Advertisement

ಮೂರು ಗ್ರಾಮಗಳ ತ್ಯಾಜ್ಯ ಸಂಗ್ರಹಣೆಗೆ ಆದ್ಯ ಗಮನ 

08:14 PM Sep 30, 2021 | Team Udayavani |

ಬೆಳ್ತಂಗಡಿ: ಗ್ರಾಮಗಳ ಸ್ವಚ್ಛತೆಗೆ ಪ್ರಾಮುಖ್ಯ ನೀಡುವ ಸಲುವಾಗಿ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಕಡಿರುದ್ಯಾವರ ಗ್ರಾ.ಪಂ. ವ್ಯಾಪ್ತಿಯ ಮೈಂದಡ್ಕ ಎಂಬಲ್ಲಿ ಘನತ್ಯಾಜ್ಯ ಘಟಕ ಲೋಕಾರ್ಪಣೆಗೆ ಸಿದ್ಧವಾಗಿದೆ.

Advertisement

ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಘನತ್ಯಾಜ್ಯ ಘಟಕ ಸ್ಥಾಪನೆಗೆ ಈಗಾಗಲೆ ಜಾಗ ಕಾಯ್ದಿರಿಸಲು ಆಯಾಯ ಗ್ರಾ.ಪಂ.ಗೆ ಸರಕಾರ ಸೂಚಿಸಿದೆ. ಈ ಮಧ್ಯೆ ಪಟ್ಟಣಕ್ಕೆ ಹೊಂದಿಕೊಂಡಿರುವ ಅಥವಾ ಆದಾಯ ಹೆಚ್ಚಿರುವ ಗ್ರಾ.ಪಂ.ಗಳಲ್ಲಿ ಈಗಾಗಲೆ ತ್ಯಾಜ್ಯ ಘಟಕಗಳು ನಿರ್ಮಾಣವಾಗಿದೆ. ಆದರೆ ತಾಲೂಕಿನ ಕಟ್ಟಕಡೆಯ ಗ್ರಾಮಗಳು ತ್ಯಾಜ್ಯ ನಾರ್ಮಾಣ ಘಟಕ್ಕೆ ಮುಂದಾಗಿರುವುದು ಗಮನಾರ್ಹ.

ಸ್ವತ್ಛಭಾರತ ಮಿಷನ್‌ ಯೋಜನೆಯಡಿ ಮಿತ್ತಬಾಗಿಲು, ಮಲವಂತಿಗೆ ಗ್ರಾ.ಪಂ. ಸಹಭಾಗಿತ್ವದೊಂದಿಗೆ ಕಡಿರುದ್ಯಾವರದ ಮೈಂದಡ್ಕ ಎಂಬಲ್ಲಿ ಕಾಯ್ದಿರಿಸಿದ 87 ಸೆಂಟ್ಸ್  ಸ್ಥಳದಲ್ಲಿ ಘನತ್ಯಾಜ್ಯ ಘಟಕವೊಂದನ್ನು ಸ್ಥಾಪಿಸಲಾಗಿದೆ.

ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ಎರ್ಮಾಯಿ, ಬಂಡಾಜೆ, ದಿಡುಪೆ ಜಲಪಾತ ಸಹಿತ, ಪಶ್ಚಿಮಘಟ್ಟ ತಪ್ಪಲು ವೀಕ್ಷಣೆಗೆ ಇದೇ ಗ್ರಾಮಗಳಾಗಿ ಕ್ರಮಿಸಬೇಕಿದೆ. ಭವಿಷ್ಯದ ದೃಷ್ಟಿಕೋನದಲ್ಲಿ ತ್ಯಾಜ್ಯ ಈ ಗ್ರಾಮಗಳಿಗೆ ಬಹುದೊಡ್ಡ ಸಮಸ್ಯೆಯಾಗಿ ಎದುರಾಗುವ ಸಾಧ್ಯತೆ ಮನಗಂಡು ಘನತ್ಯಾಜ್ಯ ಘಟಕ ಸ್ಥಾಪಿಸಲಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚುವರಿ ಕಾಮಗಾರಿಗಾಗಿ 9 ಲಕ್ಷ ರೂ. ವರೆಗೆ ವಿನಿಯೋಗಿಸಬಹುದಾಗಿರುವುದರಿಂದ ಮುಂದಿನ ದಿನಗಳಲ್ಲಿ ದ್ರವ ತ್ಯಾಜ್ಯ ಘಟಕ ಸಹಿತ ನೀರಿನ ವ್ಯವಸ್ಥೆ, ಹೆಚ್ಚುವರಿ ಶೆಡ್‌, ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ನಿರ್ಮಿಸಲು ಗ್ರಾ.ಪಂ. ಚಿಂತನೆ ನಡೆಸಿದೆ.

Advertisement

ತ್ಯಾಜ್ಯ ಮುಕ್ತ ಗ್ರಾಮ:

ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದಲ್ಲಿ ಅಥವಾ ಅಂಗಡಿ ಮುಂಭಾಗ, ಮನೆಮುಂದೆ ತ್ಯಾಜ್ಯ ಕಂಡುಬಂದಲ್ಲಿ ದಂಡ ವಿಧಿಸುವ ಪ್ರಕ್ರಿಯೆ, ಅಗತ್ಯ ಇದ್ದಲ್ಲಿ ಸಿಸಿ ಕೆಮರಾ ಅಳವಡಿಸುವ ಮುಖೇನ ತ್ಯಾಜ್ಯ ಮುಕ್ತ ಗ್ರಾಮವಾಗಿಸುವ ಸಂಕಲ್ಪ ಸ್ಥಳೀಯಾಡಳಿತದ್ದಾಗಿದೆ.

ಗೇರು ಸಸಿ:

ಸದ್ಯ ವಾರಕ್ಕೊಂದು ದಿನ ಕಸ ಸಂಗ್ರಹ ಪ್ರಕ್ರಿಯೆ ನಡೆಯಲಿದ್ದು, ತಾತ್ಕಾಲಿಕವಾಗಿ ಖಾಸಗಿ ವಾಹನ ನಿಯೋಜಿಸಲಾಗಿದೆ. ಬೇಡಿಕೆ ಪರಿಗಣಿಸಿ ಸ್ವಂತ ವಾಹನ ಖರೀದಿಸುವ ಕುರಿತು ಕ್ರಿಯಾ ಯೋಜನೆ ರೂಪಿಸಲಾಗುವುದು. ಗ್ರಾ.ಪಂ.ಗೆ ಆದಾಯ ತರುವ ದೃಷ್ಟಿಯಿಂದ ತ್ಯಾಜ್ಯ ಘಟಕ ಸುತ್ತ ಖಾಲಿ ಸ್ಥಳದಲ್ಲಿ ಗೇರು ಸಸಿ ನೆಡಲು ಉದ್ದೇಶಿಸಲಾಗಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ತಿಳಿಸಿ¨ªಾರೆ.

ಅ.2 ರಂದು ಲೋಕಾರ್ಪಣೆ:

ಜಿಲ್ಲಾ ಪಂಚಾಯತ್‌ , ತಾಲೂಕು ಪಂಚಾಯತ್‌ , ಮತ್ತು ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ತಾಲೂಕು ಮಟ್ಟದ ಕಾರ್ಯಕ್ರಮವಾಗಿ ಕಡಿರುದ್ಯಾವರ ಗ್ರಾ.ಪಂ. ತ್ಯಾಜ್ಯ ಘಟಕವು ಅ.2 ರಂದು ಲೋಕಾರ್ಪಣೆಗೊಳ್ಳಲಿದೆ.

ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ತ್ಯಾಜ್ಯ ಘಟಕ ನಿರ್ಮಿಸಲು ಆದ್ಯತೆ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು, ಗ್ರಾಮಸ್ಥರೆಲ್ಲರ ಸಹಕಾರದಿಂದ ಇನ್ನಷ್ಟು ಯೋಜನೆ ರೂಪಿಸಲಾಗುವುದು. -ಅಶೋಕ್‌, ಅಧ್ಯಕ್ಷರು, ಕಡಿರುದ್ಯಾವರ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next