Advertisement

ಘನತ್ಯಾಜ್ಯ ನಿರ್ವಹಣೆ: ಯಶ ಕಂಡ ಬಸ್ರೂರು ಗ್ರಾ.ಪಂ.

01:00 AM Feb 03, 2019 | Harsha Rao |

ಬಸ್ರೂರು: ಘನ ತ್ಯಾಜ್ಯ ನಿರ್ವಹಣೆಯಲ್ಲಿ ಬಸ್ರೂರು ಗ್ರಾ.ಪಂ. ಈಗ ಯಶಸ್ಸು ಕಾಣುತ್ತಿದೆ. 
ಪೇಟೆಗಳಲ್ಲಿನ ಕಸ, ಹೋಟೆಲ್‌, ಅಂಗಡಿ, ತರಕಾರಿ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಗ್ರಹಿಸಲಾಗುತ್ತಿದ್ದು, ಸಮರ್ಪಕ ವಿಲೇವಾರಿಯನ್ನೂ ನಡೆಸಲಾಗುತ್ತಿದೆ.  

Advertisement

ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸಲಾಗುತ್ತಿದ್ದು, ಸ್ವತ್ಛತೆಯ ಅರಿವಿಗೆ ಹಲವಾರು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. 

ಗ್ರಾಮಸ್ಥರು ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ಶೇಖರಿಸಿಟ್ಟು ಗ್ರಾ.ಪಂ.ಗೆ ನೀಡವಂತೆ ಮನವಿ ಮಾಡಲಾಗಿದೆ.

ಸ್ವತ್ಛತೆಗೆ ಸಹಕಾರಿ
ಬಸ್ರೂರು ಗ್ರಾಮದ ತ್ಯಾಜ್ಯವನ್ನು ಮೂರು ತಿಂಗಳಿಂದ ಬೇರೆ ಬೇರೆಯಾಗಿ ವಿಂಗಡಿಸಿ ಅದನ್ನು ಮರುಬಳಕೆಗೆ ಕಳಿಸುತ್ತಿದ್ದೇವೆ. ವಾಹನದ ವ್ಯವಸ್ಥೆ ಲಭ್ಯವಾದರೆ ಗ್ರಾಮದ ಸ್ವತ್ಛತೆಗೆ ಮತ್ತಷ್ಟು ಸಹಕಾರಿಯಾಗುತ್ತದೆ.
– ನಾಗರಾಜ ಗಾಣಿಗ ಸಂತೆಕಟ್ಟೆ, ಅಧ್ಯಕ್ಷರು, ಗ್ರಾ.ಪಂ. ಬಸ್ರೂರು

ಇನ್ನೆಲ್ಲೂ ಇಲ್ಲ
ಗ್ರಾಮದ ಸ್ವತ್ಛತೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಈ ರೀತಿಯ ತ್ಯಾಜ್ಯ ನಿರ್ವಹಣಾ ಘಟಕವು ಹಂಗ್ಲೂರು ಗ್ರಾಮ ಬಿಟ್ಟರೆ ಆಸುಪಾಸಿನ ಬೇರೆ ಯಾವ ಗ್ರಾಮದಲ್ಲೂ ನಡೆಯುತ್ತಿಲ್ಲ.
– ರಾಮಕೃಷ್ಣ, ಸ್ಥಳೀಯ ನಿವಾಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next