಬೇಕು ಎನ್ನುವ ಮೂಲಕ ತಿರುಗೇಟು ನೀಡಿದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಧಾರ್ಮಿಕ ಸೇವೆಯಲ್ಲಿ ತೊಡಗಿರುವ ಡಾ. ವೀರೇಂದ್ರ ಹೆಗ್ಗಡೆ ಅವರು ಮೌಲ್ಯಯುತ ಚಿಂತನೆಗಳಿಂದ ಸಮಾಜದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ, ಹೆಗಡೆ ಎಂಬ ಪದಕ್ಕೆ ಅನಂತಕುಮಾರ ಹೆಗಡೆ ಅಪವಾದ. ಅವರಿಗೆ ಅಭಿವೃದಿಟಛಿ ವಿಷಯಗಳು ಬೇಕಿಲ್ಲ. ನಾವು ಮಾಡಿರುವ ಅಭಿವೃದ್ದಿ  ಕಾರ್ಯಗಳಲ್ಲಿ ಶೇ.5ರಷ್ಟೂ ಮಾಡಿಲ್ಲ. ಈ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next