Advertisement

ಬಹು ಗ್ರಾಮದಿಂದ ಘನ ತ್ಯಾಜ್ಯಕ್ಕೆ ಪರಿಹಾರ

12:29 PM Nov 07, 2020 | Suhan S |

ಬೆಂಗಳೂರು: ಘನತ್ಯಾಜ್ಯ ನಿರ್ವಹಣೆ ಸವಾಲಿಗೆ ಪರಿಹಾರವಾಗಿ “ಸ್ವಚ್ಛ ಭಾರತ ಮಿಷನ್‌ ಯೋಜನೆ’ಯಡಿ “ಬಹುಗ್ರಾಮ ಘನತ್ಯಾಜ್ಯ ನಿರ್ವಹಣಾ ಘಟಕ ‘ಸ್ಥಾಪನೆಗೆ ಬೆಂಗಳೂರು ನಗರ ಜಿಪಂ ಮುಂದಾಗಿದೆ. ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ಎದುರಾಗಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಭವಿಷ್ಯದಲ್ಲಿ ಬೆಂಗಳೂರುನಗರ ಜಿಪಂಗೂ ಎದುರಾಗದಿರಲಿ ಎಂಬ ನಿಟ್ಟಿನಲ್ಲಿ “ಬಹುಗ್ರಾಮ ಘನತ್ಯಾಜ್ಯ ನಿರ್ವಹಣಾ ಘಟಕ’ ಯೋಜನೆ ಜಾರಿಗೆ ತೀರ್ಮಾನಿಸಲಾಗಿದೆ.

Advertisement

ಯಲಹಂಕ ತಾಲೂಕಿನ ಬೆಟ್ಟಹಲಸೂರು ಮತ್ತು ಮೀನಕುಂಟೆ ಗ್ರಾಪಂ ವ್ಯಾಪ್ತಿಯ ಸುಮಾರು ಹದಿನೈದು ಗ್ರಾಮಗಳನ್ನು ಕೇಂದ್ರೀಕರಿಸಿ ಬೆಟ್ಟಹಲಸೂರಿನಲ್ಲಿ ಶೀಘ್ರದಲ್ಲೇ ಪ್ರಯೋಗಿಕವಾಗಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯಾಗಲಿದೆ. ಇದು ಯಶಸ್ವಿಯಾದ ನಂತರ ಇತರೆಡೆಯೂ ಸ್ಥಾಪಿಸುವ ಚಿಂತನೆಯಿದೆ. ತಿರುಪತಿಗೆ ಭೇಟಿ: ಆಂಧ್ರಪ್ರದೇಶದ ತಿರುಪತಿಯಲ್ಲಿ ಈಗಾಗಲೇ ಹಸಿರು ದಳ ಸಂಸ್ಥೆ ಬಹುಗ್ರಾಮಗಳನ್ನು ಕೇಂದ್ರೀಕರಿಸಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಿ, ನಿರ್ವಹಣೆ ಮಾಡುತ್ತಿದೆ. ಅದು ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುವುದನ್ನು ಅರಿಯಲು ಬೆಟ್ಟಹಲಸೂರು ಗ್ರಾಪಂ ಅಧ್ಯಕ್ಷೆ ರಜನಿ ಪ್ರಕಾಶ್‌ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಒಳಗೊಂಡ 35 ಮಂದಿ ನಿಯೋಗ ಕಲಿಕಾ ಪ್ರವಾಸವನ್ನು ಕೈಗೊಂಡಿತ್ತು. ತಿರುಪತಿಗೆ ಭೇಟಿ ನೀಡಿ ಘಟಕದ ನಿರ್ಮಾಣ ಮತ್ತದರ ಕಾರ್ಯ ನಿರ್ವಹಣೆಯ ಬಗ್ಗೆ ಅಲ್ಲಿನ ಹಿರಿಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಬಳಿಕ ಈಗ ಬಹುಗ್ರಾಮ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ ಹೆಜ್ಜೆಯಿರಿಸಲಾಗಿದೆ.

2 ಎಕರೆಪ್ರದೇಶದಲ್ಲಿ ನಿರ್ಮಾಣ:ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಎದುರಾಗಿದ್ದ ಜಾಗದ ಸಮಸ್ಯೆ ನಿವಾರಿಸಿ ಯಲಹಂಕ ತಾಲೂಕಿನ ಬೆಟ್ಟಹಲಸೂರು ಗ್ರಾಪಂನಲ್ಲಿ 2 ಎಕರೆ ಜಾಗ ಗುರುತಿಸಲಾಗಿದೆ ಎಂದು ನಗರ ಜಿಪಂ ಸ್ವಚ್ಛ  ಭಾರತ್‌ ಮಿಷನ್‌ (ಗ್ರಾಮೀಣ)ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭವಿಷ್ಯದಲ್ಲಿ ಉಂಟಾಗಬಹುದಾದ ಕಸದ ಸಮಸ್ಯೆ ಅರಿತು ಈಗಾಗಲೇ ಹಲವು ಯೋಜನೆಗಳ ‌ನ್ನು ರೂಪಿಸಲಾಗಿದೆ.ಪ್ರಾಯೋಗಿಕವಾಗಿಬೆಟ್ಟಹಲಸೂರಿನಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಇದರ ಯಶಸ್ಸಿನ ಬಳಿಕ ಮತ್ತಷ್ಟು ಗ್ರಾಪಂಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ನಗರ ಜಿಪಂ ಉಪ ಕಾರ್ಯದರ್ಶಿ ಡಾ.ಸಿದ್ದರಾಮಯ್ಯ ತಿಳಿಸಿದ್ದಾರೆ.

9 ಲಕ್ಷ ರೂ.ಅನುದಾನ :  ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ)ಯೋಜನೆಯಡಿ “ಬಹುಗ್ರಾಮ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ’ಗೆ 9 ಲಕ್ಷ ರೂ.ಅನುದಾನ ನೀಡಲಾಗುವುದು. ಉಳಿದ ಅನುದಾನವನ್ನು ಎಂಬೆಸಿ ಕಂಪನಿಯು ಸಾಮಾಜಿಕ ಹೊಣೆಗಾರಿಕೆ

Advertisement

ನಿಧಿಯಿಂದ ಬರಿಸಲಿದೆ. ಹಸಿ ಕಸವನ್ನು ಗೊಬ್ಬರವನ್ನಾಗಿ ಮಾಡಿ ಅದನ್ನು ರೈತರಿಗೆ ನೀಡುವ ಆಲೋಚನೆಯೂ ಜಿಲ್ಲಾಡಳಿತಕ್ಕಿದೆ ಎಂದು ನಗರ ಜಿಲ್ಲೆಯ ಸ್ವಚ್ಛ ಭಾರತ್‌ ಮಿಷನ್‌ನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಿರುಪತಿಯಬಳಿ “ಬಹುಗ್ರಾಮಘನ ತ್ಯಾಜ್ಯ ನಿರ್ವಹಣಾ ಘಟಕ’ ತಲೆಎತ್ತಿದ್ದು, ಅದು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಅದೇ ಮಾದರಿಯಲ್ಲಿ ಸುಮಾರು 15 ಗ್ರಾಮಗಳನ್ನುಕೇಂದ್ರೀಕರಿಸಿ ಬೆಟ್ಟಹಲಸೂರಿನಲ್ಲಿ ಘಟಕ ನಿರ್ಮಾಣಮಾಡಲಾಗವುದು. ರಜನಿ ಪ್ರಕಾಶ್‌, ಬೆಟ್ಟಹಲಸೂರು ಗ್ರಾಪಂ ಅಧ್ಯಕ್ಷ

ಕಸದ ಸಮಸ್ಯೆ ನಿವಾರಿಸಲು ಸ್ವಚ್ಛ ಭಾರತ್‌ ಮಿಷನ್‌ಯೋಜನೆಯಡಿ ಬಹು ಗ್ರಾಮ ಘನ ತ್ಯಾಜ್ಯ ನಿರ್ವಹಣಾ ಘಟಕಯೋಜನೆಯೂ ಸೇರಿದೆ.ಯಲಹಂಕ ತಾಲೂಕಿನ ಬೆಟ್ಟಲಸೂರಿನಲ್ಲಿ ಶೀಘ್ರದಲ್ಲೇ ಘಟಕ ನಿರ್ಮಾಣ ಕಾರ್ಯ ನಡೆಯಲಿದೆ. ಕೆ.ಶಿವರಾಮೇಗೌಡ, ನಗರ ಜಿಪಂ ಸಿಇಒ

 

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next