Advertisement
ನಗರದ ಬ್ಯಾಂಕ್‌ಗಳಲ್ಲಿ ಗ್ರಾಹಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೇ ಬ್ಯಾಂಕ್ ಸಿಬಂದಿ ನಿರ್ಲಕ್ಷ್ಯ ವಹಿಸುವುದು ಕಂಡುಬಂದಿದೆ. ಇದರಿಂದಾಗಿ ಬ್ಯಾಂಕಿಂಗ್ ಸೇವೆಗಳು ಜನ ಸಾಮಾನ್ಯರಿಗೆ ಸಿಗುವುದು ಕಷ್ಟವಾಗಿದೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಶೈಲೇಶ್ ಕುಮಾರ್ ಅವರು ಸಭೆಯಲ್ಲಿ ದೂರಿದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳು ಮತ್ತು ಲೀಡ್ ಬ್ಯಾಂಕ್‌ಗೆ ವರದಿ ಮಾಡಲು ಸಭೆಯಲ್ಲಿ ತೀರ್ಮಾನಿಸಿತು.
Related Articles
Advertisement
ಕಟ್ಟಡ ದರ್ಗಾರೋಡ್‌ನಲ್ಲಿರುವ ಕಟ್ಟಡ, ರಸ್ತೆಯಲ್ಲಿ ನಿಯಮ ಮೀರಿ ಆವರಿಸಿ ಕೊಂಡಿದೆ. ಈ ಕುರಿತು ಯಾವ ಕ್ರಮ ತೆಗೆದು ಕೊಂಡಿದ್ದೀರಿ ಎಂಬ ಸದಸ್ಯೆ ವಂದನಾ ಕಾಮತ್ ಪ್ರಶ್ನೆಗೆ, ಈಗಾಗಲೇ ನೋಟಿಸ್ ನೀಡಲಾಗಿದ್ದು, ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ರಸ್ತೆ ಬ್ಯಾರಿಕೇಡರ್
ಬಪ್ಪನಾಡು ಮತ್ತು ಆದಿದನ್ ಬಳಿ ಹೆದ್ದಾರಿಯಲ್ಲಿ ಹಾಕಿರುವ ಟ್ರಾಫಿಕ್ ಬ್ಯಾರಿಕೇಡರ್ ಅಫಘಾತಕ್ಕೆ ಕಾರಣವಾಗಿದೆ ಇದನ್ನು ತೆರವುಗೊಳಿಸಿ ಎಂದು ಸದಸ್ಯ ಬೋಳ ಬಾಲಚಂದ್ರ ಕಾಮತ್ ಸಭೆಗೆ ತಿಳಿಸಿದಾಗ ಪೊಲೀಸರಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
ರೇಶನ್‌ಗೆ ತೊಂದರೆ
ಮೂಲ್ಕಿ ವಿಜಯ ಸನ್ನಿಧಿ ಕಟ್ಟಡ ಬಳಿ ನಿಯಮ ಮೀರಿ ವಾಹನ ಪಾರ್ಕ್ ಮಾಡಲಾಗುತ್ತಿದ್ದು, ಇದರಿಂದ ಸಹಕಾರಿ ಸಂಘದ ರೇಶನ್ ತರುವ ಜನರಿಗೆ ತೊಂದರೆಯಾಗಿದೆ ಎಂದು ಸದಸ್ಯ ನರಸಿಂಹ ಪೂಜಾರಿ ಆಗ್ರಹಿಸಿದರು.
ಮೊದಲು ಬಸ್ ನಿಲ್ದಾಣ
ಮಾಡಿ ಮೂಡುಬಿದಿರೆಗೆ ಮುಖ್ಯಮಂತ್ರಿಗಳು ಆಗಮಿಸಿದಾಗ ನಗರದ ಬೆಳವಣಿಗೆಗೆ ಬೇಡಿಕೆ ಸಲ್ಲಿಸಿಲ್ಲ. ನನೆಗುದಿಗೆ ಬಿದ್ದಿರುವ ಬಸ್ ನಿಲ್ದಾಣ ಮಾಡಿ, ಅನಂತರ ಇತರ ಸರಕಾರಿ ಬಂಗಲೆ ಮಾಡಿ ಎಂದು ಸದಸ್ಯರಾದ ಪುತ್ತು ಬಾವಾ, ಯೋಗೀಶ್ ಕೋಟ್ಯಾನ್ ಸಭೆಯಲ್ಲಿ ಆಗ್ರಹಿಸಿದರು.
ಮಳೆಗಾಲ ಆರಂಭವಾಗಲಿದೆ ಸದಸ್ಯರು ತಮ್ಮ ವಾರ್ಡ್‌ನ ತುರ್ತು ಕೆಲಸಗಳ ಬಗ್ಗೆ ಮಾಹಿತಿ ನೀಡಿ ಆಡಳಿತದೊಂದಿಗೆ ಸಮಾನ ಮನಸ್ಸಿನಿಂದ ಸಹಕರಿಸುವಂತೆ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಕೋರಿದರು.